ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋದಿಂದ ಹೊಸ ಆಲ್-ಇನ್-ಒನ್ ಪ್ಲಾನ್‌, ದರ 40% ಹೆಚ್ಚಳ

|
Google Oneindia Kannada News

ಮುಂಬೈ, ಡಿಸೆಂಬರ್ 02: ಭಾರ್ತಿ ಏರ್ ಟೆಲ್, ವೋಡಾಫೋನ್ ಐಡಿಯಾ ನಂತರ ರಿಲಯನ್ಸ್ ಜಿಯೋ ತನ್ನ ಪ್ಲಾನ್ ದರದಲ್ಲಿ ಶೇ40ರ ತನಕ ಹೆಚ್ಚಳ ಘೋಷಿಸಿದೆ. ಇದರಿಂದ 300%ವರೆಗೆ ಹೆಚ್ಚಿನ ಪ್ರಯೋಜನ ದೊರಕಲಿದೆ ಎಂದು ಹೇಳಿದೆ.

ಎಲ್ಲ ಬಗೆಯ ಗ್ರಾಹಕರ ಅಗತ್ಯ ಪೂರೈಸಲು ವಿಭಿನ್ನ ದರಗಳಲ್ಲಿ ದೊರಕಲಿರುವ ಹೊಸ ಹೊಸ ಆಲ್-ಇನ್-ಒನ್ ಪ್ಲಾನ್‌ ಪ್ಲಾನ್‌ ಹೊರ ತಂದಿದೆ.

ಡಿಸೆಂಬರ್ 03 ರಿಂದ ಭಾರ್ತಿ ಏರ್ ಟೆಲ್, ವೋಡಾ- ಐಡಿಯಾ ದರ ಏರಿಕೆಡಿಸೆಂಬರ್ 03 ರಿಂದ ಭಾರ್ತಿ ಏರ್ ಟೆಲ್, ವೋಡಾ- ಐಡಿಯಾ ದರ ಏರಿಕೆ

ಇತರ ಮೊಬೈಲ್ ಜಾಲಗಳಿಗೆ ಮಾಡುವ ಕರೆಗಳಿಗಾಗಿ ಈ ಪ್ಲಾನ್‌ಗಳಲ್ಲಿ ನ್ಯಾಯೋಚಿತ ಬಳಕೆಯ ನೀತಿ ಇರಲಿದೆ. ಹೊಸ ಪ್ಲಾನ್‌ಗಳು 6ನೇ ಡಿಸೆಂಬರ್ 2019ರಿಂದ (06/12/2019) ಅನ್ವಯವಾಗಲಿವೆ.

Reliance Jio Introduces New All-in-One Plans

ಹೊಸ ಆಲ್-ಇನ್-ಒನ್ ಪ್ಲಾನ್‌ಗಳ ದರದಲ್ಲಿ 40%ವರೆಗೆ ಹೆಚ್ಚಳವಾಗಲಿದೆಯಾದರೂ, ತನ್ನ ಗ್ರಾಹಕ-ಪ್ರಥಮ ಭರವಸೆಗೆ ಅನುಗುಣವಾಗಿ, ಜಿಯೋ ಗ್ರಾಹಕರು 300%ವರೆಗೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲಿದ್ದಾರೆ.

ಅಂತಿಮವಾಗಿ ಗ್ರಾಹಕರ ಹಿತಾಸಕ್ತಿಗೆ ಬದ್ಧವಾಗಿರುವಂತೆಯೇ, ಭಾರತೀಯ ದೂರಸಂಪರ್ಕ ಉದ್ಯಮದ ಪೋಷಣೆಯಲ್ಲಿ ನೆರವಾಗಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಜಿಯೋ ತೆಗೆದುಕೊಳ್ಳಲಿದೆ.

ಟೆಲಿಕಾಂ ಶುಲ್ಕ ಪರಿಷ್ಕರಣೆಯ ಸಮಾಲೋಚನೆ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡುವುದನ್ನು ಜಿಯೋ ಮುಂದುವರಿಸಲಿದೆ ಮತ್ತು ಇತರ ಎಲ್ಲ ಪಾಲುದಾರರ ಭಾಗವಹಿಸುವಿಕೆಯನ್ನು ಎದುರು ನೋಡುತ್ತಿದೆ.

English summary
After Airtel and Vodafone, Reliance Jio Introduces New All-in-One Plans with increased Tariffs By Up To 40 Percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X