ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಗ್ರಾಹಕರಿಗೆ ಬಂಪರ್ : ವಿಶ್ವಕಪ್‌ನ ಪ್ರತಿ ಪಂದ್ಯ ಲೈವ್ ನೋಡಿ

|
Google Oneindia Kannada News

ಬೆಂಗಳೂರು, ಜೂನ್ 06: ವಿಶ್ವಕಪ್ ಸಂದರ್ಭದಲ್ಲಿ ಮತ್ತೊಂದು 'ಸಿಕ್ಸರ್'ನೊಡನೆ ಅಚ್ಚರಿಗೊಳಿಸಿದ ರಿಲಯನ್ಸ್ ಜಿಯೋ, ಇದೀಗ ಕ್ರಿಕೆಟ್‌ ಪ್ರಿಯರ ಅಚ್ಚುಮೆಚ್ಚಿನ ಗಮ್ಯಸ್ಥಾನವಾಗಿದೆ ಮಾರ್ಪಾಟ್ಟಿದೆ. ಜಿಯೋ ಬಳಕೆದಾರರಿಗೆ ವಿಶ್ವಕಪ್‌ನ ಪ್ರತಿ ಪಂದ್ಯದ ನೇರಪ್ರಸಾರವನ್ನೂ ಉಚಿತವಾಗಿ ನೋಡುವ ಅವಕಾಶ ನೀಡಲಾಗಿದೆ.

ಈ ಸೌಲಭ್ಯದ ಮೂಲಕ ಜಿಯೋ ಬಳಕೆದಾರರು ರೂ. 365 ಉಳಿಸಬಹುದಾಗಿದ್ದು, ಬೇರೆ ಯಾವ ಸಂಸ್ಥೆಯೂ ತನ್ನ ಗ್ರಾಹಕರಿಗೆ ಈ ಸೌಲಭ್ಯ ನೀಡುತ್ತಿಲ್ಲ. ಐಪಿಎಲ್ ನಂತರ ಎಲ್ಲ ಬಿಸಿಸಿಐ ಪಂದ್ಯಗಳು (ಭಾರತ ಸರಣಿ) ಜಿಯೋ ಲೈವ್ ನಲ್ಲಿ ಲಭ್ಯವಿರಲಿದೆ.

ವಿಶ್ವಕಪ್‌: IND vs SA, ಹಿಟ್‌ಮ್ಯಾನ್‌ ಶತಕ, ಭಾರತಕ್ಕೆ ಭರ್ಜರಿ ಜಯ

* 300+ ಮಿಲಿಯನ್ ಗ್ರಾಹಕರ ಕ್ರಿಕೆಟ್ ವೀಕ್ಷಣೆಯ ಅನುಭವವನ್ನು ತನ್ನ ಕೊಡುಗೆಯ ಮೂಲಕ ಸಮೃದ್ಧಗೊಳಿಸಿದ ನಂತರ, ಗ್ರಾಹಕರಿಗಾಗಿ ಜಿಯೋ ಇದೀಗ ಇನ್ನೊಂದು ಅಚ್ಚರಿಯನ್ನು ತಂದಿದೆ:
* ವೀಕ್ಷಿಸಿ - ಜಿಯೋ ಬಳಕೆದಾರರು ವಿಶ್ವಕಪ್‌ನ ಪ್ರತಿ ಪಂದ್ಯದ ನೇರಪ್ರಸಾರವನ್ನೂ ಉಚಿತವಾಗಿ ನೋಡಬಹುದು
* ಆಟವಾಡಿ - ಜನಪ್ರಿಯ 'ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್' ಗೇಮ್ ಅನ್ನು ಮೈಜಿಯೋ ಆಪ್‌ನಲ್ಲಿ ಆಡಿ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು
* ಆನಂದಿಸಿ - ರೂ. 251 ಮೌಲ್ಯದ ಅಪರಿಮಿತ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್‌ನೊಂದಿಗೆ

ಕ್ರಿಕೆಟ್ ಪಂದ್ಯಗಳಷ್ಟೇ ಅಲ್ಲದೆ ಈ ಡೇಟಾ ಅನ್ನು ಅಂತರಜಾಲದಿಂದ ಯಾವುದೇ ಮಾಹಿತಿ ಪಡೆಯಲು ಬಳಸಿಕೊಳ್ಳಬಹುದು.

ವಿಶ್ವಕಪ್‌ ಉಚಿತ ವೀಕ್ಷಣೆಯ ಅವಕಾಶ

ವಿಶ್ವಕಪ್‌ ಉಚಿತ ವೀಕ್ಷಣೆಯ ಅವಕಾಶ

ವಿಶ್ವಕಪ್‌ ಉಚಿತ ವೀಕ್ಷಣೆಯ ಅವಕಾಶ ನೀಡುವ ಮೂಲಕ, ನೇರಪ್ರಸಾರ ನೀಡಲು ಪಾವತಿಸಬೇಕಿದ್ದ ರೂ. 365 ಮೊತ್ತದ ಉಳಿತಾಯವನ್ನು ಜಿಯೋ ತನ್ನ ಬಳಕೆದಾರರಿಗಾಗಿ ಸಾಧ್ಯವಾಗಿಸಿದೆ. ಭಾರತದ ಬೇರೆ ಯಾವ ಸಂಸ್ಥೆಯೂ ತನ್ನ ಗ್ರಾಹಕರಿಗೆ ಈ ಸೌಲಭ್ಯ ನೀಡುತ್ತಿಲ್ಲ. ಕ್ರಿಕೆಟ್ ಪ್ರೇಮಿಗಳು ತಮ್ಮ ಅಚ್ಚುಮೆಚ್ಚಿನ ಎಲ್ಲ ಪಂದ್ಯಗಳನ್ನೂ, ಯಾವುದೇ ಅಡಚಣೆ ಅಥವಾ ದೈನಂದಿನ ಡೇಟಾ ಮಿತಿಯನ್ನು ಮೀರುವ ಚಿಂತೆಯಿಲ್ಲದೆ, ಜಿಯೋಟೀವಿ ಮೂಲಕ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಗೇಮ್‌

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಗೇಮ್‌

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಗೇಮ್‌ನ ಹೊಸ ಆವೃತ್ತಿಯ ಮೂಲಕ ಜಿಯೋ ಗ್ರಾಹಕರಿಗೆ ಸಂಭ್ರಮ ತರುವುದನ್ನು ಮುಂದುವರೆಸಿದೆ. ತನ್ನ ಬಳಕೆದಾರರಿಗೆ ಭಾಗವಹಿಸುವ ಅವಕಾಶ ನೀಡುವ ಜೊತೆಗೆ ಸ್ಕೋರ್‌ಗಳು, ಪಂದ್ಯಗಳ ವೇಳಾಪಟ್ಟಿ, ಫಲಿತಾಂಶ ಮತ್ತು ಇನ್ನೂ ಹಲವು ಉಪಯುಕ್ತ ಮಾಹಿತಿಯನ್ನು ಇದು ಒಂದೇ ಸ್ಥಳದಲ್ಲಿ ಒದಗಿಸಲಿದೆ.

ವಿಶ್ವಕಪ್ 2019 : ಟೀಂ ಇಂಡಿಯಾ ಪಂದ್ಯಗಳ ಸಮಗ್ರ ವೇಳಾಪಟ್ಟಿ

ಜಿಯೋಟೀವಿ ಮೂಲಕ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್

ಜಿಯೋಟೀವಿ ಮೂಲಕ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್

ಜಿಯೋಟೀವಿ ಮೂಲಕ ಹಾಟ್‌ಸ್ಟಾರ್‌ನಲ್ಲಿ ಕ್ರಿಕೆಟ್ ನೇರಪ್ರಸಾರ ವೀಕ್ಷಿಸುವಾಗ ಡೇಟಾ ಮುಗಿದುಹೋಗದಂತೆ ನೋಡಿಕೊಳ್ಳಲು, ರೂ. 251ರ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್‌ನೊಡನೆ ರೀಚಾರ್ಜ್ ಮಾಡಿಕೊಳ್ಳುವ ಅವಕಾಶವೂ ಜಿಯೋ ಬಳಕೆದಾರರಿಗೆ ಸಿಗುತ್ತಿದೆ.

ವಿಶ್ವಕಪ್ ಪಂದ್ಯಗಳ ನೇರಪ್ರಸಾರ ವೀಕ್ಷಿಸುವುದು ಹೇಗೆ

ವಿಶ್ವಕಪ್ ಪಂದ್ಯಗಳ ನೇರಪ್ರಸಾರ ವೀಕ್ಷಿಸುವುದು ಹೇಗೆ

1. ಜಿಯೋ ಬಳಕೆದಾರರು ಹಾಟ್‌ಸ್ಟಾರ್ ಅಥವಾ ಜಿಯೋಟೀವಿ ಮೂಲಕ ವಿಶ್ವಕಪ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ
2. ಹಾಟ್‌ಸ್ಟಾರ್‌ಗೆ ಭೇಟಿಕೊಟ್ಟಾಗ, ಎಲ್ಲ ಜಿಯೋ ಗ್ರಾಹಕರಿಗೆ ಎಲ್ಲ ವಿಶ್ವಕಪ್ ಪಂದ್ಯಗಳನ್ನೂ ನೋಡುವ ಅವಕಾಶ ದೊರಕಲಿದೆ
3. ಜಿಯೋಟೀವಿಯಲ್ಲಿ, ಪಂದ್ಯ ವೀಕ್ಷಣೆಗಾಗಿ ಬಳಕೆದಾರರನ್ನು ಯಾವುದೇ ತೊಡಕಿಲ್ಲದಂತೆ ಹಾಟ್‌ಸ್ಟಾರ್‌ಗೆ ಪುನರ್ನಿರ್ದೇಶಿಸಲಾಗುತ್ತದೆ

ಗಮನಿಸಿ - ಉಚಿತ ಎನ್ನುವುದು ಕಾರ್ಯಕ್ರಮದ ಚಂದಾಗೆ ಅನ್ವಯಿಸುತ್ತದೆ. ಡೇಟಾ ಬಳಕೆಗೆ ಡೇಟಾ ಪ್ಯಾಕ್ ದರಗಳಂತೆ ಶುಲ್ಕ ವಿಧಿಸಲಾಗುತ್ತದೆ.

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್:

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಯಾಕ್:

ಜಿಯೋ ಕ್ರಿಕೆಟ್ ಸೀಸನ್ ವಿಶೇಷ ಡೇಟಾ ಪ್ಯಾಕ್ ಅನ್ನು ರೂ. 251 ಪಾವತಿಸುವ ಮೂಲಕ ಎಲ್ಲ ಜಿಯೋ ಬಳಕೆದಾರರೂ ಪಡೆದುಕೊಳ್ಳಬಹುದಾಗಿದೆ. ಹೆಚ್ಚು ಡೇಟಾ ಬಳಕೆಯಾಗುವ ಇಂತಹ ಸನ್ನಿವೇಶಗಳಿಗೆ ಸೂಕ್ತವಾಗುವಂತೆ ಎಲ್ಲ ಕ್ರಿಕೆಟ್ ಪ್ರೇಮಿಗಳಿಗಾಗಿ ಈ ವಿಶೇಷ ಅವಕಾಶವನ್ನು ರೂಪಿಸಲಾಗಿದೆ. 51 ದಿನಗಳ ಅವಧಿಗೆ ಈ ಪ್ಯಾಕ್ ಒಟ್ಟು 102 ಜಿಬಿ ಅತಿವೇಗದ ಡೇಟಾ ಒದಗಿಸಲಿದ್ದು, ಅದು ಎಲ್ಲ ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಸಾಕಾಗುವಷ್ಟಿರಲಿದೆ.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್:

1. ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಒಂದು ಇಂಟರ್‍ಯಾಕ್ಟಿವ್ ಪರಿಕಲ್ಪನೆಯಾಗಿದ್ದು, ಪಂದ್ಯಗಳು ನಡೆಯುವಾಗ ಜೊತೆಯಲ್ಲಿ ತಾವೂ ಭಾಗವಹಿಸಿ ಆನಂದಿಸುವ ಅವಕಾಶವನ್ನು ಬಳಕೆದಾರರಿಗೆ ಪ್ರತಿ ಕ್ರಿಕೆಟ್ ಋತುವಿನಲ್ಲೂ ನೀಡುತ್ತಿದೆ.
2. ಟೀವಿಯಲ್ಲಿ ಪಂದ್ಯದ ನೇರ ಪ್ರಸಾರ ವೀಕ್ಷಿಸುತ್ತಿರುವಂತೆಯೇ ಬಳಕೆದಾರರು ತಮ್ಮ ಮೊಬೈಲ್ ಪರದೆಯ ಮೇಲೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ನೊಡನೆ ಒಡನಾಡಬಹುದು.
3. ಪಂದ್ಯವನ್ನು ವೀಕ್ಷಿಸುವುದಷ್ಟೇ ಅಲ್ಲದೆ ಅದರ ಫಲಿತಾಂಶವನ್ನು ತತ್‌ಕ್ಷಣದಲ್ಲಿ ಊಹಿಸುವ ಮೂಲಕ ಬಳಕೆದಾರರೂ ಆಟದಲ್ಲಿ ಭಾಗವಹಿಸುವುದು ಇದರ ಇಂಟರ್‍ಯಾಕ್ಟಿವ್ ಸ್ವರೂಪದಿಂದಾಗಿ ಸಾಧ್ಯವಾಗುತ್ತದೆ.
4. ಈ ಆಟ ಜಿಯೋ ಚಂದಾದಾರರು ಮತ್ತು ಚಂದಾದಾರರಲ್ಲದವರಿಗೂ ಲಭ್ಯವಿದೆ.
5. ಆಟದಲ್ಲಿ ಭಾಗವಹಿಸಲು ಬಳಕೆದಾರರು ಮೈಜಿಯೋ ಆಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.
6. ತತ್‍ಕ್ಷಣದ ಫಲಿತಾಂಶಗಳನ್ನು ಊಹಿಸಿ ಸರಿಯಾದ ಊಹೆಗೆ ಅಂಕಗಳನ್ನು ಪಡೆಯುವ ಜೊತೆಗೆ ಆಟಗಾರರು ತಮ್ಮ ಕ್ರಿಕೆಟ್ ಜ್ಞಾನವನ್ನೂ ಪರೀಕ್ಷಿಸಿಕೊಳ್ಳಬಹುದು

English summary
By providing free access to the world cup to Jio users, Jio is effectively passing on benefits worth Rs 365 that they would have otherwise needed to pay for watching the world cup matches live and free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X