ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ಕ್ಕೆ ರಿಲಯನ್ಸ್ ಜಿಯೋ ಭಾರತದಲ್ಲಿ 5G ಕ್ರಾಂತಿ ಮಾಡಲಿದೆ: ಮುಕೇಶ್ ಅಂಬಾನಿ

|
Google Oneindia Kannada News

ನವದೆಹಲಿ, ಡಿಸೆಂಬರ್ 08: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ (ಆರ್‌ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ, 2021ಕ್ಕೆ ಭಾರತದಲ್ಲಿ 5ಜಿ ತಂತ್ರಜ್ಞಾನ ಸಂಪರ್ಕವನ್ನು ಹೊಂದಿರಲಿದೆ ಎಂದು ಘೋಷಿಸಿದೆ.

''2021ಕ್ಕೆ ರಿಲಯನ್ಸ್ ಜಿಯೋ ಭಾರತದಲ್ಲಿ 5ಜಿ ಕ್ರಾಂತಿ ಮಾಡಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ'' ಎಂದು ಆರ್‌ಐಎಲ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.

 ಮುಕೇಶ್ ಅಂಬಾನಿ ಕುಟುಂಬದ ಸಂಪತ್ತು ಏಷ್ಯಾದ 2ನೇ ಶ್ರೀಮಂತ ಕುಟುಂಬಕ್ಕಿಂತ 2 ಪಟ್ಟು ಹೆಚ್ಚಿದೆ ಮುಕೇಶ್ ಅಂಬಾನಿ ಕುಟುಂಬದ ಸಂಪತ್ತು ಏಷ್ಯಾದ 2ನೇ ಶ್ರೀಮಂತ ಕುಟುಂಬಕ್ಕಿಂತ 2 ಪಟ್ಟು ಹೆಚ್ಚಿದೆ

5ಜಿ ತಂತ್ರಜ್ಞಾನಕ್ಕೆ ಉತ್ತೇಜನ ನೀಡಲು ರಿಲಯನ್ಸ್ ಜಿಯೋ ತನ್ನದೇ ಆದ 5ಜಿ ಮೊಬೈಲ್ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಜುಲೈ 2020ರಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಗೂಗಲ್‌ ಜೊತೆಗಿನ ತನ್ನ ಒಪ್ಪಂದವನ್ನು ತಿಳಿಸಿದ್ದು, ಆ್ಯಂಡ್ರಾಯ್ಡ್‌ ಆಧಾರಿದ ಆಪರೇಟಿಂಗ್ ಸಿಸ್ಟಂ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಹೊಂದಲು ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದೆ. ಹೀಗಾಗಿ ಜಿಯೋ ತನ್ನದೇ ಆದ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸುಳಿವು ನೀಡಿದೆ.

Reliance Jio to bring 5G Connectivity in India in 2021: Mukesh Ambani

2021ರ ಅರ್ಧ ವರ್ಷದ ಬಳಿಕ ಜಿಯೋ ಭಾರತದಲ್ಲಿ 5ಜಿ ಅಲೆಯನ್ನೇ ಸೃಷ್ಟಿಸಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಇದರ ಜೊತೆಗೆ ಭಾರತದಲ್ಲಿ ಇನ್ನೂ 300 ಮಿಲಿಯನ್ ಮೊಬೈಲ್ ಚಂದಾದಾರರು 2ಜಿಯನ್ನೇ ಬಳಸುತ್ತಿದ್ದಾರೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಅರೆವಾಹಕ(ಸೆಮಿಕಂಡಕ್ಟರ್) ಉದ್ಯಮದ ಕುರಿತು ಮಾತನಾಡಿರುವ ಅಂಬಾನಿ '' ಚಿಪ್‌ ವಿನ್ಯಾಸದಲ್ಲಿ ಭಾರತ ವಿಶ್ವ ದರ್ಜೆಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ. ಭಾರತವು ಅರೆವಾಹಕ ಉದ್ಯಮದಲ್ಲಿ ಜಗತ್ತಿನ ಪ್ರಮುಖ ಕೇಂದ್ರವಾಗಬಹುದು. ಎಲ್ಲಾ ಷೇರು ಪಾಲುದಾರರು ಒಟ್ಟಾಗಿ ಕೆಲಸ ಮಾಡಿದರೆ, ಭಾರತವು ಹಾರ್ಡ್‌ವೇರ್‌ನಲ್ಲಿ ತನ್ನ ಸಾಫ್ಟ್‌ವೇರ್‌ನಲ್ಲಿನ ಯಶಸ್ಸಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಬಹುದು'' ಎಂದು ಅಂಬಾನಿ ಹೇಳಿದರು.

English summary
RIL chairman mukesh ambani addressing the india mobile congress 2020, confirmed that reliance jio will enable 5G connectivity in india 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X