ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೆಕ್ಟ್ರಮ್ ಬಳಕೆ: ಏರ್‌ಟೆಲ್‌ನೊಂದಿಗೆ ರಿಲಯನ್ಸ್ ಜಿಯೋ ಒಪ್ಪಂದ

|
Google Oneindia Kannada News

ಮುಂಬೈ, ಏಪ್ರಿಲ್ 7: ಸ್ಪೆಕ್ಟ್ರಮ್ ಟ್ರೇಡಿಂಗ್ ಮೂಲಕ ಆಂಧ್ರಪ್ರದೇಶ, ದೆಹಲಿ ಮತ್ತು ಮುಂಬೈ ಸರ್ಕಲ್‌ಗಳಲ್ಲಿನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ ಸ್ಪೆಕ್ಟ್ರಮ್ ಬಳಸುವ ಹಕ್ಕನ್ನು ಪಡೆದುಕೊಳ್ಳಲು ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RJIL) ಪ್ರಕಟಿಸಿದೆ.

ಈ ಒಪ್ಪಂದವು ದೂರಸಂಪರ್ಕ ಇಲಾಖೆ ಪ್ರಕಟಿಸಿರುವ ಸ್ಪೆಕ್ಟ್ರಮ್ ಟ್ರೇಡಿಂಗ್ ಮಾರ್ಗಸೂಚಿಗಳಿಗೆ ಅನುಸಾರವಾಗಿದೆ ಹಾಗೂ ಇದು ಅಗತ್ಯ ನಿಯಂತ್ರಣ ಮತ್ತು ಶಾಸನಬದ್ಧ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.

ಈ ಸ್ಪೆಕ್ಟ್ರಮ್ ಬಳಸುವ ಹಕ್ಕಿನ ಒಟ್ಟು ಮೌಲ್ಯ ರೂ. 1,497 ಕೋಟಿಗಳಾಗಿದ್ದು, ಯಾವುದೇ ವಹಿವಾಟು ಸಂಬಂಧಿ ಹೊಂದಾಣಿಕೆಗಳಿಗೆ ಒಳಪಟ್ಟಂತೆ ರೂ. 459 ಕೋಟಿಗಳ ಸಂಬಂಧಿತ ಮುಂದೂಡಲ್ಪಟ್ಟ ಪಾವತಿ ಹೊಣೆಗಾರಿಕೆಯ (deferred payment liability) ಪ್ರಸ್ತುತ ಮೌಲ್ಯವನ್ನೂ ಒಳಗೊಂಡಿದೆ.

Reliance Jio trading of Right to Use Spectrum deal with Bharti Airtel

ಸ್ಪೆಕ್ಟ್ರಮ್ ಬಳಸುವ ಹಕ್ಕಿನ ಈ ಟ್ರೇಡಿಂಗ್‌ನೊಂದಿಗೆ, ಆರ್‌ಜೆಐಎಲ್ ಮುಂಬೈ ಸರ್ಕಲ್‌ನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ 2X15 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಹಾಗೂ ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಲ್‌ಗಳಲ್ಲಿನ 800 ಮೆಗಾಹರ್ಟ್ಸ್ ಬ್ಯಾಂಡ್‌ನಲ್ಲಿ 2X10 ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಅನ್ನು ಪಡೆದುಕೊಂಡಂತಾಗಿದೆ.

ಆ ಮೂಲಕ ಈ ವಲಯಗಳಲ್ಲಿ ಆರ್‌ಜೆಐಎಲ್ ತನ್ನ ಸ್ಪೆಕ್ಟ್ರಮ್ ಹೆಜ್ಜೆಗುರುತನ್ನು ಬಲಪಡಿಸಿಕೊಂಡಿದೆ. ವರ್ಧಿತ ಸ್ಪೆಕ್ಟ್ರಮ್ ಫುಟ್‌ಪ್ರಿಂಟ್, ಅದರಲ್ಲೂ ವಿಶೇಷವಾಗಿ ಪಕ್ಕಪಕ್ಕದಲ್ಲಿರುವ (contiguous) ಸ್ಪೆಕ್ಟ್ರಮ್, ಹಾಗೂ ಉತ್ತಮ ಮೂಲಸೌಕರ್ಯಗಳ ನಿಯೋಜನೆಯಿಂದಾಗಿ, ಆರ್‌ಜೆಐಎಲ್ ನೆಟ್‌ವರ್ಕ್ ಸಾಮರ್ಥ್ಯದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.

English summary
Reliance Jio trading of Right to Use Spectrum deal with Bharti Airtel in Andhra Pradesh, Delhi and Mumbai telecom circles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X