ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಜಿಯೋ 12 ವಾರಗಳಲ್ಲಿ 13ನೇ ಜಾಗತಿಕ ಒಪ್ಪಂದ: ಅಮೆರಿಕಾದ ಮತ್ತೊಂದು ಕಂಪನಿಯಿಂದ ಪಾಲು ಖರೀದಿ

|
Google Oneindia Kannada News

ನವದೆಹಲಿ, ಜುಲೈ 13: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋದಲ್ಲಿ ಅಮೆರಿಕಾದ ಮತ್ತೊಂದು ಸಂಸ್ಥೆ ಹಣ ಹೂಡಿಕೆ ಮಾಡಿದ್ದು, ಇದು ಜಿಯೋದ 13ನೇ ಜಾಗತಿಕ ಒಪ್ಪಂದವಾಗಿದೆ.

ಮುಕೇಶ್ ಅಂಬಾನಿ ಮಾಲೀಕತ್ವದ ಡಿಜಿಟಲ್ ಅಂಗಸಂಸ್ಥೆ ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಅಮೆರಿಕಾದ 5ಜಿ ದೈತ್ಯ ಸಂಸ್ಥೆ ಕ್ವಾಲ್​ಕಾಮ್ ವೆಂಚರ್ಸ್ ಸಂಸ್ಥೆ ಜಿಯೋ ಪ್ಲಾಟ್​ಫಾರ್ಮ್​​ಗಳಲ್ಲಿ 730 ಕೋಟಿ ರೂ ಮೊತ್ತದ ಶೇ. 0.15ರಷ್ಟು ಪಾಲು ಖರೀದಿಸಿದೆ.

ಇಂಟೆಲ್-ಜಿಯೋ ಡೀಲ್: 1,894.5 ಕೋಟಿ ಹೂಡಿಕೆ ಮಾಡಿದ ಅಮೆರಿಕಾದ ದೈತ್ಯ ಕಂಪನಿಇಂಟೆಲ್-ಜಿಯೋ ಡೀಲ್: 1,894.5 ಕೋಟಿ ಹೂಡಿಕೆ ಮಾಡಿದ ಅಮೆರಿಕಾದ ದೈತ್ಯ ಕಂಪನಿ

ಇತರ ಹೂಡಿಕೆದಾರರಂತೆ ಕ್ವಾಲ್​ಕಾಮ್ ವೆಂಚರ್ಸ್ ಸಂಸ್ಥೆ ಕೂಡ 4.91 ಲಕ್ಷ ಕೋಟಿ ರೂ ಈಕ್ವಿಟಿ ವ್ಯಾಲುಯೇಷನ್ ಹಾಗೂ 5.16 ಲಕ್ಷ ಕೋಟಿ ಎಂಟರ್ಪ್ರೈಸ್ ವ್ಯಾಲುಯೇಷನ್ ದರದಲ್ಲಿ ಜಿಯೋದಲ್ಲಿ ಪಾಲು ಖರೀದಿ ಮಾಡಿದೆ.

Reliance Jio 13th Deal:US 5G Gaint Qualcomm Invests In Reliance Jio

ಕಳೆದ 3 ತಿಂಗಳ ಅವಧಿಯಲ್ಲಿ ಜಿಯೋ ಪ್ಲಾಟ್​ಫಾರ್ಮ್​​ಗಳಲ್ಲಿ ಹೂಡಿಕೆ ಆಗಿರುವ 13ನೇ ಒಪ್ಪಂದ ಇದಾಗಿದೆ. ವಿಶ್ವದ ಕೆಲ ಅಗ್ರಗಣ್ಯ ಸಂಸ್ಥೆಗಳು ಜಿಯೋದೊಂದಿಗೆ ವ್ಯಾವಹಾರಿಕವಾಗಿ ಭಾಗಿಯಾಗಿವೆ. ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ಕೆಕೆಆರ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್ ಮೊದಲಾದ ಸಂಸ್ಥೆಗಳು ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಹೂಡಿಕೆ ಮಾಡಿವೆ. ಈ 13 ಒಪ್ಪಂದಗಳಿಂದ ಜಿಯೋಗೆ 1.18 ಲಕ್ಷ ಕೋಟಿ ಬಂಡವಾಳ ಹರಿದುಬಂದಂತಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?

ಅಮೆರಿಕದ ಸಿಲಿಕಾನ್ ವ್ಯಾಲಿ ಕ್ಯಾಲಿಫೋರ್ನಿಯಾದಲ್ಲಿ ಮುಖ್ಯಕಚೇರಿ ಹೊಂದಿರುವ ಕ್ವಾಲ್​ಕಾಮ್​ನ ಹೂಡಿಕೆ ಅಂಗವಾದ ಕ್ವಾಲ್​ಕಾಮ್ ವೆಂಚರ್ಸ್ 2000ರಿಂದಲೂ ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಾ ಬಂದಿದೆ. ಮುಂದಿನ ತಲೆಮಾರಿನ ವೈರ್​ಲೆಸ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕ್ವಾಲ್​ಕಾಮ್ ಸಂಸ್ಥೆ ಸ್ಥಾಪಿತವಾಗಿದ್ದು 1985ರಲ್ಲಿ. ವೈರ್​ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾಫ್ಟ್​ವೇರ್, ಸೆಮಿಕಂಡಕ್ಟರ್ ಇತ್ಯಾದಿಗಳನ್ನ ಇದು ಪೂರೈಸುತ್ತದೆ.

ಯಾವೆಲ್ಲಾ ಕಂಪನಿಗಳು ಹೂಡಿಕೆ ಮಾಡಿವೆ?

ಮುಕೇಶ್ ಅಂಬಾನಿ ಒಡೆತನದ ಆರ್‌ಐಎಲ್‌ನಲ್ಲಿ ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಇದೀಗ ಇಂಟೆಲ್ ಸೇರಿ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 1.18 ಲಕ್ಷ ಕೋಟಿ ಬಂಡವಾಳ ಹರಿದುಬಂದಂತಾಗಿದೆ.

English summary
US-based Qualcomm Inc will invest Rs 730 crore in Jio Platforms for a 0.15 percent stake, joining other big-name investors in the digital unit of Reliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X