ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ವರ್ಕ್ ಫ್ರಂ ಯೋಜನೆ ಪ್ರಕಟಿಸಿದ ರಿಲಯನ್ಸ್ ಜಿಯೋ

|
Google Oneindia Kannada News

ನವದೆಹಲಿ, ಮೇ 10: ಜಿಯೋ ತನ್ನ ಬಳಕೆದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಮನೆಯಿಂದಲೇ ಕುಳಿತು ಕೆಲಸವನ್ನು ಮಾಡುತ್ತಿರುವವರಿಗಾಗಿಯೇ ಆಕರ್ಷಕ 'ನ್ಯೂ ವರ್ಕ್ ಫ್ರಮ್ ಹೋಮ್ ಪ್ಲಾನ್' ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಲ್ಲದೇ, ಯಾವುದೇ ಡೇಟಾ ಖಾಲಿಯಾಗುವ ಚಿಂತೆ ಇಲ್ಲದೆ ವರ್ಷ ಪೂರ್ತಿ ಕೆಲಸ ಮಾಡಬಹುದಾಗಿದೆ.

ಹೊಸ ರೂ. 2,399ರ ಪ್ಲಾನ್‌ನಲ್ಲಿ ಗ್ರಾಹಕರು ಈ ಹಿಂದಿನ ಪ್ಲಾನ್‌ಗಿಂತ ಶೇ. 33% ಅಧಿಕ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ನಿತ್ಯ ಅಧಿಕ ಡೇಟಾ ಬಳಕೆದಾರರಿಗೆ ಈ ಪ್ಲಾನ್ ಮೌಲ್ಯಯುತವಾಗಿರಲಿದೆ. ಈ ಪ್ಲಾನ್ ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ ಎನ್ನಬಹುದಾಗಿದ್ದು, ಪ್ರತಿ ನಿತ್ಯ 2GB ಡೇಟಾವನ್ನು ನೀಡುವ ಪ್ಲಾನಿಗೆ ಗ್ರಾಹಕರು ಸರಾಸರಿ ಪ್ರತಿ ತಿಂಗಳು ನೀಡಬೇಕಾಗಿರುವುದು ರೂ. 200 ಮಾತ್ರ.

Reliance Jio launches New Work From Home Plans

ಜಿಯೋದಲ್ಲಿ 11,367 ಕೋಟಿ ರು ಹೂಡಿಕೆ ಮಾಡಿದ ಯುಎಸ್ ಕಂಪನಿ ಜಿಯೋದಲ್ಲಿ 11,367 ಕೋಟಿ ರು ಹೂಡಿಕೆ ಮಾಡಿದ ಯುಎಸ್ ಕಂಪನಿ

ಹೊಸ ಡೇಟಾ ಆಡ್-ಆನ್ ಪ್ಯಾಕ್ ವಿಶೇಷತೆ:

ಜಿಯೋ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ಹೊಸ ಆಡ್ ಆನ್ ಪ್ಯಾಕ್ ಅನ್ನು ಲಾಂಚ್ ಮಾಡಿದ್ದು, ಇದರಲ್ಲಿ ಗ್ರಾಹಕರು ಯಾವುದೇ ಡೈಲಿ ಡೇಟಾ ಕ್ಯಾಪಿಂಗ್ ಇಲ್ಲದೇ ಡೇಟಾ ಬ್ರೌಸ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಪ್ಲಾನ್‌ಗಳು ಗ್ರಾಹಕರು ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯದ ಡೇಟವನ್ನು ಬಳಕೆಗೆ ನೀಡಲಿದೆ. ಅಲ್ಲದೇ ಈ ಪ್ಲಾನ್‌ನಲ್ಲಿ ಎಲ್ಲಾ ಬಳಕೆದಾರರು ತಮ್ಮ ನಿತ್ಯ ಬಳಕೆಯ ಡೇಟಾ ಖಾಲಿ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ ಇರುವ ಆಡ್ ಆನ್ ಪ್ಲಾನ್ ವಿವರಗಳು ಹೀಗಿದೆ, ರೂ. 11ಕ್ಕೆ- 0.8 GB, ರೂ.21 ಕ್ಕೆ- 1 GB, ರೂ.31 ಕ್ಕೆ- 2 GB, ರೂ.51ಕ್ಕೆ - 6GB ಹಾಗೂ ರೂ.101 ಕ್ಕೆ - 12GB ಡೇಟಾ ಬಳಕೆಗೆ ದೊರೆಯಲಿದೆ.

ರಿಲಯನ್ಸ್ 4ನೇ ತ್ರೈಮಾಸಿಕ ವರದಿ: ಜಿಯೋ ಗ್ರಾಹಕರ ಸಂಖ್ಯೆ 38.75 ಕೋಟಿರಿಲಯನ್ಸ್ 4ನೇ ತ್ರೈಮಾಸಿಕ ವರದಿ: ಜಿಯೋ ಗ್ರಾಹಕರ ಸಂಖ್ಯೆ 38.75 ಕೋಟಿ

ಹಾಗೇ ಹೊಸ ವರ್ಕ್‌ ಫ್ರಮ್ ಹೋಮ್ ಪ್ಯಾಕ್ ನಲ್ಲಿ ರೂ.151 ಕ್ಕೆ- 30GB, ರೂ.201 ಕ್ಕೆ - 40GB ಮತ್ತು ರೂ.251ಕ್ಕೆ - 50GB ಡೇಟಾ ಬಳಕೆಗೆ ಲಭ್ಯವಿರಲಿದೆ.

English summary
Reliance Jio has just announced new Work From Home annual plan at Rs 2,399 alongside add-on data packs at Rs 151, Rs 201 and Rs 251. Here's what you need to know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X