ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಗ್ರಾಹಕರಿಗೆ ಹೊಸ ಎರಡು ಪ್ರೀಪೇಯ್ಡ್ ಯೋಜನೆಗಳು

|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ಗ್ರಾಹಕರಿಗೆ 300% ರಷ್ಟು ಹೆಚ್ಚಿನ ಪ್ರಯೋಜನಗಳನ್ನು ನೀಡುವ ಆಲ್ ಇನ್ ಒನ್ ಪ್ಲ್ಯಾನ್ ಘೋಷಿಸಿದ ಬೆನ್ನಲ್ಲೇ ರಿಲಯನ್ಸ್ ಜಿಯೋ ಎರಡು ಹೊಸ ಪ್ರೀಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ಆಲ್ ಇನ್ ಒನ್ ಯೋಜನೆ ಪ್ರಕಟಿಸಿದ್ದಾಗ ಈ ಎರಡು ಯೋಜನೆಗಳನ್ನು ರದ್ದುಗೊಳಿಸಲಾಗಿತ್ತು.

ಜಿಯೋ 98ರ ಯೋಜನೆಯಲ್ಲಿ 28 ದಿನಗಳ ವ್ಯಾಲಿಡೀಟಿ ಇದ್ದು, 2ಜಿಬಿ ಡೇಟಾ ಸಿಗಲಿದೆ. 300 ಎಸ್ಎಂಎಸ್, ಜಿಯೋ ಆಪ್ಲಿಕೇಷನ್, ಉಚಿತ ಅನಿಯಮಿತ ಕರೆ(ಜಿಯೋದಿಂದ ಜಿಯೋ ನೆಟ್ವರ್ಕ್). ಆದರೆ, ಇದರಲ್ಲಿ ಐಯು ಸಿ ನಿಮಿಷಗಳು ಸೇರಿಸಿಲ್ಲ. ತಿಂಗಳ ಯೋಜನೆ ಮಿತಿ ಮೀರಿದರೆ 64 ಕೆಬಿಪಿಎಸ್ ವೇಗದಲ್ಲಿ ಇಂಟರ್ನೆಟ್ ಪಡೆಯಬಹುದು.

ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?

ಜಿಯೋ 149 ಯೋಜನೆಯಡಿಯಲ್ಲಿ 1ಜಿಬಿ ಡೇಟಾ ಪ್ರತಿ ದಿನ, ಜಿಯೋದಿಂದ ಜಿಯೋಕ್ಕೆ ಉಚಿತ ಕತೆ ಸೌಲಭ್ಯ, 300 ನಿಮಿಷ ಜಿಯೋದಿಂದ ಬೇರೆ ನೆಟ್ವರ್ಕ್ ಗೆ ಕರೆ, 100 ಎಸ್ಎಂಎಸ್ ಪ್ರತಿ ದಿನ, ಜಿಯೋ ಅಪ್ಲಿಕೇಷನ್, 24 ದಿನಗಳ ವ್ಯಾಲಿಡಿಟಿ.

Reliance Jio Relaunches Rs 98, Rs 149 Prepaid Plans

ದೂರಸಂಪರ್ಕ ಕ್ಷೇತ್ರದ ಪೈಪೋಟಿಯಲ್ಲಿ ಉಳಿದುಕೊಳ್ಳಲು ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಮೊಬೈಲ್ ಫೋನ್ ಸೇವೆಗಳ ಟಾರಿಫ್ ದರವನ್ನು ಹೆಚ್ಚಿಸುವ ಘೋಷಣೆ ಮಾಡಿದ ಬೆನ್ನಲ್ಲೇ ರಿಲಯನ್ಸ್ ಜಿಯೋ ಕೂಡ ಗ್ರಾಹಕರಿಗೆ ಹೊರೆ ಹೆಚ್ಚಿಸಲು ಮುಂದಾಗಿತ್ತು.ಉಚಿತ ಕರೆ ಮೇಲೆ ಹೇರಿದ್ದ ಮಿತಿಯನ್ನು ತೆಗೆದು ಹಾಕಿರುವುದಾಗಿ ಟ್ವೀಟ್ ಮಾಡಿವೆ. ಎರಡೂ ಕಂಪನಿಗಳ ಪರಿಷ್ಕೃತ ದರಗಳು ಡಿಸೆಂಬರ್ 3ರಿಂದ ಜಾರಿಗೆ ಬರಲಿವೆ. ಏರ್ಟೆಲ್ ದರದಲ್ಲಿ ಶೇ 42ರಷ್ಟು ಹಾಗೂ ವೋಡಾಫೋನ್ ಐಡಿಯಾ ದರದಲ್ಲಿ ಶೇ 50ರಷ್ಟು ದರ ಏರಿಕೆಯಾಗಿದೆ.

English summary
Reliance Jio has relaunched the popular Rs 98 and Rs 149 prepaid plans for its users. The company had withdrawn these two plans after it announced new all-in-one plans with hiked mobile tariffs and limited IUC minutes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X