ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರಶಕ್ತಿ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆ: ನೆಕ್ಸ್‌ವೇಫ್‌ನಲ್ಲಿ ರಿಲಯನ್ಸ್ ಬೃಹತ್ ಹೂಡಿಕೆ

|
Google Oneindia Kannada News

ಫ್ರೀಬರ್ಗ್‌(ಜರ್ಮನಿ), ಅಕ್ಟೋಬರ್ 13: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ರಿಲಯನ್ಸ್) ಅಂಗ ಸಂಸ್ಥೆ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್‌ಇಎಸ್‌ಎಲ್), ತನ್ನ 39 ಮಿಲಿಯನ್ ಯುರೋ (45 ಮಿಲಿಯನ್ ಡಾಲರ್) ಮೌಲ್ಯದ ಸೀರೀಸ್ ಸಿ ಹಣಕಾಸು ಸುತ್ತಿನ ಮೊದಲ ಹಂತದಲ್ಲಿ 25 ಮಿಲಿಯನ್ ಯುರೋ (29 ಮಿಲಿಯನ್ ಡಾಲರ್) ಹೂಡಿಕೆ ಮಾಡುವ ಮೂಲಕ ಮುಂಚೂಣಿ ಹೂಡಿಕೆದಾರನಾಗಿ ಸೇರ್ಪಡೆಗೊಂಡಿದೆ ಎಂದು ಜರ್ಮನಿ ಮೂಲದ ನೆಕ್ಸ್‌ವೇಫ್ ಜಿಎಂಬಿಎಚ್ (ನೆಕ್ಸ್‌ವೇಫ್) ಪ್ರಕಟಿಸಿದೆ.

ಫ್ರೀಬರ್ಗ್‌ನಲ್ಲಿರುವ ಮಾದರಿ ಘಟಕಗಳಲ್ಲಿ ನೆಕ್ಸ್‌ವೇಫ್‌ನ ಸೌರಶಕ್ತಿ ಫೋಟೊವೋಲ್ಟಾಯಿಕ್ ಉತ್ಪನ್ನಗಳ ವಾಣಿಜ್ಯಾತ್ಮಕ ಅಭಿವೃದ್ಧಿಯನ್ನು ಪೂರ್ಣಗೊಳಿಸುವುದು ಸೇರಿದಂತೆ, ನೆಕ್ಸ್‌ವೇಫ್‌ನ ಉತ್ಪನ್ನ ಹಾಗೂ ತಂತ್ರಜ್ಞಾನ ಅಭಿವೃದ್ಧಿಯನ್ನು ಚುರುಕುಗೊಳಿಸಲು ರಿಲಯನ್ಸ್ ಮಾಡಿರುವ ಹೂಡಿಕೆ ನೆರವಾಗಲಿದೆ.

ಅಮೆರಿಕದ ಸಂಸ್ಥೆ ಮೇಲೆ ರಿಲಯನ್ಸ್, ಬಿಲ್ ಗೇಟ್ಸ್ ಸಂಸ್ಥೆ ಹೂಡಿಕೆಅಮೆರಿಕದ ಸಂಸ್ಥೆ ಮೇಲೆ ರಿಲಯನ್ಸ್, ಬಿಲ್ ಗೇಟ್ಸ್ ಸಂಸ್ಥೆ ಹೂಡಿಕೆ

ಅಧಿಕ ದಕ್ಷತೆಯ 'ಗ್ರೀನ್ ಸೋಲಾರ್ ವೇಫರ್ಸ್'ಗೆ ಸಂಬಂಧಿಸಿದ ಜಂಟಿ ತಂತ್ರಜ್ಞಾನ ಅಭಿವೃದ್ಧಿ ಹಾಗೂ ವಾಣಿಜ್ಯಾತ್ಮಕತೆಯನ್ನು ಒದಗಿಸುವ ಉದ್ದೇಶದಿಂದ ರಿಲಯನ್ಸ್ ಮತ್ತು ನೆಕ್ಸ್‌ವೇಫ್, ಭಾರತೀಯ ಕಾರ್ಯತಂತ್ರ ಪಾಲುದಾರಿಕೆ ಒಪ್ಪಂದಕ್ಕೂ ಸಹಿ ಹಾಕಿವೆ.

ಭಾರಿ ಮೊತ್ತಕ್ಕೆ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಖರೀದಿಸಿದ ರಿಲಯನ್ಸ್ಭಾರಿ ಮೊತ್ತಕ್ಕೆ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಖರೀದಿಸಿದ ರಿಲಯನ್ಸ್

ಈ ಪಾಲುದಾರಿಕೆಯ ಮೂಲಕ ರಿಲಯನ್ಸ್, ನೆಕ್ಸ್‌ವೇಫ್ ಸ್ವಾಮ್ಯದ ತಂತ್ರಜ್ಞಾನಗಳಿಗೆ ಪ್ರವೇಶಾವಕಾಶ ಪಡೆದುಕೊಂಡಿದ್ದು, ನೆಕ್ಸ್‌ವೇಫ್ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲಿ ಬೃಹತ್ ಪ್ರಮಾಣದ ವೇಫರ್ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.

 ಅಧ್ಯಕ್ಷ ಮುಕೇಶ್ ಅಂಬಾನಿ

ಅಧ್ಯಕ್ಷ ಮುಕೇಶ್ ಅಂಬಾನಿ

ಈ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ, 'ನಮ್ಮ ಎಲ್ಲ ಉದ್ಯಮಗಳಲ್ಲಿಯೂ ತಂತ್ರಜ್ಞಾನದಲ್ಲಿ ಯಾವಾಗಲೂ ಮುಂಚೂಣಿಯಲ್ಲಿ ಇರುವುದನ್ನು ರಿಲಯನ್ಸ್ ಬಯಸುತ್ತದೆ. ನೆಕ್ಸ್‌ವೇಫ್ ಜತೆಗಿನ ನಮ್ಮ ಪಾಲುದಾರಿಕೆ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಭಾರತದ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಕಡಿಮೆ ವೆಚ್ಚದ ಸೌರಶಕ್ತಿ ಇಂಧನವನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿದ್ದೇವೆ. ನೆಕ್ಸ್‌ವೇಫ್‌ನಲ್ಲಿನ ನಮ್ಮ ಹೂಡಿಕೆಯು ಭಾರತದ ಗ್ರೀನ್ ಎನರ್ಜಿ ಪರಿವರ್ತನೆಯನ್ನು ವೃದ್ಧಿಸಲು ಮತ್ತು ಫೋಟೊವೊಲ್ಟಾಯಿಕ್ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ನಾಯಕನ ಸ್ಥಾನದಲ್ಲಿ ನಿಲ್ಲಿಸಲು ಮಹತ್ವದ ಹೆಜ್ಜೆ ಇರಿಸಿರುವುದರ ಸಂಕೇತವಾಗಿದೆ. ನೆಕ್ಸ್‌ವೇಫ್‌ನ ವಿನೂತನ ಅತಿ ತೆಳುವಾದ ವೇಫರ್‌, ಸೋಲಾರ್ ಉತ್ಪಾದಕರಿಗೆ ಹಾಲಿ ಇರುವ ಫೋಟೊವೋಲ್ಟಾಯಿಕ್ ತಂತ್ರಜ್ಞಾನಗಳಿಗಿಂತಲೂ ಮಹತ್ವದ ಪ್ರಯೋಜನ ಒದಗಿಸಲಿದೆ. ಜತೆಗೆ ಭಾರತ ಹಾಗೂ ಜಾಗತಿಕ ಮಟ್ಟದಲ್ಲಿನ ಗ್ರಾಹಕರಿಗೆ ಸೌರಶಕ್ತಿ ಇಂಧನದ ಲಾಭಗಳನ್ನು ಹೆಚ್ಚು ಬೇಗನೆ ಮತ್ತು ಇನ್ನಷ್ಟು ಪರಿಣಾಮಕಾರಿಯಾಗಿ ಅರಿತುಕೊಳ್ಳಲು ನೆರವಾಗಲಿದೆ' ಎಂದು ಹೇಳಿದ್ದಾರೆ.

 ನೆಕ್ಸ್‌ವೇಫ್ ಸಿಇಒ ಡೇವೊರ್ ಸುತಿಜಾ

ನೆಕ್ಸ್‌ವೇಫ್ ಸಿಇಒ ಡೇವೊರ್ ಸುತಿಜಾ

'ನೆಕ್ಸ್‌ವೇಫ್‌ನೊಂದಿಗಿನ ಕಾರ್ಯತಂತ್ರ ಪಾಲುದಾರಿಕೆ ಮೂಲಕ ರಿಲಯನ್ಸ್‌, ಭಾರತಕ್ಕೆ ಸೋಲಾರ್ ವೇಫರ್ ಆವಿಷ್ಕಾರವನ್ನು ತರಬಹುದಾಗಿದೆ. ಜತೆಗೆ ಏಕ ಮೂಲ ಮಾರುಕಟ್ಟೆಯಾಚೆ ಉತ್ಪಾದನೆಯನ್ನು ವಿಸ್ತರಿಸುವುದರೊಂದಿಗೆ ಫೋಟೊವೋಲ್ಟಾಯಿಕ್ ಉತ್ಪಾದಕರ ಜಾಗತಿಕ ಕ್ಷೇತ್ರವನ್ನು ಎತ್ತರಿಸಲಿದೆ' ಎಂದು ನೆಕ್ಸ್‌ವೇಫ್ ಸಿಇಒ ಡೇವೊರ್ ಸುತಿಜಾ ಹೇಳಿದ್ದಾರೆ.

 ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್‌ ಮೇಲೆ ಹೂಡಿಕೆ

ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್‌ ಮೇಲೆ ಹೂಡಿಕೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಸಂಪೂರ್ಣ ಒಡೆತನದ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (RNESL) ಚೀನಾ ನ್ಯಾಷನಲ್ ಬ್ಲೂಸ್ಟಾರ್ ಸಮೂಹದ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್‌ನ 100% ಪಾಲನ್ನು ಖರೀದಿಸಿರುವುದಾಗಿ ಘೋಷಿಸಿದೆ. ಈ ಒಪ್ಪಂದವನ್ನು 771 ಮಿಲಿಯನ್ ಡಾಲರ್‌ ಮೌಲ್ಯಕ್ಕೆ ಸಂಸ್ಥೆ ಖರೀದಿಯಾಗಿದೆ. ಅತ್ಯಂತ ಕಡಿಮೆ ಇಂಗಾಲದ ಹೆಜ್ಜೆಗುರುತಿನೊಂದಿಗೆ ಆರ್‌ಇಸಿ 600ಕ್ಕೂ ಹೆಚ್ಚು ಉಪಯೋಗಿ ಮತ್ತು ವಿನ್ಯಾಸ ಪೇಟೆಂಟ್‌ಗಳನ್ನು ಹೊಂದಿದೆ.

 ಆರ್‌ಇಸಿ ಒಂದು ಬಹುರಾಷ್ಟ್ರೀಯ ಸೌರ ವಿದ್ಯುತ್ ಕಂಪನಿ

ಆರ್‌ಇಸಿ ಒಂದು ಬಹುರಾಷ್ಟ್ರೀಯ ಸೌರ ವಿದ್ಯುತ್ ಕಂಪನಿ

ಆರ್‌ಇಸಿ ಒಂದು ಬಹುರಾಷ್ಟ್ರೀಯ ಸೌರ ವಿದ್ಯುತ್ ಕಂಪನಿಯಾಗಿದೆ. ಕಂಪನಿಯ ಪ್ರಧಾನ ಕಛೇರಿ ನಾರ್ವೆಯಲ್ಲಿದೆ ಮತ್ತು ಅದರ ಕಾರ್ಯಕಾರಿ ಕಚೇರಿಯು ಸಿಂಗಾಪುರದಲ್ಲಿದೆ. ಕಂಪನಿಯು ಉತ್ತರ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ-ಪೆಸಿಫಿಕ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ನಾರ್ವೆಯಲ್ಲಿ ಎರಡು ಮತ್ತು ಸಿಂಗಾಪುರದಲ್ಲಿ ಒಂದು ಉತ್ಪಾದನಾ ಘಟಕಗಳಿವೆ. ಕಂಪನಿಯು ತನ್ನ ತಾಂತ್ರಿಕ ಆವಿಷ್ಕಾರಕ್ಕೆ, ಕೈಗೆಟುಕುವ ಸೌರ ವಿದ್ಯುತ್ ಫಲಕಗಳ ಉತ್ಪಾದನೆಗೆ ಹೆಚ್ಚಿನ ದಕ್ಷತೆಗೆ ಹೆಸರುವಾಸಿಯಾಗಿದೆ. 25 ವರ್ಷಗಳ ಅನುಭವದೊಂದಿಗೆ, ವಿಶ್ವದ ಪ್ರಮುಖ ಸೋಲಾರ್ ಸೆಲ್/ಪ್ಯಾನಲ್ ಮತ್ತು ಪಾಲಿಸಿಲಿಕಾನ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ.

English summary
NexWafe GmbH (NexWafe) announced the induction of Reliance New Energy Solar Limited (RNESL), a wholly owned subsidiary of Reliance Industries Limited (Reliance) as a strategic lead investor in its EUR 39 million ($45 million) Series C financing round with an investment of EUR 25 million ($29 million) in phase one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X