• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

4ಜಿ: ಭಾರ್ತಿ ಏರ್ ಟೆಲ್ ಗೆ 12 ವರುಷ, ಜಿಯೋಗೆ 83 ದಿನ!

By Mahesh
|

ಬೆಂಗಳೂರು, ನವೆಂಬರ್ 30: ಮುಖೇಶ್ ಅಂಬಾನಿಯವರ ನೇತೃತ್ವದಡಿಯಲ್ಲಿ ಹೊರಬಂದಿರುವ ಜಿಯೋ, ತನ್ನ ಪಕ್ವವಾದ ೪ಜಿ ಸವಲತ್ತುಗಳೊಂದಿಗೆ ಬಿಡುಗಡೆಯಾದ ಮೂರೇ ತಿಂಗಳುಗಳ ಒಳಗಾಗಿ ದೇಶದ ಅತೀ ದೊಡ್ಡ (ವಿಸ್ತಾರ ತರಂಗ) ಬ್ರಾಡ್ ಬ್ಯಾಂಡ್ ಆಪರೇಟರಾಗಿ ಹೊರಹೊಮ್ಮಿದೆ.

ಮೂಲಗಳ ಪ್ರಕಾರ, ಜಿಯೋ ಹೊಸದೊಂದು ದಾಖಲೆಯನ್ನು ನಿರ್ಮಿಸುತ್ತಾ, ಪ್ರತೀ ನಿಮಿಷಕ್ಕೆ 1000 (ಸಪ್ಟೆಂಬರ್ 5ರ ನಂತರ) ಚಂದಾದಾರರನ್ನು ಹಾಗೂ ಪ್ರತೀ ದಿನಕ್ಕೆ 6 ಲಕ್ಷ ಚಂದಾದಾರರನ್ನು ಪಡಕೊಂಡಿದೆ.[ಫೇಸ್ಬುಕ್, ವಾಟ್ಸಪ್ ದಾಖಲೆ ಮುರಿದ ರಿಲಯನ್ಸ್ ಜಿಯೋ]

"ಜಿಯೋ ವಿಶ್ವದಲ್ಲೇ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಕಂಪೆನಿ ಹಾಗೂ ಆರಂಭಗೊಂಡ 83 ದಿನಗಳಲ್ಲಿ ದಾಖಲೆಯ 50 ಮಿಲಿಯನ್ ಚಂದಾದಾರರನ್ನು ಒಳಗೊಂಡಿದೆ" ಎನ್ನುತ್ತವೆ ಮೂಲಗಳು.[ರಿಲಯನ್ಸ್ ಜುವೆಲ್ಸ್ ವಧುವಿಗಾಗಿ ವಿಶೇಷ ಆಭರಣ ಗ್ಯಾಲರಿ]

ಏರ್ ಟೆಲ್ ಈ 50 ಮಿಲಿಯನ್ ಮೈಲುಗಲ್ಲನ್ನು ತಲುಪಲು ಬರೋಬ್ಬರಿ 12 ವರುಷಗಳನ್ನು ತೆಗೆದುಕೊಂಡಿದ್ದರೆ, ಐಡಿಯಾ ಹಾಗೂ ವೊಡಾಫೋನ್ ಗಳಿಗೆ ಈ ಸಂಖ್ಯೆಯನ್ನು ತಲುಪಲು ತಲಾ 13 ವರುಷಗಳು ಬೇಕಾಯಿತು.

4ಜಿ ಮಾರುಕಟ್ಟೆಯಲ್ಲಿ ಹೊಸದಾಗಿ ಪ್ರವೇಶ

4ಜಿ ಮಾರುಕಟ್ಟೆಯಲ್ಲಿ ಹೊಸದಾಗಿ ಪ್ರವೇಶ

4ಜಿ ಮಾರುಕಟ್ಟೆಯಲ್ಲಿ ಹೊಸದಾಗಿ ಪ್ರವೇಶವಾಗಿರುವ ರಿಲಾಯಾನ್ಸ್ ಜಿಯೋ ಇನ್ಫೋಕಾಮ್ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಏರ್ ಟೆಲ್, ಐಡಿಯಾ, ವೊಡಾಫೋನ್ ಜೊತೆಗೆ ಸ್ಪರ್ಧಿಸುತ್ತಿದೆ. ತನ್ನ ವಾಣಿಜ್ಯ ವಹಿವಾಟನ್ನು ಸಪ್ಟೆಂಬರ್ 5ರಿಂದ ಆರಂಭಿಸಿ, ಸದ್ಯದ ಸಮಾಚಾರಗಳ ಪ್ರಕಾರ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ಮೊದಲ ತಿಂಗಳಿನಲ್ಲಿ 16 ಮಿಲಿಯನ್ ಬಳಕೆದಾರರನ್ನು ಸಂಪಾದಿಸಿತ್ತು.

ಜಿಯೋ ಚಂದಾದಾರರ ಸಂಖ್ಯೆ

ಜಿಯೋ ಚಂದಾದಾರರ ಸಂಖ್ಯೆ

ಜಿಯೋ ಚಂದಾದಾರರ ಸಂಖ್ಯೆ ಈಗಾಗಲೇ ಭಾರತಿ ಏರ್ ಟೆಲ್ ನ 1/5ನೇ ಭಾಗದಷ್ಟು ತಲುಪಿದೆ ಎಂಬ ಮಾಹಿತಿಯಿದೆ. ಅಕ್ಟೋಬರ್ ಹೊತ್ತಿಗೆ ಏರ್ ಟೆಲ್ ನ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 262.67 ಮಿಲಿಯನ್. ಸೆಲ್ಯುಲಾರ್ ಅಸೋಸಿಯೇಶನ್ (ಸಿ.ಒ,ಎ,ಐ) ನ ಮಾಹಿತಿಯ ಪ್ರಕಾರ ಭಾರತದಲ್ಲಿ ವೊಡಾಫೋನ್ ಗೆ 201.90 ಮಿಲಿಯನ್ ಚಂದಾದಾರಾರು ಹಾಗೂ ಐಡಿಯಾ ಸೆಲ್ಯುಲಾರ್ ಗೆ 180.25 ಮಿಲಿಯನ್ ಬಳಕೆದಾರರಿದ್ದಾರೆ.

ಅತೀ ದೊಡ್ಡ ಡಿಜಿಟಲ್ ಸರ್ವಿಸ್ ಆಪರೇಟರ್

ಅತೀ ದೊಡ್ಡ ಡಿಜಿಟಲ್ ಸರ್ವಿಸ್ ಆಪರೇಟರ್

ಜಿಯೋ ಭಾರತದ ಅತೀ ದೊಡ್ಡ ಡಿಜಿಟಲ್ ಸರ್ವಿಸ್ ಆಪರೇಟರ್ ಆಗಿ ಹೊರಹೊಮ್ಮುತ್ತಿದ್ದು, ಬ್ರಾಡ್ ಬ್ಯಾಂಡ್ ಗ್ರಾಹಕರ ಪೈಕಿ ಏರ್ ಟೆಲ್ ಕಳೆದ 6 ವರ್ಷಗಳಲ್ಲಿ ಸಂಪಾದಿಸಿದ 41 ಮಿಲಿಯನ್ 3ಜಿ ಹಾಗೂ 4ಜಿ ಗ್ರಾಹಕರ ಸಂಖ್ಯೆಯನ್ನೂ ಮೀರಿಸಿದೆ ಎಂದೂ ಮಾಹಿತಿ ಲಭ್ಯವಾಗಿದೆ. ಕೇವಲ 4ಜಿ ಸಂಪರ್ಕವನ್ನು ಹೋಲಿಸಿದರೆ ಜಿಯೋ ನ ಗ್ರಾಹಕರ ಸಂಖ್ಯೆ ಈ ಹೊತ್ತು ಏರ್ ಟೆಲ್ ನ ಗ್ರಾಹಕರ ಸಂಖ್ಯೆಕ್ಕಿಂತ (ಸರಿಸುಮಾರು 10 ಮಿಲಿಯನ್) ಐದು ಪಾಲು ಜಾಸ್ತಿಯಿದೆ.

ಮುಖೇಶ್ ಅಂಬಾನಿ ಕನಸು

ಮುಖೇಶ್ ಅಂಬಾನಿ ಕನಸು

ಟೆಲಿಕಾಂ ಜಗತ್ತಿನ ತಮ್ಮ ಹೊಸ ಪ್ರಯತ್ನ 100 ಮಿಲಿಯನ್ ಗ್ರಾಹಕರನ್ನು ಹೊಂದಿ ಬಹಳ ಕಡಿಮೆ ಸಮಯಾವಧಿಯಲ್ಲಿ ಜಗತ್ತಿನಲ್ಲೇ ಹೊಸದೊಂದು ದಾಖಲೆಯನ್ನು ಮಾಡಲಿದೆ ಎಂದು ಆರ್.ಐ.ಲ್ ನ ವಾರ್ಷಿಕ ಸಭೆಯಲ್ಲಿ ಅಂಬಾನಿಯವರು ತಮ್ಮ ನೂತನ ಸಾಹಸದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದರೆ ಇದು ಪ್ರತೀ ತಿಂಗಳು 250 ಕೋಟಿ ಗಿಗಾ ಬೈಟ್ ನಷ್ಟು ಡೇಟಾ ಉಪಯೋಗ ಮಾಡಿದಂತಾಗುತ್ತದೆ

ಡೇಟಾ ಸರ್ವಿಸ್ ಗಳಿಗೆ ಶುಲ್ಕ

ಡೇಟಾ ಸರ್ವಿಸ್ ಗಳಿಗೆ ಶುಲ್ಕ

2017ರ ಜನವರಿ 1ರಿಂದ ಡೇಟಾ ಸರ್ವಿಸ್ ಗಳಿಗೆ ಶುಲ್ಕ ಕಟ್ಟ ಬೇಕಾಗುತ್ತದೆ. ಅಪರೂಪಕ್ಕೆ ಡೇಟಾ ಉಪಯೋಗಿಸುವವರಿಗಾಗಿ ಪ್ರತೀ ದಿನಕ್ಕೆ ರೂ.19, ಕಡಿಮೆ ಡೇಟಾ ಉಪಯೋಗಿಸುವವರಿಗಾಗಿ ರೂ.149/ತಿಂಗಳು ಹಾಗೂ ಹೆಚ್ಚಾಗಿ ಡೇಟಾ ಉಪಯೋಗಿಸುವ ಚಂದಾದಾರರಿಗಾಗಿ ರೂ.4,999/ತಿಂಗಳು ಇಂತಹ ಪ್ಲಾನ್ ಗಳನ್ನು ಮಾಡಿಕೊಂಡಿದೆ. ಜೊತೆಗೆ ವಾಯ್ಸ್ ಹಾಗೂ ರೋಮಿಂಗ್ ಸರ್ವಿಸ್ ಗಳನ್ನು ಜೀವನಪರ್ಯಂತ ಉಚಿತವಾಗಿ ನೀಡುತ್ತದೆ ಎಂದು ಭರವಸೆಯನ್ನೂ ನೀಡಿದೆ ಜಿಯೋ.

English summary
Mukesh Ambani-promoted Reliance Jio has crossed the 50 million subscriber mark in less than three months after its full-fledged 4G services launch to emerge as the largest broadband operator in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X