ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋಫೈ ವಿನಿಮಯ ಆಫರ್ : ವಿಶೇಷ ಕ್ಯಾಶ್‍ಬ್ಯಾಕ್ ಗಳಿಸಿ

By Mahesh
|
Google Oneindia Kannada News

ಬೆಂಗಳೂರು, ಮೇ 02: ಡಿಜಿಟಲ್ ಇಂಡಿಯಾ ನಿರ್ಮಿಸುವ ತನ್ನ ಭರವಸೆಯನ್ನು ಸತ್ಯವಾಗಿಸುವ ನಿಟ್ಟಿನಲ್ಲಿ, ರಿಲಯನ್ಸ್ ಜಿಯೋ ಇದೀಗ ಜಿಯೋಫೈಗೆ ಹೊಸ ವಿನಿಮಯ ಆಫರ್ ಅನ್ನು ತಂದಿದೆ.

ಗ್ರಾಹಕರು ತಮ್ಮ ಹಳೆಯ ಡಾಂಗಲ್ ಅಥವಾ ಹಳೆಯ ಮಾಡೆಮ್/ ವೈಫೈ ರೂಟರ್ ಅನ್ನು ಹೊಸ ಜಿಯೋಫೈನೊಂದಿಗೆ ಆಕರ್ಷಕ ಬೆಲೆ 999 ರೂ.ಗೆ ವಿನಿಮಯ ಮಾಡಿಕೊಳ್ಳಬಹುದು. ಗ್ರಾಹಕರು ಈ ಹೊಸ ವಿನಿಮಯ ಆಫರ್‍ನ ಅಡಿಯಲ್ಲಿ 2,200 ರೂ.ನ ವಿಶೇಷ ಕ್ಯಾಶ್‍ಬ್ಯಾಕ್ ಪ್ರಯೋಜನವನ್ನು ತಕ್ಷಣವೇ ಪಡೆಯಲಿದ್ದಾರೆ.

ಜಿಯೋಫೈ ವಿನಿಮಯ ಆಫರ್ ಅನ್ನು ಪಡೆಯಲು, ಗ್ರಾಹಕರು ಸಮೀಪದ ರಿಲಯನ್ಸ್ ಡಿಜಿಟಲ್ ಸ್ಟೋರ್, ಮೈಜಿಯೋ ಸ್ಟೋರ್, ಜಿಯೋ ರಿಟೈಲರ್, ಜಿಯೋ ಪಾಯಿಂಟ್‍ಗೆ ಭೇಟಿ ನೀಡಬಹುದು ಮತ್ತು 999 ರೂ.ಗೆ ಹೊಸ ಜಿಯೋಫೈ ಖರೀದಿಸಬೇಕು. ಗ್ರಾಹಕರು ವೆಬ್ ಸೈಟಿನಲ್ಲಿ ಕೂಡಾ ಈ ಆಫರ್ ಅನ್ನು ಹೊಂದಬಹುದಾಗಿದೆ.

Reliance Jio launches exchange offer for JioFi device with Rs 2,200 cashback
ಗ್ರಾಹಕರು 198 ರೂ. ಅಥವಾ 299 ರೂ.ನ ಮೊದಲ ರಿಚಾರ್ಜ್ ಹಾಗೂ ಜಿಯೋ ಪ್ರೈಮ್ ಸದಸ್ಯತ್ವದೊಂದಿಗೆ ಹೊಸ ಜಿಯೋ ಸಿಮ್ ಅನ್ನು ಆಕ್ಟಿವೇಟ್ ಮಾಡಬೇಕಾಗುತ್ತದೆ.

ಗ್ರಾಹಕರು ಹೊಸ ಜಿಯೋ ಸಿಮ್ ಆಕ್ಟಿವೇಶನ್ ಆದ 15 ದಿನಗಳೊಳಗೆ ರಿಟೈಲರ್ /ಮಳಿಗೆಗೆ ಹಳೆಯ ಡಾಂಗಲ್ ಅನ್ನು ಮರಳಿಸಬಹುದು. ಹಳೆಯ ಡಿವೈಸ್ ನೀಡಿದ್ದಕ್ಕೆ ಪ್ರತಿಯಾಗಿ ಗ್ರಾಹಕರು ತಮ್ಮ ಮೈಜಿಯೋ ಖಾತೆಯಲ್ಲಿ 2200 ರೂ. ಮೌಲ್ಯದ ಕ್ಯಾಶ್‍ಬ್ಯಾಕ್ ವೋಚರ್ ಪಡೆಯಲಿದ್ದಾರೆ. ಈ ಕ್ಯಾಶ್‍ಬ್ಯಾಕ್ 50 ರೂ.ಗಳ 44 ವೋಚರ್‍ಗಳ ರೂಪದಲ್ಲಿರಲಿದೆ, ಇದು ಮೈಜಿಯೋ ಖಾತೆಯಲ್ಲಿ ಭವಿಷ್ಯದಲ್ಲಿ ನಡೆಸುವ 198 ರೂ. ಅಥವಾ 299 ರೂ.ಗಳ ರಿಚಾರ್ಜ್‍ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ.

ಸೀಮಿತ ಅವಧಿಯ ಈ ವಿನಿಮಯ ಆಫರ್‍ನೊಂದಿಗೆ ಹೊಸ ಜಿಯೋಫೈ ಗ್ರಾಹಕರು ಅನಿಯಮಿತ ಡಾಟಾ (ಎಫ್‍ಯುಪಿ ಪ್ಲಾನ್ ಪ್ರಕಾರ ಪ್ರತಿದಿನ ಹೈ ಸ್ಪೀಡ್ 4ಜಿ ಡಾಟಾ ಸಹಿತ), ಎಚ್‍ಡಿ ಧ್ವನಿ ಕರೆಗಳು ಮತ್ತು ವೀಡಿಯೋ ಕರೆಗಳು, ಎಸ್‍ಎಂಎಸ್, ಹಾಗೂ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್, ಜಿಯೋಮ್ಯಾಗ್ಸ್, ಜಿಯೋಎಕ್ಸ್ ಪ್ರೆಸ್‍ನ್ಯೂಸ್, ಜಿಯೋಸೆಕ್ಯೂರಿಟಿ ಇತ್ಯಾದಿ ಜಿಯೋ ಆಪ್‍ಗಳ ಸಹಿತ ಸಂಪೂರ್ಣ ಜಿಯೋ ಸೇವೆಗಳ ಗುಚ್ಛವನ್ನು ಹೊಂದಬಹುದಾಗಿದೆ.

English summary
Jio has announced a new exchange offer for its customers looking to buy a Wi-Fi dongle. Under this offer, customers will get the JioFi 4G hotspot device at Rs 999 upon exchanging their old modem or dongle or router for a new JioFi device.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X