ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಎಫೆಕ್ಟ್ : ಉಚಿತ ಕರೆ ಆಫರ್ ನೀಡಿದ ಬಿಎಸ್ಎನ್ಎಲ್

By Mahesh
|
Google Oneindia Kannada News

ಬೆಂಗಳೂರು, ಸೆ. 23: ಟೆಲಿಕಾಂ ಕ್ಷೇತ್ರದ ದರ ಸಮರದಲ್ಲಿ ಹೊಸ ಕ್ರಾಂತಿ ಉಂಟು ಮಾಡಿರುವ ರಿಯಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಬಿಎಸ್ಎನ್ಎಲ್ ಮುಂದಾಗಿದೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಉಚಿತ ವಾಯ್ಸ್ ಕಾಲ್ ಯೋಜನೆ ನೀಡಿದೆ. ರಿಲಯನ್ಸ್ ಜಿಯೋ ತನ್ನ 4 ಜಿ ಬಳಕೆದಾರರಿಗೆ ಮಾತ್ರ ಉಚಿತ ಕರೆ ಸೌಲಭ್ಯ ಸೀಮಿತಗೊಳಿಸಿದೆ.

Reliance Jio effect: BSNL to reportedly offer free voice calling to its broadband users

ಆದರೆ, ಬಿಎಸ್‌ಎನ್‌ಎಲ್‌ನ ಹೊಸ ಸೌಲಭ್ಯದ ಮೂಲಕ 4 ಜಿ ಗ್ರಾಹಕರ ಜತೆಗೆ 2ಜಿ ಹಾಗೂ 3ಜಿ ಬಳಕೆದಾರರು ಕೂಡಾ ಉಚಿತ್ತ ವಾಯ್ಸ್ ಕಾಲ್ ಪಡೆಯಬಹುದು.[ಜಿಯೋ ಲೋಕಾರ್ಪಣೆ: ಗ್ರಾಹಕರಿಗೆ ವಾಯ್ಸ್ ಕಾಲ್ ಉಚಿತ]

ಬಿಎಸ್‌ಎನ್‌ಎಲ್ ಮೊಬೈಲ್ ಬ್ರಾಡ್‌ಬ್ಯಾಂಡ್ ಹೊಂದಿದವರಿಗೆ ಈ ಸೌಲಭ್ಯ ದೊರೆಯಲಿದೆ. ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು 149 ರು ಗಿಂತ ಕಡಿಮೆ ದರ ಪಟ್ಟಿ ಹಾಗೂ ವ್ಯಾಲಿಡಿಟಿಯನ್ನು ನೀಡಲು ಬಿಎಸ್ ಎನ್ ಎಲ್ ಮುಂದಾಗಿದೆ. ಒಡಿಶಾ, ಪಂಜಾಬ್, ಉತ್ತರಪ್ರದೇಶ, ಕೇರಳ,ಹರ್ಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಹೆಚ್ಚಿನ ಗ್ರಾಹಕರನ್ನು ಬಿಎಸ್ ಎನ್ ಎಲ್ ಹೊಂದಿದೆ.[ಜಿಯೋ ಎಫೆಕ್ಟ್: ಏರ್ ಟೆಲ್ ಇಂಟರ್ನೆಟ್ ದರ ಕಡಿತ]

ಜಿಯೋಗಿಂತ 2-4 ರು ಕಡಿಮೆಯಾಗಲಿದೆ. ಬ್ರಾಡ್ ಬ್ಯಾಂಡ್ ಹೊಂದಿರುವ ಮೊಬೈಲ್ ಗ್ರಾಹಕರಿಗೆ ಈ ಸೌಲಭ್ಯ ಲಭ್ಯ ಎಂದು ಬಿಎಸ್ ಎನ್ ಎಲ್ ನ ಚೇರ್ಮನ್ ಅನುಪಮ್ ಶ್ರೀವಾತ್ಸವ ಹೇಳಿದ್ದಾರೆ. ಬಿಎಸ್ ಎನ್ ಎಲ್ ನ ಈ ಹೊಸ ಆಫರ್ ನಿಂದಾಗಿ ಏರ್ ಟೆಲ್,ವೋಡಾ ಫೋನ್ ಹಾಗೂ ಐಡಿಯಾ ಕೂಡಾ ದರ ಕಡಿತಕ್ಕೆ ಮುಂದಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

English summary
After Reliance Jio, BSNL is gearing up to offer free voice calling to its broadband users. Its plans will be cheaper by Rs 2-4 than Jio’s entry plan of Rs 149.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X