ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋಫೋನ್ ಗ್ರಾಹಕರಿಗೊಂದು ಸುದ್ದಿ

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 28: ರಿಲಯನ್ಸ್ ಜಿಯೋ ಉಚಿತ ಫೋನ್ ಪ್ರಿಯರಿಗೆ ಮತ್ತೆ ಸುದ್ದಿ ಇಲ್ಲಿದೆ. ಜಿಯೋಫೋನ್ ಪ್ರೀ ಬುಕ್ಕಿಂಗ್ ಮತ್ತೊಮ್ಮೆ ಆರಂಭವಾಗಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಬೆಂಗಳೂರಿನ ವೈಫೈ ಡಬ್ಬಾದಿಂದ ಭರ್ಜರಿ ಆಫರ್!ಬೆಂಗಳೂರಿನ ವೈಫೈ ಡಬ್ಬಾದಿಂದ ಭರ್ಜರಿ ಆಫರ್!

ಮೊದಲ ಹಂತದ ಪ್ರೀ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು. ಇದಲ್ಲದೆ, 10ಮಿಲಿಯನ್ ಗ್ರಾಹಕರು ಈ ಫೋನ್ ಬಗ್ಗೆ ತಮ್ಮ ಆಸಕ್ತಿ ತೋರಿದ್ದರು.

ಆದರೆ, ಫೋನ್ ಕಾಯ್ದಿರಿಸಿ ಖರೀದಿ ಮಾಡಲು ಸಾಧ್ಯವಾಗದವರಿಗೆ ಕಂಪನಿ ಇಂಟರೆಸ್ಟ್ ರಿಜಿಸ್ಟ್ರೇಷನ್ ಗೆ ಅವಕಾಶ ನೀಡಲಾಗಿತ್ತು. ಆದರೆ, ಒಟ್ಟಾರೆ ಜಿಯೋ ಫೋನ್ ಯೋಜನೆ ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಇನ್ನೊಮ್ಮೆ ಉಚಿತ ಫೋನ್ ಗ್ರಾಹಕರಿಗೆ ನೀಡಲು ಸಂಸ್ಥೆ ಮುಂದಾಗಿದೆ.

ಪ್ರೀಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ನಿಂದ ಭರ್ಜರಿ ಆಫರ್!ಪ್ರೀಪೇಯ್ಡ್ ಬಳಕೆದಾರರಿಗೆ ಏರ್ ಟೆಲ್ ನಿಂದ ಭರ್ಜರಿ ಆಫರ್!

ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಮೂಲಕ ಇಂಟರೆಸ್ಟ್ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು. ಹೆಸರು ನೋಂದಾಯಿಸಿದ ಬಳಿಕ ಕಂಪನಿಯಿಂದ ದೃಢಪಡಿಸಿದ ಸಂದೇಶ ಬರಲಿದೆ. ಈ ಸಂದೇಶದಲ್ಲಿ ಒಂದು ಲಿಂಕ್ ನೀಡಲಾಗಿರುತ್ತದ್. ಈ ಲಿಂಕ್ ಓಪನ್ ಮಾಡಿದ್ರೆ ಗ್ರಾಹಕರ ಕೋಡ್ ನಂಬರ್ ಸಿಗುತ್ತದೆ. ಕೋಡ್ ನಂಬರನ್ನು ಸ್ಥಳೀಯ ರಿಲಯನ್ಸ್ ಜಿಯೋ ಮಳಿಗೆಯಲ್ಲಿ ತೋರಿಸಿದ್ರೆ ಜಿಯೋ ಫೋನ್ ನಿಮ್ಮ ಕೈ ಸೇರಲಿದೆ.

ರಿಲಯನ್ಸ್ ಜಿಯೋ ಫೀಚರ್ ಫೋನ್

ರಿಲಯನ್ಸ್ ಜಿಯೋ ಫೀಚರ್ ಫೋನ್

ರಿಲಯನ್ಸ್ ಜಿಯೋ ಫೀಚರ್ ಫೋನನ್ನು ಉಚಿತವಾಗಿ ನೀಡಲಾಗುತ್ತದೆ. ಆದರೆ, ಭದ್ರತಾ ಠೇವಣಿಯಾಗಿ ಒಂದು ಬಾರಿ 1500 ರೂಪಾಯಿ ನೀಡಬೇಕಾಗುತ್ತದೆ. ಮೂರು ವರ್ಷಗಳ ನಂತರ ಗ್ರಾಹಕ ಈ ಫೋನನ್ನು ವಾಪಸ್ ಕೂಡಾ ಮಾಡಬಹುದಾಗಿದೆ. ಪ್ರತಿ ತಿಂಗಳು 153 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಮಾತ್ರ ಕಂಪನಿ ನೀಡುವ ಲಾಭವನ್ನು ನೀವು ಪಡೆಯಬಹುದಾಗಿದೆ.

ಏರ್ ಟೆಲ್ -ಕಾರ್ಬನ್ ಫೋನ್

ಏರ್ ಟೆಲ್ -ಕಾರ್ಬನ್ ಫೋನ್

ದೇಶಿ ಮಾರುಕಟ್ಟೆಯ ಅಗ್ರಗಣ್ಯ ಸಂಸ್ಥೆ ಕಾರ್ಬನ್ ಜತೆ ಒಪ್ಪಂದ ಮಾಡಿಕೊಂಡಿರುವ ಭಾರ್ತಿ ಏರ್ ಟೆಲ್ ಎರಡು ಹೊಸ 4ಜಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. 4ಜಿ ಸ್ಮಾರ್ಟ್ಫೋನ್ ಎ40 ಇಂಡಿಯನ್ ಫೋನ್ ಬಿಡುಗಡೆ ಮಾಡಿ ಯಶಸ್ಸು ಕಂಡ ಬಳಿಕ ಇನ್ನಷ್ಟು ಸ್ಮಾರ್ಟ್ ಫೋನ್ ಗಳನ್ನು 'ನನ್ನ ಮೊದಲ ಸ್ಮಾರ್ಟ್ ಫೋನ್' ಎಂಬ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ವೋಡಾಫೋನ್ ಫೋನ್

ವೋಡಾಫೋನ್ ಫೋನ್

ಮೈಕ್ರೋ ಮ್ಯಾಕ್ಸ್ ಜತೆ ಒಪ್ಪಂದ ಮಾಡಿಕೊಂಡಿರುವ ವೋಡಾಫೋನ್ ಸಂಸ್ಥೆ ಭಾರತ್ 2 ಅಲ್ಟ್ರಾ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಫೋನ್ ಪರಿಚಯಿಸಿದೆ. ಉಳಿದ ಫೋನ್ ಗಳಿಗೆ ಹೋಲಿಸಿದರೆ ಇದು ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನಾಗಿದ್ದು, 999 ರು ಗೆ ಲಭ್ಯವಿದೆ. ಗ್ರಾಹಕರು 2,899 ರು ನೀಡಿದರೆ ಡೇಟಾ ಸೇವೆ ಸಹಿತ ಫುಲ್ ಪ್ಯಾಕೇಜ್ ದೊರೆಯಲಿದೆ.

ಬಿಎಸ್ ಎನ್ಎಲ್

ಬಿಎಸ್ ಎನ್ಎಲ್

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ನಿಯಮಿತ(ಬಿಎಸ್ ಎನ್ಎಲ್) ಕೂಡಾ ಮೈಕ್ರೋಮ್ಯಾಕ್ಸ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಕಡಿಮೆ ದರದಲ್ಲಿ ಡೇಟಾ ಪ್ಯಾಕ್ ಸಹಿತ ಭಾರತ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.

English summary
Reliance JioPhone is, in all likelihood, coming back for those who tried but couldn't get their hands on one earlier. The company is likely to start selling the 4G feature phone again after a long pause in sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X