ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋ: ಜನವರಿ 1ರಿಂದ ಎಲ್ಲಾ ನೆಟ್‌ವರ್ಕ್‌ಗೆ ದೇಶೀಯ ಕರೆ ಉಚಿತ

|
Google Oneindia Kannada News

ನವದೆಹಲಿ, ಡಿಸೆಂಬರ್ 31: ರಿಲಯನ್ಸ್ ಜಿಯೋ ಗ್ರಾಹಕರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಜಿಯೋ ತನ್ನ ಎಲ್ಲಾ ದೇಶೀಯ ಧ್ವನಿ ಕರೆಗಳಿಗೆ ಕೆಲವು ತಿಂಗಳ ಹಿಂದೆ ವಿಧಿಸಿದ್ದ ಇಂಟರ್ ಕನೆಕ್ಟ್ ಯೂಸ್ ಚಾರ್ಜ್ (ಐಯುಸಿ) ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಈ ಮೂಲಕ ಜಿಯೋ ನೆಟ್‌ವರ್ಕ್‌ನಿಂದ ಬರುವ ಎಲ್ಲಾ ದೇಶೀಯ ಧ್ವನಿ ಕರೆಗಳು ಅದರ ಬಳಕೆದಾರರಿಗೆ ಉಚಿತವಾಗಿರುತ್ತದೆ.

ದೇಶದ ಎಲ್ಲಾ ದೇಶೀಯ ಧ್ವನಿ ಕರೆಗಳ ಬಗ್ಗೆ ಐಯುಸಿಯನ್ನು ನಿಲ್ಲಿಸಬೇಕು ಎಂದು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಡಿಸೆಂಬರ್‌ನಲ್ಲಿ ಪ್ರಕಟಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಪಂಜಾಬ್‌ನಲ್ಲಿ ಟೆಲಿಕಾಂ ಟವರ್‌ ಹಾನಿಯನ್ನು ತೀವ್ರವಾಗಿ ಖಂಡಿಸಿದ COAIಪಂಜಾಬ್‌ನಲ್ಲಿ ಟೆಲಿಕಾಂ ಟವರ್‌ ಹಾನಿಯನ್ನು ತೀವ್ರವಾಗಿ ಖಂಡಿಸಿದ COAI

"ದೇಶೀಯ ಧ್ವನಿ ಕರೆ ಶುಲ್ಕಗಳನ್ನು ಶೂನ್ಯಕ್ಕೆ ಹಿಂದಿರುಗಿಸುವ ತನ್ನ ಬದ್ಧತೆಯನ್ನು ಗೌರವಿಸಿ, ಐಯುಸಿ ಶುಲ್ಕಗಳನ್ನು ಕೂಡಲೇ ರದ್ದುಗೊಳಿಸಲಾಗುವುದು. ಈ ಮೂಲಕ ಜಿಯೋ ಮತ್ತೊಮ್ಮೆ ಎಲ್ಲಾ ಆಫ್ ನೆಟ್ ದೇಶೀಯ ಧ್ವನಿ ಕರೆಗಳನ್ನು 2021 ರ ಜನವರಿ 1 ರಿಂದ ಉಚಿತವಾಗಿ ನೀಡುತ್ತದೆ. ಜಿಯೋ ನೆಟ್‌ವರ್ಕ್‌ನಲ್ಲಿ ದೇಶೀಯ ಕರೆಗಳು ಯಾವಾಗಲೂ ಉಚಿತವಾಗಿರುತ್ತದೆ'' ಎಂದು ಜಿಯೋ ಹೇಳಿಕೆಯಲ್ಲಿ ತಿಳಿಸಿದೆ.

Reliance Jio to non-Jio voice calls will be free from January 1, 2021

ಐಯುಸಿ ಎಂದರೆ ಅದರ ಗ್ರಾಹಕರು ಇತರ ಆಪರೇಟರ್‌ನ ಗ್ರಾಹಕರಿಗೆ ಹೊರಹೋಗುವ ಕರೆಗಳನ್ನು ಮಾಡಿದಾಗ ಒಂದು ಟೆಲಿಕಾಂ ಆಪರೇಟರ್ ಇನ್ನೊಂದಕ್ಕೆ ಪಾವತಿಸುವ ಶುಲ್ಕವಾಗಿದೆ.

ಟ್ರಾಯ್‌ ನಿರ್ಧಾರದ ಮೇರೆಗೆ ಸೆಪ್ಟೆಂಬರ್ 2019 ರಲ್ಲಿ, ಜಿಯೋ ತನ್ನ ಗ್ರಾಹಕರಿಗೆ ಆಫ್ ನೆಟ್ ವಾಯ್ಸ್ ಕರೆಗಳಿಗೆ ಶುಲ್ಕ ವಿಧಿಸಲು ಪ್ರಾರಂಭಿಸಿತ್ತು. ಆದರೆ ಶುಲ್ಕ ವಿಧಿಸುವುದನ್ನು ಈಗ ರದ್ದುಗೊಳಿಸಲಾಗಿದ್ದು, ರಿಲಯನ್ಸ್ ಜಿಯೋ ಗ್ರಾಹಕರು ಜನವರಿ 1 ರಿಂದ ಉಚಿತವಾಗಿ ಆಫ್ ನೆಟ್ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ.

English summary
Reliance Jio on Thursday announced it would revoke from January 1, 2021, the interconnect usage charges (IUC) it had levied a few months earlier on all domestic voice calls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X