ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಸಂಸ್ಥೆ ಮೇಲೆ ರಿಲಯನ್ಸ್, ಬಿಲ್ ಗೇಟ್ಸ್ ಸಂಸ್ಥೆ ಹೂಡಿಕೆ

|
Google Oneindia Kannada News

ಮುಂಬೈ, ಆಗಸ್ಟ್ 10: ರಿಲಯನ್ಸ್ ಇಂಡಸ್ರ್ಟೀಸ್ ಲಿಮಿಟೆಡ್‌ನ (ಆರ್‌ ಐಎಲ್) ಸಂಪೂರ್ಣ ಒಡೆತನದ ಅಂಗ ಸಂಸ್ಥೆ ರಿಲಯುನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್ಇಎಸ್‌ಎಲ್) ತಾಂತ್ರಿಕ ಹೂಡಿಕೆದಾರರಾದ ಪಾಲ್ಸನ್ ಅಂಡ್ ಕೋ. ಇಂಕ್., ಬಿಲ್ ಗೇಟ್ಸ್ ಹಾಗೂ ಇತರ ಕೆಲವು ಸಂಸ್ಥೆಗಳೊಂದಿಗೆ ಅಮೆರಿಕದ ಮೆಸಾಚುಸೆಟ್ಸ್ ಮೂಲದ ವಿದ್ಯುಚ್ಛಕ್ತಿ ಶೇಖರಣಾ ಸಂಸ್ಥೆ ಅಂಬ್ರಿ ಇಂಕ್‌.ನಲ್ಲಿ ಜಂಟಿಯಾಗಿ 144 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1,071 ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ಸಂಸ್ಥೆಯನ್ನು ವಾಣಿಜ್ಯೀಕರಣಗೊಳಿಸುವ ಮತ್ತು ದೀರ್ಘಾವಧಿ ವಿದ್ಯುಚ್ಛಕ್ತಿ ಶೇಖರಣ ಸಾಧನ ಉದ್ಯಮದಲ್ಲಿ ಜಾಗತಿಕವಾಗಿ ಬೆಳೆಯಲು ಈ ಹೂಡಿಕೆ ನೆರವಾಗಲಿದೆ. ಅಂಬ್ರಿ ಸಂಸ್ಥೆಯ 42.3 ಮಿಲಿಯನ್ (4.23 ಕೋಟಿ) ಆದ್ಯತಾ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್ ಎನ್ಇಎಸ್ಎಲ್ 50 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 372 ಕೋಟಿ ರೂಪಾಯಿ) ಹೂಡಿಕೆ ಮಾಡಲಿದೆ.

4-24 ಗಂಟೆಗಳವರೆಗೆ ಬಾಳಿಕೆ ಬರುವ ವಿನ್ಯಾಸ ಮತ್ತು ಹಕ್ಕುಸ್ವಾಮ್ಯ ಪಡೆದ ತಂತ್ರಜ್ಞಾನದ ನೆರವಿನಿಂದ ಅಂಬ್ರಿಯ ದೀರ್ಘಾವಧಿ ವಿದ್ಯುಚ್ಛಕ್ತಿ ಶೇಖರಣ ವ್ಯವಸ್ಥೆಯು ವೆಚ್ಚವನ್ನು ತಗ್ಗಿಸಲಿದೆ ಮತ್ತು ಗ್ರಿಡ್ ಮಟ್ಟದಲ್ಲಿ ಬಳಸುವ ಲೀಥಿಯಂ-ಐಯಾನ್ ಬ್ಯಾಟರಿ ಸಾಧನಗಳ ದೀರ್ಘ ಬಾಳಿಕೆ ಮತ್ತು ಸುರಕ್ಷತಾ ಸವಾಲುಗಳನ್ನು ನಿವಾರಿಸಲಿದೆ. ವಿದ್ಯುಚ್ಛಕ್ತಿ ಗ್ರಿಡ್‌ಗಳ ಜೊತೆಗೆ ಸಂಯೋಜನೆ ಸಾಧಿಸುವ ಕಾರಣ ನವೀಕರಿಸಬಹುದಾದ ಇಂಧನದ ಶೇಖರಣ ಸಾಮರ್ಥ್ಯ ಹೆಚ್ಚಿಸುವ ಸವಾಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಭಾರತದಲ್ಲಿ ಬೃಹತ್ ಪ್ರಮಾಣದ ಬ್ಯಾಟರಿ ತಯಾರಿಕಾ ಘಟಕ ಸ್ಥಾಪಿಸುವ ವಿಶೇಷ ಸಹಭಾಗಿತ್ವದ ಕುರಿತಾಗಿಯೂ ಆರ್ ಎನ್ಇಎಸ್ಎಲ್ ಮತ್ತು ಅಂಬ್ರಿ ಚರ್ಚೆಯಲ್ಲಿ ತೊಡಗಿವೆ. ರಿಲಯನ್ಸ್‌ನ ಗ್ರೀನ್ ಎನರ್ಜಿ ಉಪಕ್ರಮದ ಸಾಮರ್ಥ್ಯ ಹೆಚ್ಚಿಸುವ ಮತ್ತು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಇದು ಸಹಕಾರಿ.

Reliance New Energy Solar Ltd to invest 144 million USD in Ambri Inc

ಕಳೆದ ಜೂನ್ ತಿಂಗಳಿನಲ್ಲಿ ಷೇರುದಾರರನ್ನುದ್ದೇಶಿಸಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ದೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್ ಯೋಜನೆಯ ಭಾಗವಾಗಿ ತಡೆಹಿಡಿಯಬಲ್ಲ ವಿದ್ಯುಚ್ಛಕ್ತಿ ಸಂಗ್ರಹಿಸಲೆಂದೇ ಜಾಮ್ನಗರದಲ್ಲಿ ಗಿಗಾ ಫ್ಯಾಕ್ಟರಿ ನಿರ್ಮಿಸುವುದಾಗಿ ಘೋಷಿಸಿದ್ದರು. ʻನಾವು ಉತ್ಪಾದಿಸುವ ವಿದ್ಯುಚ್ಛಕ್ತಿಯನ್ನು ಬೃಹತ್ ಪ್ರಮಾಣದ ಗ್ರಿಡ್ ಬ್ಯಾಟರಿಗಳಲ್ಲಿ ಸಂಗ್ರಹಿಸಿ ಬಳಸಬಹುದಾದ ವಿನೂತನ ಮತ್ತು ಸುಧಾರಿತ ವಿದ್ಯುತ್-ರಾಸಾಯನಿಕ ತಂತ್ರಜ್ಞಾನವನ್ನು ನಾವು ಅನ್ವೇಷಿಸುತ್ತಿದ್ದೇವೆ. ಉತ್ಪಾದನೆ, ಸಂಗ್ರಹ ಮತ್ತು ಗ್ರಿಡ್‌ಗಳಿಗೆ ಸಂಪರ್ಕಿಸುವ ಸಂಯೋಜನೆಯೊಂದಿಗೆ ನಿರಂತರ ವಿದ್ಯುತ್ ಲಭ್ಯತೆಯಲ್ಲಿ ಗರಿಷ್ಠ ವಿಶ್ವಾಸಾರ್ಹತೆ ಸಾಧಿಸಲು ನಾವು ಬ್ಯಾಟರಿ ತಂತ್ರಜ್ಞಾನದಲ್ಲಿ ಜಾಗತಿಕ ಪ್ರಮುಖ ಸಂಸ್ಥೆಗಳೊಂದಿಗೆ ಕೈಜೋಡಿಸಲಿದ್ದೇವೆʼ ಎಂದು ತಿಳಿಸಿದ್ದರು.

ಪ್ರತಿ ಗಂಟೆಗೆ 10 ಮೆಗಾವಾಟ್‌ನಿಂದ 2 ಗಿಗಾವಾಟ್‌ವರೆಗೂ ಅಧಿಕ ಶಕ್ತಿ ಸಂಗ್ರಹ ವ್ಯವಸ್ಥೆ ಅಗತ್ಯವಿರುವ ಯೋಜನೆಗೆಳಿಗೆ ಅಂಬ್ರಿ ಸೇವೆ ನೀಡಬಲ್ಲದು. ಸಂಸ್ಥೆಯು ಕ್ಯಾಲ್ಸಿಯಂ ಮತ್ತು ಆಂಟಿಮನಿ ಎಲೆಕ್ಟ್ರೋಡ್ ಆಧಾರಿತ ಸೆಲ್‌ಗಳು ಮತ್ತು ಸಂಗ್ರಹ ವ್ಯವಸ್ಥೆಗಳನ್ನು ಉತ್ಪಾದಿಸಲಿದೆ ಮತ್ತು ಅವು ಲೀಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಕಡಿಮೆ ವೆಚ್ಚದಾಯಕ ಆಗಿರಲಿವೆ. ಅಲ್ಲದೆ, ಎಂತಹ ವಾತಾವರಣದಲ್ಲಾದರೂ ಪೂರಕ ಹವಾ ನಿಯಂತ್ರಣದ ಅಗತ್ಯವಿಲ್ಲದೇ ಸುರಕ್ಷಿತವಾಗಿ ಕಾರ್ಯನಿರ್ವಹಿಸಬಲ್ಲದು ಮತ್ತು ತೀರಾ ಕಡಿಮೆ ಸವಕಳಿಯೊಂದಿಗೆ 20 ವರ್ಷಕ್ಕೂ ಹೆಚ್ಚು ಅವಧಿಗೆ ಬಾಳಿಕೆ ಬರಬಲ್ಲದು. ಹಗಲಿನ ಸೌರ ವಿದ್ಯುತ್ ಉತ್ಪಾದನೆಯಿಂದ ಸಂಜೆ ಮತ್ತು ಬೆಳಗಿನ ಗರಿಷ್ಠ ಲೋಡ್ ಅವಧಿಗೆ ವಿದ್ಯುಚ್ಛಕ್ತಿಯನ್ನು ಪರಿವರ್ತಿಸುವಂತಹ ಗರಿಷ್ಠ ಬಳಕೆ ಅಗತ್ಯಗಳಿಗೆ ಅಂಬ್ರಿ ವ್ಯವಸ್ಥೆ ಸೂಕ್ತವಾಗಿರಲಿದೆ. 2023 ಮತ್ತು ನಂತರ ಬೃಹತ್ ಪ್ರಮಾಣದ ಯೋಜನೆಯ ಗ್ರಾಹಕರಿಗೆ ವಾಣಿಜ್ಯಿಕ ಕಾರ್ಯಾಚರಣೆಯೊಂದಿಗೆ ತಲುಪುವುದು ಸಂಸ್ಥೆಯ ನಿರೀಕ್ಷೆ.

English summary
Reliance New Energy Solar Ltd (RNESL), a wholly-owned subsidiary of Reliance Industries Ltd (RIL), along with strategic investors Paulson and Co. Inc. and Bill Gates, and a few other investors, has announced an investment of USD 144 million in Ambri Inc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X