ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾರ್ಚೂನ್ 'ಚೇಂಜ್ ದ ವರ್ಲ್ಡ್' ಪಟ್ಟಿ: ಮೊದಲ ಸ್ಥಾನದಲ್ಲಿ ಜಿಯೋ

By Mahesh
|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 21: ಭಾರತದ ಅತಿದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸಂಸ್ಥೆ ಫಾರ್ಚೂನ್‌‌ನ 'ಚೇಂಜ್ ದ ವರ್ಲ್ಡ್' ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ.

ನಮ್ಮ ಜಗತ್ತಿಗೆ ಸಹಾಯಮಾಡುವ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕ ಲಾಭಗಳಿಸಲು ಹೊರಟಿರುವ ಸಂಸ್ಥೆಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ.

ಜಿಯೋಗೆ ಸೆಡ್ಡು, ಕೇವಲ 27ಕ್ಕೆ ಉಚಿತ ಕರೆ ನೀಡುತ್ತಿದೆ ಈ ಕಂಪನಿ ಜಿಯೋಗೆ ಸೆಡ್ಡು, ಕೇವಲ 27ಕ್ಕೆ ಉಚಿತ ಕರೆ ನೀಡುತ್ತಿದೆ ಈ ಕಂಪನಿ

ಫಾರ್ಚೂನ್ ಪಟ್ಟಿಯಲ್ಲಿ ಫಾರ್ಮಾ ದಿಗ್ಗಜ ಮರ್ಕ್ ಹಾಗೂ ಬ್ಯಾಂಕ್ ಆಫ್ ಅಮೆರಿಕಾದಂತಹ ಸಂಸ್ಥೆಗಳನ್ನು ಹಿಂದಿಕ್ಕುವ ಮೂಲಕ ಜಿಯೋ ತನ್ನ ಅಗ್ರಸ್ಥಾನವನ್ನು ಗಳಿಸಿಕೊಂಡಿದೆ.

Reliance Jio tops Fortunes Change the World list

ಈ ಪಟ್ಟಿಯಲ್ಲಿ ಚೀನಾದ ಆಲಿಬಾಬಾ ಸಮೂಹ 5ನೇ ಸ್ಥಾನದಲ್ಲಿದ್ದರೆ ಆಹಾರ ಮತ್ತು ಔಷಧ ಮಾರಾಟಗಾರ ಕ್ರೋಗರ್ 6ನೇ ಸ್ಥಾನ ಗಳಿಸಿದೆ. ಔದ್ಯೋಗಿಕ ಉಪಕರಣ ತಯಾರಕ ಎಬಿಬಿ ಎಂಟನೇ ಸ್ಥಾನದಲ್ಲಿ ಹಾಗೂ ನೆಟ್‌ವರ್ಕ್ ಹಾಗೂ ಸಂವಹನ ಕ್ಷೇತ್ರದ ದಿಗ್ಗಜ ಹ್ಯೂಸ್ ನೆಟ್‌ವರ್ಕ್ ಸಿಸ್ಟಂ ಹತ್ತನೇ ಸ್ಥಾನದಲ್ಲಿವೆ.

"ಅಂತರ್ಜಾಲ ಸಂಪರ್ಕ ಪಡೆಯುವುದನ್ನು ಮನುಷ್ಯರ ಪ್ರಾಥಮಿಕ ಹಕ್ಕು ಎಂದು ಪರಿಗಣಿಸುವುದಾದರೆ (2016ರಲ್ಲಿ ವಿಶ್ವಸಂಸ್ಥೆ ಅದನ್ನು ಹಾಗೆಂದು ಘೋಷಿಸಿತ್ತು) ಈ ನಿಟ್ಟಿನಲ್ಲಿ ಕೆಲಸ ಮಾಡಿದ ಬೇರೆಲ್ಲರಿಗಿಂತ ಹೆಚ್ಚಿನ ಮನ್ನಣೆ ಪಡೆಯಲು ರಿಲಯನ್ಸ್ ಜಿಯೋ ಅರ್ಹವಾಗಿದೆ" ಎಂದು ಫಾರ್ಚೂನ್ ಪ್ರಕಟಣೆ ತಿಳಿಸಿದೆ.

ಜಿಯೋ ಪೇಮೆಂಟ್ ಬ್ಯಾಂಕ್: ರಿಲಯನ್ಸ್ ಜತೆ ಕೈಜೋಡಿಸಿದ ಎಸ್ಬಿಐಜಿಯೋ ಪೇಮೆಂಟ್ ಬ್ಯಾಂಕ್: ರಿಲಯನ್ಸ್ ಜತೆ ಕೈಜೋಡಿಸಿದ ಎಸ್ಬಿಐ

ಉಚಿತ ಕರೆಗಳು ಹಾಗೂ ಡೇಟಾದೊಡನೆ ಸೆಪ್ಟೆಂಬರ್ 2016ರಲ್ಲಿ ಈ ಕ್ಷೇತ್ರ ಪ್ರವೇಶಿಸಿದ ಜಿಯೋ ತನ್ನ ಪ್ರತಿಸ್ಪರ್ಧಿಗಳು ಒಗ್ಗೂಡುವ ಇಲ್ಲವೇ ಈ ಕ್ಷೇತ್ರವನ್ನೇ ತೊರೆಯುವ ಮಟ್ಟಿಗೆ ಸ್ಪರ್ಧೆ ನೀಡಿದೆ. ಈವರೆಗೆ 215 ಮಿಲಿಯನ್ ಗ್ರಾಹಕರನ್ನು ಪಡೆದಿರುವ ಸಂಸ್ಥೆ ತಾನು ಈಗಾಗಲೇ ಲಾಭಗಳಿಸುತ್ತಿರುವುದಾಗಿ ಹೇಳಿಕೊಂಡಿದೆ.

"ರಿಲಯನ್ಸ್ ಜಿಯೋ ಜನತೆಗೆ 'ಡಿಜಿಟಲ್ ಆಮ್ಲಜನಕ'ವನ್ನು ನೀಡುತ್ತದೆ" ಎನ್ನಲು ಅಂಬಾನಿ ಇಷ್ಟಪಡುತ್ತಾರೆ, ಆದರೆ "ಪ್ರಪಂಚದ ಎರಡನೇ ಅತಿದೊಡ್ಡ ಜನಸಂಖ್ಯೆಯಿರುವ ದೇಶದಲ್ಲಿ ಎರಡು ವರ್ಷಗಳ ಹಿಂದೆ ಹೆಚ್ಚಿನ ಆಮ್ಲಜನಕದ ಪ್ರಸಾರವೇ ಇರಲಿಲ್ಲ" ಎಂದು ಫಾರ್ಚೂನ್ ಹೇಳಿದೆ.

ವಿಶೇಷ ರೀಚಾರ್ಜ್ : ಜಿಯೋಫೋನ್ ಮಾನ್ಸೂನ್ ಹಂಗಾಮ ಪ್ರಾರಂಭವಿಶೇಷ ರೀಚಾರ್ಜ್ : ಜಿಯೋಫೋನ್ ಮಾನ್ಸೂನ್ ಹಂಗಾಮ ಪ್ರಾರಂಭ

"ಮೊಬೈಲ್ ಫೋನುಗಳು 2ಜಿ ಜಾಲಗಳಲ್ಲಿ ತೆವಳುತ್ತಿದ್ದವು, ಮತ್ತು ಗ್ರಾಹಕರು ಒಂದು ಜಿಬಿ ಡೇಟಾ ಪಡೆಯಲು ರೂ. 200ಕ್ಕಿಂತ ಹೆಚ್ಚಿನ ಶುಲ್ಕ ನೀಡುತ್ತಿದ್ದರು. ಭಾರತದ 1.3 ಬಿಲಿಯನ್ ಜನಸಂಖ್ಯೆಯಲ್ಲಿ ಕೇವಲ 153 ಮಿಲಿಯನ್ ಮಂದಿ ಮಾತ್ರ ಮೊಬೈಲ್ ಅಂತರಜಾಲ ಚಂದಾದಾರರಾಗಿದ್ದರು."

"ವೇಗದ 4ಜಿ ಜಾಲದೊಡನೆ (ಅದನ್ನು ನಿರ್ಮಿಸಲು ಬಿಲಿಯನ್‌ಗಟ್ಟಲೆ ಖರ್ಚುಮಾಡಿ) ಪ್ರವೇಶಿಸಿದ ಜಿಯೋ ಗ್ರಾಹಕರಿಗೆ ಉಚಿತ ಕರೆಗಳನ್ನು ಹಾಗೂ ಅತಿಕಡಿಮೆ ಬೆಲೆಯಲ್ಲಿ ಡೇಟಾ (ಪ್ರತಿ ಜಿಬಿಗೆ ಕೇವಲ ರೂ.4ರಷ್ಟು) ಸೌಲಭ್ಯವನ್ನು ನೀಡಿತು. ಅದಾದ ನಂತರ ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್‌ಫೋನನ್ನೂ ನೀಡಿದ ಜಿಯೋ ಇದೀಗ ಸ್ಥಿರ ಬ್ರಾಡ್‌ಬ್ಯಾಂಡ್ ಸೇವೆಯನ್ನೂ ಪರಿಚಯಿಸುತ್ತಿದೆ," ಎಂದು ಫಾರ್ಚೂನ್ ತಿಳಿಸಿದೆ.

"ಇದೆಲ್ಲದರ ಪರಿಣಾಮವಾದ 'ಜಿಯೋ-ಫಿಕೇಶನ್' ಯಾವ ಕ್ರಾಂತಿಗೂ ಕಡಿಮೆಯೆನಿಸುವುದಿಲ್ಲ; ಹೆಚ್ಚುತ್ತಿರುವ ಡೇಟಾ ಬಳಕೆ ಹಾಗೂ ಇತರ ಸಂಸ್ಥೆಗಳು ಜಿಯೋದೊಡನೆ ತುರುಸಿನ ಸ್ಪರ್ಧೆಗಿಳಿಯಲು ಪ್ರಯತ್ನಿಸುತ್ತಿರುವುದು ಭಾರತದ ಡಿಜಿಟಲ್ ಅರ್ಥವ್ಯವಸ್ಥೆಗೆ ಉತ್ತಮ ಪ್ರಾರಂಭ ನೀಡಿದೆ."

ಗ್ರಾಮೀಣ ಪ್ರದೇಶದ ಹಾಗೂ ಮಧ್ಯಮವರ್ಗದ - ರೈತರು, ವಿದ್ಯಾರ್ಥಿಗಳು ಹಾಗೂ ಉದ್ಯಮಿಗಳು ಆಧುನಿಕ ಅರ್ಥವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅಗತ್ಯವಾದ ಸವಲತ್ತುಗಳನ್ನು ಪಡೆದುಕೊಳ್ಳುವ ಮೂಲಕ ಈ ಬದಲಾವಣೆಯ ಅತಿದೊಡ್ಡ ಫಲಾನುಭವಿಗಳಾಗಿ ಹೊರಹೊಮ್ಮಿದ್ದಾರೆ ಎಂದು ಫಾರ್ಚೂನ್ ಹೇಳಿದೆ.

ತಮ್ಮ ಪ್ರಮುಖ ವಾಣಿಜ್ಯ ಉದ್ದೇಶಗಳನ್ನು ಈಡೇರಿಸುವ ಪ್ರಯತ್ನದಲ್ಲಿ ಧನಾತ್ಮಕ ಸಾಮಾಜಿಕ ಪರಿಣಾಮವನ್ನೂ ಉಂಟುಮಾಡುವ ಸಂಸ್ಥೆಗಳನ್ನು 'ಚೇಂಜ್ ದ ವರ್ಲ್ಡ್' ಪಟ್ಟಿ ಗುರುತಿಸುತ್ತದೆ ಎಂದು ಫಾರ್ಚೂನ್ ಹೇಳಿದೆ.

ವಾರ್ಷಿಕ 1 ಬಿಲಿಯನ್ ಡಾಲರುಗಳಿಗಿಂತ ಹೆಚ್ಚಿನ ಆದಾಯವಿರುವ ಸಂಸ್ಥೆಗಳನ್ನಷ್ಟೇ ಪರಿಗಣಿಸುವ ಈ ಪಟ್ಟಿ, ಅವುಗಳ ಸಾಮಾಜಿಕ ಪರಿಣಾಮ, ವ್ಯಾವಹಾರಿಕ ಫಲಿತಾಂಶ (ಲಾಭದಾಯಕತೆ), ಹೊಸತನ ತರುವಿಕೆಯ ಪ್ರಮಾಣ ಹಾಗೂ ಕಾರ್ಪೊರೇಟ್ ಸಮಗ್ರತೆಯ ಮಾಪನವನ್ನು ಪ್ರತಿನಿಧಿಸುತ್ತದೆ ಎಂದು ಅದು ತಿಳಿಸಿದೆ.

English summary
Richest Indian Mukesh Ambani's telecom unit Reliance Jio has been ranked as the top company globally on Fortune's 'Change The World' list that ranked companies using the profit motive to help the planet and tackle social problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X