• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಪ್ಪೊ ಹ್ಯಾಂಡ್ ಸೆಟ್ ಖರೀದಿಯೊಂದಿಗೆ ಜಿಯೋ ಕ್ಯಾಶ್ ಬ್ಯಾಕ್

By Mahesh
|

ಬೆಂಗಳೂರು, ಜುಲೈ 02: ಒಪ್ಪೋ ಸಂಸ್ಥೆಯ 4ಜಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವ ತನ್ನ ಗ್ರಾಹಕರಿಗೆ ಕೊಡುಗೆಯಾಗಿ ರಿಲಯನ್ಸ್ ಜಿಯೋ ರೂ. 1,800ರ ಕ್ಯಾಶ್‌ಬ್ಯಾಕ್ ನೀಡುತ್ತಿದೆ.

ಒಪ್ಪೋ 4ಜಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ಜೊತೆಗೆ ಜಿಯೋ ರೂ. 3,100 ಮೌಲ್ಯದ ಹೆಚ್ಚುವರಿ ಸವಲತ್ತುಗಳನ್ನೂ ನೀಡುತ್ತಿದೆ.

ಮುಂಗಾರು ಆಫರ್ : ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಹಬ್ಬ!

'ರಿಯಲ್‌ಮಿ' ಬ್ರಾಂಡಿನ ಫೋನುಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಒಪ್ಪೋ 4ಜಿ ಮೊಬೈಲ್ ಸಾಧನ ಖರೀದಿಸುವ ಎಲ್ಲ ಹಳೆಯ ಹಾಗೂ ಹೊಸ ಜಿಯೋ ಗ್ರಾಹಕರಿಗೆ ಈ ಕ್ಯಾಶ್‌ಬ್ಯಾಕ್ ದೊರಕಲಿದೆ. ಸಪ್ಟೆಂಬರ್ 25, 2018ಕ್ಕೆ ಮುನ್ನ ರೂ. 198 ಅಥವಾ ರೂ. 299 ರೀಚಾರ್ಜ್ ಮಾಡಿಸುವ ಮೂಲಕ ಈ ಕೊಡುಗೆಯನ್ನು ಪಡೆದುಕೊಳ್ಳಬಹುದು.

ಮೊದಲ ಯಶಸ್ವಿ ರೀಚಾರ್ಜ್‌ ನಂತರ ಗ್ರಾಹಕರು ತಮ್ಮ ಮೈಜಿಯೋ ಆಪ್‌ನಲ್ಲಿ ತಲಾ ರೂ. 50ರ 36 ವೋಚರುಗಳನ್ನು ಪಡೆಯಲಿದ್ದು, ಆ ವೋಚರುಗಳನ್ನು ಭವಿಷ್ಯದ ರೂ. 198 ಅಥವಾ ರೂ. 299 ರೀಚಾರ್ಜ್‌ಗಳ ಮೇಲೆ ರಿಯಾಯಿತಿ ಪಡೆಯಲು - ಪ್ರತಿಬಾರಿಗೆ ಒಂದರಂತೆ - ಬಳಸಬಹುದಾಗಿದೆ.

ಜೊತೆಗೆ, 36 ತಿಂಗಳುಗಳ ಅವಧಿಯಲ್ಲಿ ರೂ. 198 ಅಥವಾ ರೂ. 299ರ 39 ರೀಚಾರ್ಜ್‌ಗಳನ್ನು ಮಾಡಿಸುವ ಗ್ರಾಹಕರು ತಮ್ಮ ಜಿಯೋಮನಿ ಖಾತೆಯಲ್ಲಿ ರೂ. 1,800ರ ಕ್ರೆಡಿಟ್ ಪಡೆಯಲಿದ್ದಾರೆ. ಈ ಮೊತ್ತವನ್ನು ಜಿಯೋಮನಿ ಸ್ವೀಕರಿಸುವ ಎಲ್ಲ ಸ್ಥಳಗಳಲ್ಲೂ ಬಳಸಬಹುದು.

ಮೇಕ್‌ಮೈ‌ಟ್ರಿಪ್ ಜಾಲತಾಣದಲ್ಲಿ ದೇಶೀಯ ವಿಮಾನ ಪ್ರಯಾಣ ಹಾಗೂ ಹೋಟಲ್ ವಾಸ್ತವ್ಯದ ಮೇಲೆ ಗರಿಷ್ಠ ರೂ. 1,300 ತತ್‌ಕ್ಷಣದ (ಇನ್ಸ್‌ಟಂಟ್) ರಿಯಾಯಿತಿ ನೀಡುವ ಕೂಪನ್ ಅನ್ನೂ ಜಿಯೋ ಈ ಕೊಡುಗೆಯ ಜೊತೆಗೆ ಹೆಚ್ಚುವರಿಯಾಗಿ ನೀಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Jio is offering a cashback of Rs 1,800 to subscribers who purchase 4G smartphones from Oppo. Besides the cashback, Jio is also offering benefits worth Rs 3,100 to those who purchase a 4G smartphone from the Chinese handset maker
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more