• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಜಿಯೋ ಬಂಪರ್ ಪ್ಲ್ಯಾನ್: ದಿನಕ್ಕೆ 2ಜಿಬಿ ಡೇಟಾ ಜೊತೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಹೊಸ ಯೋಜನೆಗಳನ್ನು ಪರಿಚಯಿಸಿದೆ. ಹೆಚ್ಚು ಡೇಟಾ ಬಳಸುವವರಿಗೆ ಹಾಗೂ ಐಪಿಎಲ್‌ ಉಚಿತವಾಗಿ ವೀಕ್ಷಿಸಲು ಈ ಯೋಜನೆಗಳು ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಹೀಗಾಗಿ ಕ್ರಿಕೆಟ್ ಪ್ರಿಯರಿಗಾಗಿಯೇ ಹೊಸ ಯೋಜನೆಗಳನ್ನು ಪರಿಚಯಿಸಿದೆ.

ಹೊಸ ಜಿಯೋಫೈಬರ್ 30 ದಿನ ಉಚಿತ ಟ್ರಯಲ್ ಆಫರ್ಹೊಸ ಜಿಯೋಫೈಬರ್ 30 ದಿನ ಉಚಿತ ಟ್ರಯಲ್ ಆಫರ್

598 ಬೆಲೆಯ ಹೊಸ ಯೋಜನೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ. ಡೇಟಾ ಜೊತೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯು ಇದೆ. ರಿಲಯನ್ಸ್ ಜಿಯೋ ಪರಿಚಯಿಸಿರುವ ಹೊಸ ಯೋಜನೆಗಳು ಈ ಕೆಳಕಂಡಂತಿದೆ.

401 ರೂಪಾಯಿ ಯೋಜನೆ

401 ರೂಪಾಯಿ ಯೋಜನೆ

ಈ ಯೋಜನೆಯನ್ನು ಆಯ್ದುಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದಾದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 3GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

499 ಡೇಟಾ ಆಡ್ ಆನ್ ಯೋಜನೆ

499 ಡೇಟಾ ಆಡ್ ಆನ್ ಯೋಜನೆ

ಈ ಯೋಜನೆ ಅನ್ನು ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದಾದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ1.5 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

598 ರೂಪಾಯಿ ಯೋಜನೆ

598 ರೂಪಾಯಿ ಯೋಜನೆ

ಈ ಯೋಜನೆಯನ್ನು ಆಯ್ದುಕೊಂಡರೆ ಜಿಯೋ ಬಳಕೆದಾರರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆ ಒಂದು ವರ್ಷದ ವರೆಗೆ ಉಚಿತವಾಗಿ ದೊರೆಯಲಿದೆ ಮತ್ತು ಪ್ರತಿ ದಿನ 2 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 56 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಬಳಕೆದಾರರು ಡೇಟಾವನ್ನು ಖಾಲಿ ಮಾಡಿದ ನಂತರ, ವೇಗವು 64 ಕೆಬಿಪಿಎಸ್‌ಗೆ ಇಳಿಯುತ್ತದೆ. ಈ ಯೋಜನೆಯು ದಿನಕ್ಕೆ 100 ಎಸ್‌ಎಂಎಸ್‌ಗಳ ಅನಿಯಮಿತ ಸಂದೇಶಗಳನ್ನು ನೀಡುತ್ತದೆ. ಹೊಸ ಪ್ಯಾಕ್ ಜಿಯೋ ಆಪ್ಸ್‌ಕಂಪ್ಲಿಮೆಂಟರಿ ಚಂದಾದಾರಿಕೆಯನ್ನು ಸಹ ನೀಡುತ್ತದೆ.

777 ರೂಪಾಯಿ ಯೋಜನೆ

777 ರೂಪಾಯಿ ಯೋಜನೆ

777 ರೂಪಾಯಿ ಯೋಜನೆ ಆಯ್ಕೆ ಮಾಡಿಕೊಂಡ ಗ್ರಾಹಕರಿಗೆ ಜಿಯೋ ಹೆಚ್ಚಿನ ಲಾಭವನ್ನು ಮಾಡಿಕೊಡಲಿದೆ. ಜಿಯೋ ಈ ಪ್ಲಾನ್‌ ರಿಚಾರ್ಜ್ ಮಾಡಿಸುವವರಿಗೆ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡುವುದರೊಂದಿಗೆ ಪ್ರತಿ ದಿನ 1.5 GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

2599 ರೂಪಾಯಿ ಯೋಜನೆ

2599 ರೂಪಾಯಿ ಯೋಜನೆ

ದೀರ್ಘಾವದಿ ಬಳಕೆಗಾಗಿ ಜಿಯೋ ಈ ಯೋಜನೆ ಪರಿಚಯಿಸಿದೆ. 2599 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡವರಿಗೆ ಜಿಯೋ ರೂ.399 ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ VIP ಚಂದದಾರಿಕೆಯನ್ನು ಒಂದು ವರ್ಷದ ವರೆಗೆ ನೀಡಲಿದೆ ಮತ್ತು ಒಂದು ವರ್ಷದ ಅವಧಿಗೆ ಒಟ್ಟು 740ಜಿಬಿ ಡೇಟಾದೊಂದಿಗೆ (ದಿನಕ್ಕೆ 1.5ಜಿಬಿ) ಡೇಟಾ ಸಿಗಲಿದೆ. ಇದರ ವ್ಯಾಲಿಡಿಟಿ 365 ದಿನಗಳು.

English summary
Reliance Jio has a new plan and offering that is a good fit for heavy data users. New prepaid plan is with the Disney+ Hotstar subscription.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X