• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2019ರಲ್ಲಿ ಸುಮಾರು 9 ಕೋಟಿ ಗ್ರಾಹಕರನ್ನು ಸೆಳೆದುಕೊಂಡ ರಿಲಯನ್ಸ್‌ ಜಿಯೋ: ಟ್ರಾಯ್ ವರದಿ

|
Google Oneindia Kannada News

ನವದೆಹಲಿ, ನವೆಂಬರ್ 30: ಟೆಲಿಕಾಂ ಕ್ಷೇತ್ರದಲ್ಲಿ ಕಂಪನಿಗಳ ನಡುವೆ ಸ್ಪರ್ಧೆಯು ತೀವ್ರವಾಗಿ ಹೊರಹೊಮ್ಮಿದ್ದು, ಗ್ರಾಹಕರನ್ನು ಸೆಳೆಯಲು ನಾನಾ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಬಂದಿವೆ. ಅದರಲ್ಲೂ ವರ್ಕ್ ಫ್ರಮ್ ಹೋಮ್ ಹೆಚ್ಚಾದ ಮೇಲೆ ಗ್ರಾಹಕರಿಗೆ ವಿಶೇಷ ಡೇಟಾ ಕೊಡುಗೆಗಳ ಆಕರ್ಷಣೆಯ ಮೂಲಕ ಗ್ರಾಹಕರನ್ನು ಸೆಳೆಯಲು ಸ್ಪರ್ಧೆ ನಡೆಯುತ್ತದೆ.

ಈ ಸ್ಪರ್ಧೆಯು ಆಕ್ರಮಣಾಕಾರಿಯಾಗಿ ಕೂಡ ಕಂಡು ಬರುತ್ತಿದೆ, ದರಗಳನ್ನೂ ಕೂಡ ಹೆಚ್ಚಿಸಲಾಗುತ್ತದೆ. ಇದರ ನಡುವೆ ರಿಲಯನ್ಸ್ ಜಿಯೋ 2019 ರಲ್ಲಿ ಸುಮಾರು 9 ಕೋಟಿ (89.90 ಮಿಲಿಯನ್) ಹೊಸ ಚಂದಾದಾರರನ್ನು ಸೇರಿಸುವಲ್ಲಿ ಯಶಸ್ವಿಯಾಗಿದೆ. ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ವಾರ್ಷಿಕ ವರದಿಯಲ್ಲಿ ಈ ಅಂಕಿ ಅಂಶಗಳು ಬಹಿರಂಗಗೊಂಡಿದೆ.

ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?ಜಿಯೋ, ಏರ್‌ಟೆಲ್, VI: ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್ನಲ್ಲಿ ಪೋರ್ಟ್ ಮಾಡುವುದು ಹೇಗೆ?

2018 ಮತ್ತು 2019ರಲ್ಲಿ ರಿಯಲನ್ಸ್ ಜಿಯೋ ಚಂದಾದಾರರು ಹೆಚ್ಚಿದ್ದಾರೆ!

2018 ಮತ್ತು 2019ರಲ್ಲಿ ರಿಯಲನ್ಸ್ ಜಿಯೋ ಚಂದಾದಾರರು ಹೆಚ್ಚಿದ್ದಾರೆ!

ಟ್ರಾಯ್‌ನ ಇತ್ತೀಚಿನ ವರದಿ ಪ್ರಕಾರ ರಿಲಯನ್ಸ್ ಜಿಯೋ ಒಟ್ಟು ಚಂದಾದಾರರು 2018ರ ಡಿಸೆಂಬರ್‌ನಲ್ಲಿ ಸುಮಾರು 280.12 ಮಿಲಿಯನ್ ಆಗಿದ್ದು, ಇದು 2019 ರ ಡಿಸೆಂಬರ್‌ನಲ್ಲಿ 370.2 ಮಿಲಿಯನ್‌ಗೆ ಹೆಚ್ಚಾಗಿದೆ.

ಶೇಕಡಾ 32.4ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಜಿಯೋ

ಶೇಕಡಾ 32.4ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ಜಿಯೋ

ದೇಶದ ಅಗ್ರಮಾನ್ಯ ಟೆಲಿಕಾಂ ಕಂಪನಿಯಾಗಲು ಹೊರಟಿರುವ ರಿಲಯನ್ಸ್ ಜಿಯೋ 2019 ರ ಅಂತ್ಯದ ವೇಳೆಗೆ ಒಟ್ಟು ವೈರ್‌ಲೆಸ್ ಟೆಲಿಫೋನ್ ಚಂದಾದಾರರ ಶೇಕಡಾ 32.14 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. 2019ರಲ್ಲಿ ಜಿಯೋ ಭಾರೀ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆದರೆ ಮತ್ತೊಂದೆಡೆ ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಲಕ್ಷಾಂತರ ವೈರ್‌ಲೆಸ್ ಚಂದಾದಾರರನ್ನು ಕಳೆದುಕೊಂಡಿದೆ.

ವೊಡಾಪೋನ್ ಐಡಿಯಾ ಗ್ರಾಹಕರ ಸಂಖ್ಯೆ ಇಳಿಕೆ

ವೊಡಾಪೋನ್ ಐಡಿಯಾ ಗ್ರಾಹಕರ ಸಂಖ್ಯೆ ಇಳಿಕೆ

ಒಂದೆಡೆ ರಿಲಯನ್ಸ್ ಜಿಯೋ ಗ್ರಾಹಕರ ಸಂಖ್ಯೆ ಏರುತ್ತಲೇ ಸಾಗಿದ್ದರೆ, ಅದೇ ಸಮಯದಲ್ಲಿ, ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಟ್ರಾಯ್ ವರದಿಯ ಪ್ರಕಾರ ವೊಡಾಫೋನ್ ಐಡಿಯಾ 2019 ರಲ್ಲಿ 86.13 ಮಿಲಿಯನ್ ಮತ್ತು ಏರ್‌ಟೆಲ್ 12.96 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ.

ವೊಡಾಫೋನ್ ಐಡಿಯಾ ಚಂದಾದಾರರು 2018 ರ ಡಿಸೆಂಬರ್‌ನಲ್ಲಿ 418.75 ಮಿಲಿಯನ್ ಆಗಿದ್ದು, ಇದು 2019 ರ ಡಿಸೆಂಬರ್‌ನಲ್ಲಿ 332.61 ಮಿಲಿಯನ್‌ಗೆ ಇಳಿದಿದೆ. ಇದರ ಮಾರುಕಟ್ಟೆ ಪಾಲು ಶೇಕಡಾ 35.61ರಿಂದ ಶೇಕಡಾ 28.89ಕ್ಕೆ ಇಳಿದಿದೆ.

ಏರ್‌ಟೆಲ್ ಗ್ರಾಹಕರ ಸಂಖ್ಯೆಯಲ್ಲೂ ಕುಸಿತ

ಏರ್‌ಟೆಲ್ ಗ್ರಾಹಕರ ಸಂಖ್ಯೆಯಲ್ಲೂ ಕುಸಿತ

ವೊಡಾಫೋನ್‌ ಐಡಿಯಾಗೆ ಹೋಲಿಸಿದರೆ ಏರ್‌ಟೆಲ್ ಕಡಿಮೆ ಗ್ರಾಹಕರನ್ನು ಕಳೆದುಕೊಂಡಿದೆ. ಏರ್‌ಟೆಲ್ 2018 ರ ಡಿಸೆಂಬರ್‌ನಲ್ಲಿ 340.26 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಇದು 2019 ರ ಡಿಸೆಂಬರ್‌ನಲ್ಲಿ 327.30 ಮಿಲಿಯನ್‌ಗೆ ಇಳಿದಿದೆ.

ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಏರಿಕೆ

ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಏರಿಕೆ

ಆಶ್ಚರ್ಯವೆಂಬಂತೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಕಳೆದ ವರ್ಷ 3.74 ಮಿಲಿಯನ್ ಹೊಸ ಗ್ರಾಹಕರನ್ನು ಸೇರಿಸಿದೆ. ಬಿಎಸ್‌ಎನ್ಎಲ್ 2018ರ ಡಿಸೆಂಬರ್‌ನಲ್ಲಿ 114.37 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಇದು 2019 ರ ಡಿಸೆಂಬರ್‌ನಲ್ಲಿ 118.12 ಮಿಲಿಯನ್‌ಗೆ ಹೆಚ್ಚಾಗಿದೆ. ಕಳೆದ ವರ್ಷದ ಕೊನೆಗೆ ಬಿಎಸ್‌ಎನ್‌ಎಲ್‌ ಮಾರುಕಟ್ಟೆ ಪಾಲು ಶೇಕಡಾ 10.26ರಷ್ಟಿದೆ.

ಟ್ರಾಯ್ ವರದಿಯ ಪ್ರಕಾರ, ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ 2018 ರ ಡಿಸೆಂಬರ್ ಅಂತ್ಯದ ವೇಳೆಗೆ 1,197.87 ದಶಲಕ್ಷದಿಂದ 2019 ರ ಡಿಸೆಂಬರ್ ಅಂತ್ಯದ ವೇಳೆಗೆ 1,172.44 ದಶಲಕ್ಷಕ್ಕೆ ಇಳಿದಿದ್ದು, ವಾರ್ಷಿಕ ಶೇಕಡಾ 2.12 ರಷ್ಟು ಇಳಿಕೆಯಾಗಿದೆ. ಒಟ್ಟು ದೂರವಾಣಿ ಚಂದಾದಾರರ ಸಂಖ್ಯೆಗೆ ಸಂಬಂಧಿಸಿದಂತೆ, ರಿಲಯನ್ಸ್ ಜಿಯೋ 2019 ರಲ್ಲಿ 90.95 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದೆ.

English summary
Reliance Jio has added as many as 89.90 million wireless subscribers in the year 2019. Telecom Regulatory Authority of India (TRAI) has released a new 2019 annual report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X