ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಜಿಯೋ ಡೇಟಾ ಸೇವೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 26: ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್' ಬಳಕೆದಾರರಿಗಾಗಿ ಭಾರತದ ಮೊದಲ ವಿಮಾನಯಾನ ಸೇವೆಗಳನ್ನು ಪ್ರಾರಂಭಿಸಲು ರಿಲಯನ್ಸ್ ಜಿಯೋ ಪ್ಯಾನಾಸೋನಿಕ್ ಏವಿಯಾನಿಕ್ಸ್ ಕಾರ್ಪೊರೇಶನ್‌ನ ಅಂಗಸಂಸ್ಥೆ ಏರೋಮೊಬೈಲ್ ಜೊತೆ ಪಾಲುದಾರಿಕೆ ಹೊಂದಿದೆ.

ಪ್ರಸ್ತುತ, ಭಾರತೀಯರು ವಿದೇಶ ಪ್ರವಾಸ ಮಾಡುವಾಗ ಇನ್-ಫ್ಲೈಟ್ ಸೇವೆಗಳು ಲಭ್ಯವಿರುತ್ತವೆ. ಭಾರತೀಯ ವಾಯುಪ್ರದೇಶದಲ್ಲಿ ಒಮ್ಮೆ ಸೇವೆಗಳು ಲಭ್ಯವಾದರೆ, ಎಲ್ಲಾ ಜಿಯೋ ಗ್ರಾಹಕರಿಗೆ ಮೊದಲು ಪ್ರವೇಶವನ್ನು ಹೊಂದಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಜಿಯೋ, ಏರ್‌ಟೆಲ್, Vi ವಾರ್ಷಿಕ ಯೋಜನೆ: ವರ್ಷಕ್ಕೆ ಒಂದೇ ಬಾರಿ ರೀಚಾರ್ಜ್ಜಿಯೋ, ಏರ್‌ಟೆಲ್, Vi ವಾರ್ಷಿಕ ಯೋಜನೆ: ವರ್ಷಕ್ಕೆ ಒಂದೇ ಬಾರಿ ರೀಚಾರ್ಜ್

ಜಿಯೋ ವಿಮಾನಯಾನ ಸೇವೆಯು ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ಪ್ರಯಾಣಿಕರಿಗೆ ವಿಮಾನದಲ್ಲಿ ಧ್ವನಿ ಮತ್ತು ಡೇಟಾ ಸೇವೆಗಳೊಂದಿಗೆ ಸಂಪರ್ಕದಲ್ಲಿರಲು ಅನುಮತಿಸುತ್ತದೆ.

ಜಿಯೋನ ಫ್ಲೈಟ್ ಪೋಸ್ಟ್‌ಪೇಯ್ಡ್ ಯೋಜನೆಗಳು

ಜಿಯೋನ ಫ್ಲೈಟ್ ಪೋಸ್ಟ್‌ಪೇಯ್ಡ್ ಯೋಜನೆಗಳು

ಜಿಯೋನ ಫ್ಲೈಟ್ ಪೋಸ್ಟ್‌ಪೇಯ್ಡ್ ಯೋಜನೆಗಳು 499, 699 ಮತ್ತು 999 ರೂಪಾಯಿಗಳಾಗಿದ್ದು, ಪ್ರತಿಯೊಂದು 24 ಗಂಟೆಗಳ ಮಾನ್ಯತೆಯಿರುತ್ತದೆ. ವಿಮಾನದಲ್ಲಿ ಮೊದಲ ಬಳಕೆಯಿಂದ ಪ್ರಾರಂಭವಾಗಿ, 100 ನಿಮಿಷಗಳ ಹೊರಹೋಗುವ ಕರೆಗಳು ಮತ್ತು 100 ಎಸ್‌ಎಂಎಸ್ ಮತ್ತು 250 ಎಂಬಿ, 500 ಎಂಬಿ ಮತ್ತು 1 ಜಿಬಿ ಡೇಟಾ ಕ್ರಮವಾಗಿ ಹೊಂದಿದೆ.

ಯಾವೆಲ್ಲಾ ವಿಮಾನಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಇದೆ?

ಯಾವೆಲ್ಲಾ ವಿಮಾನಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಇದೆ?

ಎಮಿರೇಟ್ಸ್, ಎತಿಹಾಡ್ ಏರ್ವೇಸ್, ಲುಫ್ಥಾನ್ಸ, ಮಲೇಷಿಯನ್ ಏರ್‌ಲೈನ್ಸ್, ಸಿಂಗಾಪುರ್ ಏರ್‌ಲೈನ್ಸ್‌, ವರ್ಜಿನ್ ಅಟ್ಲಾಂಟಿಕ್, ಏರ್ ಲಿಂಗಸ್, ಏರ್ ಸೆರ್ಬಿಯಾ, ಅಲಿಟಾಲಿಯಾ, ಕ್ಯಾಥೆ ಪೆಸಿಫಿಕ್ ಸೇರಿದಂತೆ ಜಿಯೋ 22 ವಿಮಾನಯಾನ ಸಂಸ್ಥೆಗಳೊಂದಿಗೆ ವಿಮಾನಯಾನ ಮೊಬೈಲ್ ಸಂಪರ್ಕ ಸೇವೆಗಳಿಗಾಗಿ ಪಾಲುದಾರಿಕೆ ಹೊಂದಿದೆ.

JIO ಹೊಸ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆ: ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?JIO ಹೊಸ ಪೋಸ್ಟ್‌ ಪೇಯ್ಡ್‌ ಪ್ಲಸ್ ಯೋಜನೆ: ಪ್ರಿಪೇಯ್ಡ್‌ನಿಂದ ಬದಲಾಗುವುದು ಹೇಗೆ?

ಜಿಯೋ ಫ್ಲೈಟ್ ಪೋಸ್ಟ್‌ ಪೇಯ್ಡ್‌ ಯಾವಾಗ ಬಳಕೆ ಸಾಧ್ಯ?

ಜಿಯೋ ಫ್ಲೈಟ್ ಪೋಸ್ಟ್‌ ಪೇಯ್ಡ್‌ ಯಾವಾಗ ಬಳಕೆ ಸಾಧ್ಯ?

ಇನ್-ಫ್ಲೈಟ್ ಕನೆಕ್ಟಿವಿಟಿ ಪ್ಯಾಕ್ ಹೊಂದಿರುವ ಜಿಯೋ ಬಳಕೆದಾರರು ತಮ್ಮ ಫ್ಲೈಟ್ (ಬೆಂಬಲಿತ) 20,000 ಅಡಿ ಅಥವಾ ಅದಕ್ಕಿಂತ ಹೆಚ್ಚಿನದನ್ನು ತಲುಪಿದ ನಂತರ ಪ್ಯಾಕ್ ಅನ್ನು ಬಳಸಲು ಪ್ರಾರಂಭಿಸಬಹುದು. ಅವರು ತಮ್ಮ ಸ್ಮಾರ್ಟ್‌ಫೋನ್ ಆನ್ ಮಾಡಿ ಏರ್‌ಪ್ಲೇನ್ ಮೋಡ್ ಅನ್ನು ಆಫ್ ಮಾಡಬೇಕಾಗುತ್ತದೆ ಮತ್ತು ಫೋನ್ ಸ್ವಯಂಚಾಲಿತವಾಗಿ ಏರೋಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳುತ್ತದೆ. ಹ್ಯಾಂಡ್‌ಸೆಟ್ ಆಧಾರದ ಮೇಲೆ ನೆಟ್‌ವರ್ಕ್ ಹೆಸರು ಭಿನ್ನವಾಗಿರುತ್ತದೆ.

ಜಿಯೋ ಫ್ಲೈಟ್ ಪ್ಯಾಕ್‌ಗಳನ್ನು ಬಳಸುವುದು ಹೇಗೆ?

ಜಿಯೋ ಫ್ಲೈಟ್ ಪ್ಯಾಕ್‌ಗಳನ್ನು ಬಳಸುವುದು ಹೇಗೆ?

1. ಸ್ಮಾರ್ಟ್‌ಫೋನ್ ಆನ್ ಮಾಡಿ ಮತ್ತು ಏರ್‌ಪ್ಲೇನ್ ಮೋಡ್ ಅನ್ನು ಆಫ್ ಮಾಡಿ

2. ನಿಮ್ಮ ಫೋನ್ ಸ್ವಯಂಚಾಲಿತವಾಗಿ ಏರೋಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳುತ್ತದೆ. ಹ್ಯಾಂಡ್‌ಸೆಟ್ ಆಧಾರದ ಮೇಲೆ ನೆಟ್‌ವರ್ಕ್ ಹೆಸರು ಭಿನ್ನವಾಗಿರುತ್ತದೆ

3. ನಿಮ್ಮ ಫೋನ್ ಏರೋಮೊಬೈಲ್ ನೆಟ್‌ವರ್ಕ್‌ಗೆ ಸ್ವಯಂಚಾಲಿತವಾಗಿ ಸಂಪರ್ಕಗೊಳ್ಳದಿದ್ದರೆ, ನಿಮ್ಮ ಫೋನ್ ಸೆಟ್ಟಿಂಗ್‌ಗಳಲ್ಲಿ ನೀವು 'ಕ್ಯಾರಿಯರ್' ಗೆ ಹೋಗಿ ಏರೋಮೊಬೈಲ್ ಅನ್ನು ನೀವೆ ಸ್ವತಃ ಆಯ್ಕೆ ಮಾಡಬೇಕಾಗುತ್ತದೆ.

4. ಡೇಟಾ ಸೇವೆಗಳನ್ನು ಬಳಸಲು ಡೇಟಾ ರೋಮಿಂಗ್ ಆನ್ ಆಗಿದೆಯೆ ಎಂದು ಖಚಿತಪಡಿಸಿಕೊಳ್ಳಿ.

5. ಸಂಪರ್ಕಗೊಂಡ ನಂತರ, ನೀವು ವೆಲ್‌ಕಂ ಸಂದೇಶ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಸ್ವೀಕರಿಸುತ್ತೀರಿ

6. ನೀವು ಈಗ ನಿಮ್ಮ ಮೊಬೈಲ್ ಫೋನ್ ಅನ್ನು ಕರೆ ಮಾಡಲು, ಸಂದೇಶ ಕಳುಹಿಸಲು, ಇಮೇಲ್ ಮಾಡಲು ಮತ್ತು ಇಂಟರ್ನೆಟ್ ಅನ್ನು ಬಳಸಬಹುದು.

English summary
Reliance Jio has partnered with Panasonic Avionics Corporation's subsidiary, AeroMobile, to launch India's first in-flight services for 'JioPostpaid Plus' users.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X