ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋ ಗ್ರಾಹಕರಿಗೆ ಹೊಸ 'ಆಲ್​ ಇನ್​ ಒನ್​ ' ಯೋಜನೆ

|
Google Oneindia Kannada News

ರಿಲಯನ್ಸ್​ ಜಿಯೋ ತನ್ನ ಗ್ರಾಹಕರಿಗೆ ಆಲ್​ ಇನ್​ ಒನ್​ ಹೆಸರಿನ ಯೋಜನೆಯನ್ನು ಆರಂಭಿಸಿದೆ. ಈ ಹೊಸ ಪ್ರೀಪೇಯ್ಡ್ ಯೋಜನೆಯ 222 ರೂ ನಿಂದ ಆರಂಭವಾಗುತ್ತದೆ. ಈ ಯೋಜನೆಯಿಂದ ಜಿಯೋ ನೆಟ್​ವರ್ಕ್​ನಿಂದ ಮತ್ತೊಂದು ಜಿಯೋ ನೆಟ್​ವರ್ಕ್​ಗೆ ಅನಿಯಮಿತ ಉಚಿತ ಕರೆ ಮಾಡುವ ಸೌಲಭ್ಯ ನೀಡಿದೆ. ಇದಲ್ಲದೆ ಪ್ರತಿದಿನ 2ಜಿಬಿ ಡೇಟಾ ಪಡೆಯಬಹುದಾಗಿದೆ.

ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?

Recommended Video

ಯಾವ ನಗರಗಳಲ್ಲಿ 'ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್' | Oneindia Kannada

ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜ್ (ಐಯುಸಿ) ಕುರಿತು ರೂಪಿಸಲಾಗಿದ್ದ ಕಾನೂನು ರದ್ದುಗೊಳಿಸುವ ನಿಟ್ಟಿನಲ್ಲಿ ಜಿಯೋ ತನ್ನ ಹೋರಾಟವನ್ನು ಮುಂದುವರೆಸಿದೆ. ಪ್ರತಿ ನಿಮಿಷಕ್ಕೆ 6 ಪೈಸೆ ಟರ್ಮಿನೇಶನ್ ಶುಲ್ಕವನ್ನು ಗ್ರಾಹಕರಿಂದ ಅನಿವಾರ್ಯವಾಗಿ ಹಿಂಪಡೆದ ಬಳಿಕ ಈಗ ಆಲ್ ಇನ್ ಒನ್ ಯೋಜನೆ ಪ್ರಕಟಿಸಿದೆ. ಇದರಲ್ಲಿ ಐಯುಸಿ ಶುಲ್ಕ ಕೂಡಾ ಸೇರಿದೆ.

ಐಎಂಸಿ 2019: ಜಿಯೋ ಮತ್ತು ಸ್ಯಾಮ್‌ಸಂಗ್ 5G ಮತ್ತು LTE ಪ್ರದರ್ಶನಐಎಂಸಿ 2019: ಜಿಯೋ ಮತ್ತು ಸ್ಯಾಮ್‌ಸಂಗ್ 5G ಮತ್ತು LTE ಪ್ರದರ್ಶನ

ಒಂದು ನಿರ್ದಿಷ್ಟ ಮೊಬೈಲ್ ಸಂಸ್ಥೆಯ ಗ್ರಾಹಕರು ಬೇರೊಂದು ಸಂಸ್ಥೆಯ ಗ್ರಾಹಕರಿಗೆ ಹೊರಹೋಗುವ (ಔಟ್‌ಗೋಯಿಂಗ್) ಮೊಬೈಲ್ ಕರೆ ಮಾಡಿದಾಗ, ಕರೆ ಮಾಡಿದ ಗ್ರಾಹಕರ ಸಂಸ್ಥೆಯು ಎರಡನೇ ಸಂಸ್ಥೆಗೆ ನೀಡಬೇಕಾದ ಶುಲ್ಕವೇ ಇಂಟರ್‌ಕನೆಕ್ಟ್ ಯೂಸೇಜ್ ಚಾರ್ಜ್ ಅಥವಾ ಐಯುಸಿ. ಎರಡು ವಿಭಿನ್ನ ಜಾಲಗಳ ನಡುವಿನ ಈ ಕರೆಗಳನ್ನು ಮೊಬೈಲ್ ಆಫ್-ನೆಟ್ ಕರೆಗಳೆಂದು ಗುರುತಿಸಲಾಗುತ್ತದೆ. ಐಯುಸಿ ಶುಲ್ಕವನ್ನು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಗದಿಪಡಿಸುತ್ತದೆ ಮತ್ತು ಸದ್ಯ ಅದು ಪ್ರತಿ ನಿಮಿಷಕ್ಕೆ 6

222 ರೂ ನಿಂದ 'ಆಲ್​ ಇನ್​ ಒನ್​ ' ಯೋಜನೆ ಆರಂಭ

222 ರೂ ನಿಂದ 'ಆಲ್​ ಇನ್​ ಒನ್​ ' ಯೋಜನೆ ಆರಂಭ

222ರೂ ಅಲ್ಲದೆ, 333 ರೂ. ಹಾಗೂ 444ರೂಪಾಯಿಗಳ ಪ್ರಿಪೇಯ್ಡ್​ಗೆ ದಿನಕ್ಕೆ 2ಜಿಬಿ ಡೇಟಾ ನೀಡುವ ಜತೆಗೆ ಜಿಯೋ ನೆಟ್​ವರ್ಕ್​ನಿಂದ ಮತ್ತೊಂದು ಜಿಯೋ ನೆಟ್​ವರ್ಕ್​ಗೆ ಅನಿಯಮಿತ ಉಚಿತ ಕರೆ ಮಾಡುವ ಸೌಲಭ್ಯ ನೀಡಿದೆ. ಇಲ್ಲಿಯವರೆಗೆ ಮೂರು ತಿಂಗಳ ಅವಧಿಗೆ 2 ಜಿಬಿ ಡೇಟಾ ಪಡೆಯಲು 448 ರೂಪಾಯಿ ಪ್ರಿಪೇಯ್ಡ್ ಮಾಡಬೇಕಿತ್ತು. ಆದರೆ, ಈಗ 444ರೂಪಾಯಿನಲ್ಲೇ ಕೈಗೆಟಕುವಂತಾಗಿದೆ. ಜಿಯೋ ನೀಡಿರುವ ಈ ಪ್ಲ್ಯಾನ್​ 20 ರಿಂದ 50 ಪರ್ಸಂಟ್​ ಕಡಿಮೆ ಬೆಲೆಯದ್ದಾಗಿದೆ. ಸದ್ಯ ಪ್ರತಿದಿನ 1.5 ಜಿಬಿ ಡೇಟಾ ಪಡೆಯುತ್ತಿರುವ ಗ್ರಾಹಕರಿಗೆ ಜಿಯೋದ ಹೊಸ ಯೋಜನೆಗಳು ತುಂಬ ಅನುಕೂಲಕರವಾಗಲಿವೆ.

ಜಿಯೋ 'ಆಲ್-ಇನ್-ಒನ್' ಪ್ಲಾನ್‌ಗಳ ವೈಶಿಷ್ಟ್ಯ

ಜಿಯೋ 'ಆಲ್-ಇನ್-ಒನ್' ಪ್ಲಾನ್‌ಗಳ ವೈಶಿಷ್ಟ್ಯ

ಇವು ಸರಳ ಹಾಗೂ ಗೊಂದಲರಹಿತ ಪ್ಲಾನ್‌ಗಳಾಗಿದ್ದು, ಎಲ್ಲ ಸೇವೆಗಳೂ ಒಂದೇ ಪ್ಲಾನ್‌ನಲ್ಲಿ ಲಭ್ಯವಿರುವುದರ ಜೊತೆಗೆ ಅವುಗಳ ದರವನ್ನು ನೆನಪಿಟ್ಟುಕೊಳ್ಳುವುದೂ ಸುಲಭವಾಗಿದೆ. ಅಪರಿಮಿತ ವಾಯ್ಸ್, ಎಸ್ಸೆಮ್ಮೆಸ್, ಆಪ್‌ಗಳ ಜೊತೆಗೆ ಪ್ರತಿದಿನ 2 ಜಿಬಿ ಡೇಟಾವನ್ನೂ ನೀಡುವ ಈ ಪ್ಲಾನ್‌ಗಳಿಂದ ಗ್ರಾಹಕರಿಗೆ ಅಭೂತಪೂರ್ವ ಮೌಲ್ಯ ದೊರಕಲಿದೆ.

ಅಲ್ಲದೆ, ಇತರ ಸಂಸ್ಥೆಗಳ ಸದ್ಯದ ಪ್ಲಾನ್‌ಗಳ ಹೋಲಿಕೆಯಲ್ಲಿ 20-50% ಕಡಿಮೆ ಬೆಲೆಯಲ್ಲಿ ದೊರಕುವ ಇವು ಮಾರುಕಟ್ಟೆಯಲ್ಲೇ ಅತ್ಯಂತ ಕಡಿಮೆ ದರದ ಪ್ಲಾನ್‌ಗಳಾಗಿವೆ. ಮೂಲ ಪ್ಲಾನ್ ದರದ ಮೇಲೆ ಹೆಚ್ಚುವರಿಯಾಗಿ ಪಾವತಿಸುವ ಪ್ರತಿ ರೂ. 111 ಹೆಚ್ಚುವರಿ ಪಾವತಿಗೆ ಪ್ರತಿಯಾಗಿ ಗ್ರಾಹಕರು ಒಂದು ತಿಂಗಳ ಸೇವೆ ಪಡೆಯಬಹುದಾಗಿದೆ. ಅಂದರೆ, ಕೇವಲ ರೂ. 111ರಲ್ಲಿ ಒಂದು ತಿಂಗಳ ಸೇವೆ ಪಡೆದುಕೊಳ್ಳುವುದು ಈ ಮೂಲಕ ಸಾಧ್ಯವಾಗಲಿದೆ.

ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?ಜಿಯೋ ತನ್ನ ಗ್ರಾಹಕರಿಗೆ ಶುಲ್ಕ ವಿಧಿಸಿದ ಹಿಂದಿನ ರಹಸ್ಯವೇನು?

ಜಿಯೋ ದೈನಿಕ 1.5 ಜಿಬಿ ಪ್ಲಾನ್‌ನೊಡನೆ ಹೋಲಿಸಿದರೆ

ಜಿಯೋ ದೈನಿಕ 1.5 ಜಿಬಿ ಪ್ಲಾನ್‌ನೊಡನೆ ಹೋಲಿಸಿದರೆ

ಸದ್ಯ ದೈನಿಕ 1.5 ಜಿಬಿ ಪ್ಲಾನ್‌ ಬಳಸುತ್ತಿರುವ ಗ್ರಾಹಕರಿಗೆ ಈ ಹೊಸ ಪ್ಲಾನ್‌ಗಳು ಒಂದು ರೂಪಾಯಿಗೆ ಒಂದು ಜಿಬಿಯಂತೆ ಹೆಚ್ಚುವರಿ ಡೇಟಾ ನೀಡಲಿವೆ. ಅಷ್ಟೇ ಅಲ್ಲದೆ, 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳೂ ಅವರಿಗೆ ಉಚಿತವಾಗಿ ದೊರಕಲಿವೆ. ಇದೇ ಸೌಲಭ್ಯವನ್ನು ಪ್ರತ್ಯೇಕವಾಗಿ ಖರೀದಿಸಿದ್ದಲ್ಲಿ ಅವರು ರೂ. 80 ವೆಚ್ಚ ಮಾಡಬೇಕಾಗುತ್ತಿತ್ತು.

ಉದಾಹರಣೆಗೆ, ರೂ. 399ರ 3 ತಿಂಗಳ ಪ್ಲಾನ್ ಜೊತೆಗೆ ಗ್ರಾಹಕರು ಇದೀಗ ರೂ. 45 ಹೆಚ್ಚುವರಿಯಾಗಿ ಪಾವತಿಸಲಿದ್ದು, ಪ್ರತಿ ಜಿಬಿಗೆ ಅಂದಾಜು ರೂ. 1ರಂತೆ 42 ಜಿಬಿ ಹೆಚ್ಚುವರಿ ಡೇಟಾ ಪಡೆಯಲಿದ್ದಾರೆ. ಇದರ ಜೊತೆಗೆ ಅವರು 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳನ್ನು - ಸುಮಾರು ರೂ. 80 ಶುಲ್ಕ ಪಾವತಿಸದೆಯೇ - ಪಡೆಯಲಿದ್ದಾರೆ.

ಜಿಯೋ ದೈನಿಕ 2 ಜಿಬಿ ಪ್ಲಾನ್‌ನೊಡನೆ ಹೋಲಿಸಿದರೆ

ಜಿಯೋ ದೈನಿಕ 2 ಜಿಬಿ ಪ್ಲಾನ್‌ನೊಡನೆ ಹೋಲಿಸಿದರೆ

ಮೂರು ತಿಂಗಳ ದೈನಿಕ 2 ಜಿಬಿ ಪ್ಯಾಕ್ ಇದೀಗ ರೂ. 448ರ ಬದಲಿಗೆ ರೂ. 444ಕ್ಕೇ ಲಭ್ಯವಾಗಲಿದ್ದು, ಸುಮಾರು ರೂ. 80 ಮೌಲ್ಯದ 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳೂ ಹೆಚ್ಚುವರಿಯಾಗಿ ದೊರಕಲಿವೆ.

ಎರಡು ತಿಂಗಳ ಪ್ಲಾನ್ ಈ ಹಿಂದಿನ ದರವಾದ ರೂ. 396 (198x2) ಬದಲಿಗೆ ಇದೀಗ ರೂ. 333ಕ್ಕೆ ದೊರಕಲಿದೆ. ಇದರ ಜೊತೆಗೆ 1000 ನಿಮಿಷಗಳ ಆಫ್‌ನೆಟ್ ಐಯುಸಿ ಕರೆಗಳು - ಸುಮಾರು ರೂ. 80 ಶುಲ್ಕ ಪಾವತಿಸುವ ಅಗತ್ಯವಿಲ್ಲದೆಯೇ - ಹೆಚ್ಚುವರಿಯಾಗಿ ದೊರಕಲಿವೆ.

ಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣ

English summary
Reliance Jio announces 'All-in-One' one plan with IUC charges starting with Rs 222 customers can get 2GB daily data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X