ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ರಿಲಯನ್ಸ್ ಜಿಯೋ ಎರಡು ಕೋಟಿ+ ಗ್ರಾಹಕರ ನೆಲೆ

|
Google Oneindia Kannada News

ಬೆಂಗಳೂರು, ಜುಲೈ 29: ರಾಷ್ಟ್ರದ ಅತಿದೊಡ್ಡ ಮೊಬೈಲ್ ಡೇಟಾ ನೆಟ್‌ವರ್ಕ್ ಆದ ಜಿಯೋ ಈಗ ಕರ್ನಾಟಕದಲ್ಲಿ ಎರಡು ಕೋಟಿಗೂ ಹೆಚ್ಚು ಗ್ರಾಹಕರ ನೆಲೆಯನ್ನು ಪಡೆದುಕೊಂಡಿದೆ. ಕೇವಲ 3 ವರ್ಷಗಳಲ್ಲಿ, ಜಿಯೋ ಭಾರತೀಯರೆಲ್ಲರನ್ನೂ ಡೇಟಾದ ಶಕ್ತಿಯೊಂದಿಗೆ ಸಶಕ್ತರನ್ನಾಗಿಸಿದೆ. ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತವು ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ.

Recommended Video

ಕನ್ನಡಕ್ಕಾಗಿ ದನಿ ಎತ್ತುವ ಧೀಮಂತ ನಾಯಕ | Oneindia Kannada

ಕರ್ನಾಟಕದಲ್ಲಿನ ನೈಜ 4ಜಿ ಆಪರೇಟರ್ ಆದ ಜಿಯೋ, ಟೆಲಿಕಾಂ ಉದ್ಯಮವು ಸಂಖ್ಯೆಗಳ ಕುಗ್ಗುವಿಕೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ ನಿರಂತರವಾಗಿ ಬೆಳೆಯುತ್ತಿದೆ. ಜಿಯೋನ ನಿರಂತರ ಗ್ರಾಹಕ ಸೇರ್ಪಡೆಯು ಜಿಯೋ ಸೇವೆ ಮತ್ತು ಬ್ರಾಂಡ್‌ನ ಕುರಿತು ನಿರಂತರವಾಗಿ ಬೆಳೆಯುತ್ತಿರುವ ಗ್ರಾಹಕರ ಪ್ರೀತಿ, ಒಲವು ಮತ್ತು ಆದ್ಯತೆಗೆ ಸಾಕ್ಷಿಯಾಗಿದೆ. ಗ್ರಾಹಕರು ಕರ್ನಾಟಕದಲ್ಲಿ ಜಿಯೋನ ವಿಸ್ತಾರವಾದ, ವೇಗವಾದ ಮತ್ತು ಅತಿದೊಡ್ಡದಾದ 4ಜಿ ನೆಟ್‌ವರ್ಕ್ ಅನ್ನು ಅನುಭವಿಸುವುದರೊಂದಿಗೆ ಇದು ಕೋವಿಡ್ ಸಮಯದಲ್ಲಿ ಅನೇಕ ಪಟ್ಟು ಹೆಚ್ಚಳ ಕಂಡಿದೆ.

ಜಿಯೋಮಾರ್ಟ್ App ಪ್ಲೇ ಸ್ಟೋರಲ್ಲಿ 10 ಲಕ್ಷ ಡೌನ್ ಲೋಡ್ಜಿಯೋಮಾರ್ಟ್ App ಪ್ಲೇ ಸ್ಟೋರಲ್ಲಿ 10 ಲಕ್ಷ ಡೌನ್ ಲೋಡ್

ಜಿಯೋ ಡಿಜಿಟಲ್ ಲೈಫ್ ಅನ್ನು ತ್ವರಿತವಾಗಿ ಸ್ವೀಕರಿಸಿದ ಮತ್ತು ಸುಲಭವಾಗಿ ಕೈಗೆಟುಕುವ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಆನಂದಿಸುತ್ತಿರುವ ಕರ್ನಾಟಕದೆಲ್ಲೆಡೆಯ ಎಲ್ಲ ಚಂದಾದಾರರಿಗೆ ಜಿಯೋ ಧನ್ಯವಾದಗಳನ್ನು ಸಮರ್ಪಿಸಿದೆ.

Reliance Jio Subscriber Base Crosses 2 Crore Users in Karnataka

ಭಾರತವನ್ನು 2ಜಿ ಮುಕ್ತವಾಗಿಸುವ ಮತ್ತು ನೈಜ 4ಜಿ ಸೇವೆಗಳೊಂದಿಗೆ ಭಾರತೀಯರೆಲ್ಲರನ್ನೂ ಸಶಕ್ತರನ್ನಾಗಿಸುವ ಏಕೈಕ ಉದ್ದೇಶದಿಂದ, ಜಿಯೋ ತನ್ನ ಗ್ರಾಹಕರಿಗೆ ಎಲ್ಲ ಟ್ಯಾರಿಫ್ ಪ್ಲಾನ್‌ಗಳಲ್ಲೂ ಮಾರುಕಟ್ಟೆ ದರದ ಹೋಲಿಕೆಯಲ್ಲಿ 25% ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.

ಜಾಗತಿಕ ಟೆಲಿಕಾಂ ಸಂಸ್ಥೆಗಳಿಗೆ ರಿಲಯನ್ಸ್ ಜಿಯೋ ಮಾದರಿ ಎಂದ ಅಮೆರಿಕಾಜಾಗತಿಕ ಟೆಲಿಕಾಂ ಸಂಸ್ಥೆಗಳಿಗೆ ರಿಲಯನ್ಸ್ ಜಿಯೋ ಮಾದರಿ ಎಂದ ಅಮೆರಿಕಾ

ಜಿಯೋ ಡಿಜಿಟಲ್ ಲೈಫ್‌ನ ಪ್ರಯೋಜನಗಳು:
* ಸದೃಢ ಹಾಗೂ ವಿಸ್ತಾರವಾದ 4ಜಿ ನೆಟ್‌ವರ್ಕ್ ಆದ ಜಿಯೋನಲ್ಲಿ ಕರ್ನಾಟಕದಾದ್ಯಂತ ತೊಡಕಿಲ್ಲದ ಸಂಪರ್ಕ
* ಜಿಯೋನ ಅಪರಿಮಿತ ವಾಯ್ಸ್ ಮತ್ತು ಡೇಟಾ ಪ್ರಯೋಜನಗಳು
* ಜಿಯೋಟಿವಿ (ಅತ್ಯಂತ ಜನಪ್ರಿಯವಾದ ಆನ್ ದ ಗೋ, ಕ್ಯಾಚ್-ಅಪ್ ಟಿವಿ ಆಪ್), ಜಿಯೋ ಮ್ಯೂಸಿಕ್, ಜಿಯೋ ಸಿನೆಮಾ, ಜಿಯೋ ಸಾವನ್ ಮತ್ತಿತರ ಇನ್ ಹೌಸ್ ಆಪ್‌ಗಳ ಮೂಲಕ ದೊಡ್ಡ ಪ್ರಮಾಣದ ಜಿಯೋ ಪ್ರೀಮಿಯಂ ಕಂಟೆಂಟ್ ಪಡೆದುಕೊಳ್ಳುವ ಅವಕಾಶ
* ಸರಳ ಮತ್ತು ಅನುಕೂಲಕರ ಆನ್-ಬೋರ್ಡಿಂಗ್ ಅನುಭವದೊಂದಿಗೆ ರಾಜ್ಯಾದ್ಯಂತ ಜಿಯೋ ಸಿಮ್‌ಗಳ ಸುಲಭ ಲಭ್ಯತೆ

ಜಾಗತಿಕ ಸೋಂಕಿನ ಈ ಸಮಯದಲ್ಲಿ ಜಿಯೋ ತಂಡವು ಯಾವುದೇ ತೊಡಕುಗಳಿಲ್ಲದಂತೆ ಕೆಲಸ ಮಾಡಿದೆ ಮತ್ತು ತನ್ನ ಎಲ್ಲ ಗ್ರಾಹಕರಿಗೂ ಸಂಪರ್ಕವನ್ನು ಖಚಿತಪಡಿಸಿದೆ. ಟವರ್‌ಗಳಿಗೆ ಇಂಧನ ತುಂಬಿಸುವುದಿರಲಿ ಅಥವಾ ರೀಚಾರ್ಜ್‌ಗಳನ್ನು ಸಕ್ರಿಯಗೊಳಿಸುವುದೇ ಇರಲಿ, ಅಡಚಣೆಗಳಿಲ್ಲದ ಡೇಟಾ ಸ್ಟ್ರೀಮಿಂಗ್ ಸಾಧ್ಯವಾಗಿಸಲು ಜಿಯೋ ತಂಡ ಯಾವಾಗಲೂ ಉಪಸ್ಥಿತರಿದ್ದಾರೆ.

ಜಿಯೋಫೈಬರ್ ಪ್ರಾರಂಭದ ಸದ್ಯದ ಹಂತದಲ್ಲಿ ಕರ್ನಾಟಕದ ವಿವಿಧ ನಗರಗಳಲ್ಲಿ 20 ಲಕ್ಷಕ್ಕೂ ಹೆಚ್ಚಿನ ಮನೆಗಳನ್ನು ಸಂಪರ್ಕಿಸಲು ಜಿಯೋ ಯೋಜಿಸಿದೆ. ಜಿಯೋಫೈಬರ್ ಗ್ರಾಹಕರಿಗೆ 1 ಗಿಗಾಬೈಟ್‌ವರೆಗಿನ ವೇಗ (100 ಎಂಬಿಪಿಎಸ್ ವೇಗದಿಂದ ಪ್ರಾರಂಭ) ಮತ್ತು 4ಕೆ ಎಚ್‌ಡಿ ಸೆಟ್‌ ಟಾಪ್ ಬಾಕ್ಸ್ ಮೂಲಕ ಅಂತರ್ಗತವಾಗಿರುವ ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್, ಜ಼ೀ 5, ಆಲ್ಟ್ ಬಾಲಾಜಿ, ಕಲರ್ಸ್, ಸನ್ ನೆಕ್ಸ್ಟ್, ವೂಟ್ ಮುಂತಾದ ಅನೇಕ ಒಟಿಟಿ ವೇದಿಕೆಗಳ ಕಂಟೆಂಟ್ ಒದಗಿಸುವ ಭರವಸೆ ನೀಡುತ್ತದೆ.

English summary
Reliance Jio has stated that it now has over 20,400 4G network sites all across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X