ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ಜಿ ಡೌನ್ಲೋಡ್ ವೇಗ, ಏಪ್ರಿಲ್ ತಿಂಗಳಲ್ಲೂ ಜಿಯೋ ನಂ.1

ಏಪ್ರಿಲ್ ತಿಂಗಳ ಅಂಕಿ-ಅಂಶಗಳ ಪ್ರಕಾರ 4ಜಿ ಜಾಲಗಳ ವೇಗದಲ್ಲಿ ರಿಲಯನ್ಸ್ ಜಿಯೋ ಪ್ರಥಮ ಸ್ಥಾನ ಪಡೆದಿದೆ ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿ ತಿಳಿಸಿದೆ.

By Mahesh
|
Google Oneindia Kannada News

ನವದೆಹಲಿ, ಜೂನ್ 6: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಕಲೆಹಾಕಿರುವ ಏಪ್ರಿಲ್ ತಿಂಗಳ ಅಂಕಿ-ಅಂಶಗಳ ಪ್ರಕಾರ 4ಜಿ ಜಾಲಗಳ ವೇಗದಲ್ಲಿ ರಿಲಯನ್ಸ್ ಜಿಯೋ ಪ್ರಥಮ ಸ್ಥಾನ ಪಡೆದಿದೆ. ಈ ಅವಧಿಯಲ್ಲಿ ರಿಲಯನ್ಸ್ ಜಿಯೋ ಜಾಲ 19.12 ಮೆಗಾಬಿಟ್ಸ್ ಪ್ರತಿ ಸೆಕೆಂಡಿನಂತೆ ಡೌನ್ಲೋಡ್ ವೇಗವನ್ನು ದಾಖಲಿಸಿದೆ.

'ಮೈಸ್ಪೀಡ್' ತಂತ್ರಾಂಶದ ನೆರವಿನಿಂದ ವಿಶ್ಲೇಷಿಸುವ ಟ್ರಾಯ್ ಸರಾಸರಿ ಡೌನ್ಲೋಡ್ ವೇಗವನ್ನು ಲೆಕ್ಕಹಾಕುತ್ತದೆ. 16 ಎಂಬಿಪಿಎಸ್ ವೇಗದ ಸಂಪರ್ಕದಲ್ಲಿ ಒಂದು ಬಾಲಿವುಡ್ ಚಲನಚಿತ್ರವನ್ನು ಕೇವಲ 5 ನಿಮಿಷಗಳಲ್ಲಿ ಡೌನ್ಲೋಡ್ ಮಾಡುವುದು ಸಾಧ್ಯವಾಗಿದೆ.

 Reliance Jio tops 4G download speed in April: TRAI

ಮೊಬೈಲ್ ಜಾಲಗಳ ಪೈಕಿ ಮೊದಲನೇ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಏಪ್ರಿಲ್ ತಿಂಗಳಿನಲ್ಲಿ 19.12 ಎಂಬಿಪಿಎಸ್ ವೇಗ ದಾಖಲಿಸುವ ಮೂಲಕ ಹಿಂದಿನ ತಿಂಗಳ ತನ್ನದೇ ದಾಖಲೆಯಾದ 18.48 ಎಂಬಿಪಿಎಸ್ ವೇಗವನ್ನು ಉತ್ತಮಪಡಿಸಿಕೊಂಡಿದೆ. ಈ ಮೂಲಕ ಸತತ ನಾಲ್ಕನೇ ತಿಂಗಳಿನಲ್ಲೂ ಅಗ್ರಸ್ಥಾನದಲ್ಲೇ ಮುಂದುವರೆದಿದೆ.

ಏಪ್ರಿಲ್ ತಿಂಗಳಿನಲ್ಲಿ ಐಡಿಯಾ ಸೆಲ್ಯುಲರ್ ಜಾಲದ ಡೌನ್ಲೋಡ್ ವೇಗ 13.70 ಎಂಬಿಪಿಎಸ್ ಇದ್ದರೆ, ವೋಡಾಫೋನ್ ಜಾಲದ ವೇಗ 13.38 ಎಂಬಿಪಿಎಸ್ ಇತ್ತು. ಇವೆರಡೂ ಜಾಲಗಳು ವಿಲೀನವಾಗಿ ದೇಶದ ಅತಿದೊಡ್ಡ ಮೊಬೈಲ್ ಸೇವಾಸಂಸ್ಥೆಯನ್ನು ರೂಪಿಸಲಿವೆ. ವಿಲೀನದ ನಂತರ 23 ಬಿಲಿಯನ್ ಡಾಲರ್ ಮೌಲ್ಯದ್ದಾಗಲಿರುವ ಈ ಸಂಸ್ಥೆ ಮಾರುಕಟ್ಟೆಯಲ್ಲಿ ಶೇ. 35ರಷ್ಟು ಪಾಲು ಹೊಂದಲಿದೆ.

ಟ್ರಾಯ್ ಪೋರ್ಟಲ್ ನಲ್ಲಿ ನೀಡಲಾಗಿರುವ ವರದಿಯಂತೆ ಏಪ್ರಿಲ್ ತಿಂಗಳಿನಲ್ಲಿ ಭಾರ್ತಿ ಏರ್ಟೆಲ್ ಜಾಲದ ಸರಾಸರಿ ಡೌನ್ಲೋಡ್ ವೇಗ 10.15 ಎಂಬಿಪಿಎಸ್ ನಷ್ಟಿದೆ.(ಪಿಟಿಐ)

English summary
Reliance Jio topped the chart in 4G network speed for the month of April with an all-time high download speed of 19.12 megabit per second, as per the latest Trai report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X