• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಷಯ ತದಿಗೆ : ರಿಲಯನ್ಸ್ ಜ್ಯುವೆಲ್ಸ್ ನಿಂದ ಹಂಪಿ ವಿಶೇಷ ವಿನ್ಯಾಸ

|

ಮುಂಬೈ, ಮೇ 02: ಭಾರತದ ಅತ್ಯಂತ ಪ್ರಸಿದ್ಧ ಪರಂಪರೆ ತಾಣಗಳಿಂದ ಸ್ಫೂರ್ತಿ ಪಡೆದ ರಿಲಯನ್ಸ್ ಜ್ಯುವೆಲ್ಸ್, ಹೊಸದಾಗಿ 'ಅಪೂರ್ವಂ' ಆಭರಣಗಳ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಅಪೂರ್ವಂ ಎಂಬುದು ಸಂಕೀರ್ಣವಾಗಿ ವಿನ್ಯಾಸ ಹೊಂದಿರುವ ದೇವಾಲಯ ಮಾದರಿಯ ಚಿನ್ನದ ಆಭರಣಗಳ ಒಂದು ಸುಂದರವಾದ ಸಂಗ್ರಹವಾಗಿದ್ದು, ಇದು ಉನ್ನತ ದರ್ಜೆಯ ಕಲೆಗಾರಿಕೆ ಮತ್ತು ಭಾರತೀಯ ಪರಂಪರೆಯನ್ನು ಪ್ರತಿನಿಧಿಸುತ್ತಿದೆ.

ಹೊಚ್ಚಹೊಸ ಅಪೂರ್ವಂ ಸಂಗ್ರಹವು ದಕ್ಷಿಣ ಮತ್ತು ಪಶ್ಚಿಮ ಭಾರತದ ಕೆಲವು ಪ್ರಮುಖ ಮತ್ತು ಪ್ರಸಿದ್ಧ ಸ್ಮಾರಕಗಳಿಂದ ಸ್ಫೂರ್ತಿ ಪಡೆದುಕೊಂಡಿದೆ. ಅಪೂರ್ವಂ ಸಂಗ್ರಹದ ಪ್ರತಿ ಆಭರಣವು ವಿವರ ಮತ್ತು ಸೂಕ್ಷ್ಮವಾದ ಕರಕುಶಲತೆಯಿಂದ ತಯಾರಾಗಿದ್ದು, ವಿಶೇಷವಾಗಿ ಮದುವೆಗಳು, ಕುಟುಂಬದ ಸಂಭ್ರಮ ಕೂಟಗಳು ಮತ್ತು ಉತ್ಸವಗಳಲ್ಲಿ ಧರಿಸಲು, ವಿಶಿಷ್ಟ ಮತ್ತು ಪರಿಪೂರ್ಣವಾದ ಅಲಂಕಾರಕ್ಕೆ ಸೂಕ್ತವಾಗಿರಲಿದೆ.

ರಿಲಯನ್ಸ್ ಜುವೆಲ್ಸ್- ಆಸ್ಯಾ - ಐ ಆಮ್ ದಾಟ್

ಈ ಸಂಗ್ರಹವು ರಿಲಯನ್ಸ್ ಜ್ಯುವೆಲ್ಸ್ ಶೋ ರೂಮ್‌ಗಳಲ್ಲಿ ಲಭ್ಯವಿದೆ. ಸಂಗ್ರಹಣೆಯನ್ನು ಇನ್ನಷ್ಟು ರೋಮಾಂಚನಗೊಳಿಸುವ ಸಲುವಾಗಿ ಅಕ್ಷಯ ತೃತಿಯಾ ಅಂಗವಾಗಿ ವಿಶೇಷ ಆಫರ್ ಅನ್ನು ಸಹ ನೀಡಲಾಗುತ್ತಿದೆ. ಗ್ರಾಹಕರು ಮೇ 7, 2019 ರವರೆಗೆ ಚಿನ್ನದ ಆಭರಣಗಳ ಮೇಕಿಂಗ್ ಮೇಲೆ 25 ಪ್ರತಿಶತ ಕಡಿತವನ್ನು ಹಾಗೂ ವಜ್ರದ ಆಭರಣಗಳ ಮೇಲೆ 25 ಪ್ರತಿಶತದಷ್ಟು ಕಡಿತವನ್ನು ಪಡೆಯಬಹುದಾಗಿದೆ.

ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯ ಸ್ಫೂರ್ತಿಯನ್ನು ಪಡೆದು ಈ ಅಪೂರ್ವಂ ದೇವಸ್ಥಾನದ ಸಂಗ್ರಹವನ್ನು ರೂಪಿಸಲಾಗಿದೆ. ಅಪೂರ್ವಂ ಆಭರಣಗಳಲ್ಲಿ ವಿಜಯ ವಿಠಲ ದೇವಾಲಯದ ಪ್ರತಿಬಿಂಬಗಳನ್ನು ಮತ್ತು ಪ್ರವೇಶ ಗೋಡೆಗಳಿರುವ ಸಂಕೀರ್ಣ ಕೆತ್ತನೆಗಳನ್ನು ಸೇರಿದಂತೆ ಹಂಪಿಯ ಪ್ರಸಿದ್ಧ ಕೆತ್ತನೆಗಳ ವಿನ್ಯಾಸವನ್ನು ಕಾಣಬಹುದಾಗಿದೆ. ಲೋಟಸ್ ಮಹಲಿನ ಸುಂದರವಾದ ಕಮಾನುಗಳು, ಎಲಿಫೆಂಟ್ ಹನ್ನೊಂದು ಗುಮ್ಮಟಗಳು ಮತ್ತು ಪವಿತ್ರ ನೀರಿನ ತೊಟ್ಟಿಯಾದ ಪುಷ್ಕಾರ ರಚನೆಯು ಈ ಆಭರಣ ಸಂಗ್ರಹಣೆಯಲ್ಲಿರುವ ವಿನ್ಯಾಸಗಳಿಗೆ ಸ್ಫೂರ್ತಿಯಾಗಿವೆ.

ಚೆನ್ನ ಕೇಶವ ದೇವಾಲಯದ ವಿನ್ಯಾಸವೂ ಇದೆ

ಚೆನ್ನ ಕೇಶವ ದೇವಾಲಯದ ವಿನ್ಯಾಸವೂ ಇದೆ

ಈ ಅಪೂರ್ವಂ ಸಂಗ್ರಹದಲ್ಲಿ ಹಂಪಿಗೆ ಹೊರತಾಗಿ ಪ್ರಸಿದ್ಧಿಯನ್ನು ಪಡೆದಿರುವ ಸ್ಮಾರಕಗಳಾದ ಬೇಲೂರು ಚೆನ್ನ ಕೇಶವ ದೇವಾಲಯದ ತಳಹದಿಯ ನಾಲ್ಕು ಹಂತಗಳು ಮತ್ತು ಆನೆಗಳು, ಕುದುರೆಗಳು ಮತ್ತು ಅಲಂಕೃತ ಚಿತ್ರಣಗಳನ್ನು ಕಾಣಬಹುದಾಗಿದೆ. ಭುವನೇಶ್ವರಿ ಗುಮ್ಮಟದ ಗ್ಲಿಂಪ್ಸಸ್, ದೇವಸ್ಥಾನದಲ್ಲಿರುವ ಒಳಾಂಗಣದ ಛಾವಣಿಯನ್ನು ಮತ್ತು ತಲೆಕೆಳಗಾದ ಕಮಲದ ವಿನ್ಯಾಸವನ್ನು ಸಹ ಸಂಗ್ರಹದಲ್ಲಿ ಕಾಣಬಹುದು. ದೇವಾಲಯದ ದ್ವಾರದಲ್ಲಿ ಕೆತ್ತಿರುವ ದಶಾವತಂ ಮತ್ತು ದೇವಾಲಯದೊಳಗೆ ಇರುವ ನೃರ್ತಕಿಯರ ಕೆತ್ತನೆಗಳನ್ನು ಈ ಸಂಗ್ರಹದಲ್ಲಿ ಕಾಣಬಹುದಾಗಿದೆ.

ರಿಲಯನ್ಸ್ ಜ್ಯುವೆಲ್ಸ್ ವಕ್ತಾರರ ಹೇಳಿಕೆ

ರಿಲಯನ್ಸ್ ಜ್ಯುವೆಲ್ಸ್ ವಕ್ತಾರರ ಹೇಳಿಕೆ

"ರಿಲಯನ್ಸ್ ಜ್ಯುವೆಲ್ಸ್ ಯಾವಾಗಲೂ ತನ್ನ ಗ್ರಾಹಕರಿಗೆ ಅತ್ಯುತ್ತಮವಾದ ಕೊಡುಗೆ ನೀಡಲು ಪ್ರಯತ್ನಿಸುತ್ತಿದೆ ಮತ್ತು ಈ ಮಂಗಳಕರ ಅಕ್ಷಯ ತೃತಿಯ ಸಂದರ್ಭದಲ್ಲಿ ಸುಂದರವಾಗಿ ರಚಿಸಲಾದ ದೇವಸ್ಥಾನ ಆಭರಣ ಸಂಗ್ರಹವಾದ ಅಪೂರ್ವಂವನ್ನು ಪರಿಚಿಸಲಾಗಿದೆ. ಈ ಸಂಗ್ರಹಣೆಯಲ್ಲಿ ಪ್ರತಿಯೊಂದು ತುಣುಕುಗಳು ಸಂಕೀರ್ಣವಾದ ವಿನ್ಯಾಸ ಮತ್ತು ಕಲೆಗಾರಿಕೆಯ ಮೇರುಕೃತಿಯಾಗಿದೆ ಎಂದು ನಾವು ನಂಬುತ್ತೇವೆ, ಇದು ನಮ್ಮ ಗ್ರಾಹಕರನ್ನು ಮೆಚ್ಚಿಸುತ್ತದೆ" ಎಂದು ರಿಲಯನ್ಸ್ ಜ್ಯುವೆಲ್ಸ್ ವಕ್ತಾರರು ತಿಳಿಸಿದ್ದಾರೆ.

ಅಕ್ಷಯ ತೃತೀಯ : ರಿಲಯನ್ಸ್ ಜುವೆಲ್ಸ್ ನಿಂದ ಪ್ರತಿದಿನವೂ ಪವಿತ್ರ

ವಿಶೇಷ ಸಂದರ್ಭಗಳಲ್ಲಿ ಧರಿಸಲು ವಿವಿಧ ಮಾದರಿ

ವಿಶೇಷ ಸಂದರ್ಭಗಳಲ್ಲಿ ಧರಿಸಲು ವಿವಿಧ ಮಾದರಿ

ಹಲವು ವರ್ಷಗಳಿದ ರಿಲಯನ್ಸ್ ಜ್ಯುವೆಲ್ಸ್ ಪ್ರತಿದಿನ ಧರಿಸುವ ಆಭರಣಗಳಿಂದ ವಿಶೇಷ ಸಂದರ್ಭಗಳಲ್ಲಿ ಧರಿಸುವ ವಿವಿಧ ಮಾದರಿಯ ವಿವಿಧ ಶ್ರೇಣಿಯನ್ನು ಗ್ರಾಹಕರಿಗೆ ಪರಿಚಯಿಸುತ್ತಾ ಬಂದಿದೆ. ಗ್ರಾಹಕರ ಮೇಲೆ ಪ್ರಭಾವ ಬೀರುವ ಮತ್ತು ವಿಶಿಷ್ಟ ಆಭರಣಗಳ ಮೇಲೆ ಗರಿಷ್ಠ ಗಮನ ಹರಿಸಿರುವ ರಿಲಯನ್ಸ್ ಜ್ಯುವೆಲ್ಸ್‌ ಶೀಘ್ರವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವುದನ್ನು ಮುಂದುವರೆಸಿದೆ.

ಸಮೃದ್ಧ ವಿನ್ಯಾಸ ಮತ್ತು ಉತ್ತಮ ಗ್ರಾಹಕರ ನೆರವು

ಸಮೃದ್ಧ ವಿನ್ಯಾಸ ಮತ್ತು ಉತ್ತಮ ಗ್ರಾಹಕರ ನೆರವು

ರಿಲಯನ್ಸ್ ಜ್ಯುವೆಲ್ಸ್‌ಗಳು ಪ್ರಸ್ತುತ ಭಾರತದಲ್ಲಿ 66 ಕ್ಕೂ ಹೆಚ್ಚಿನ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ವತಂತ್ರ ಮತ್ತು ಅಂಗಡಿ-ಅಂಗಡಿ (ಸಿಐಎಸ್) ಮಾದರಿಗಳಲ್ಲಿ ಲಭ್ಯವಿದೆ. ರಿಲಯನ್ಸ್ ಜ್ಯುವೆಲ್ಗಳು ಗ್ರಾಹಕರಿಗೆ ಬೆರಗುಗೊಳಿಸುವ ವಾತಾವರಣ, ಆಕರ್ಷಕ ಪ್ರದರ್ಶನಗಳು, ಸಮೃದ್ಧ ವಿನ್ಯಾಸ ಮತ್ತು ಉತ್ತಮ ಗ್ರಾಹಕರ ನೆರವನ್ನು ನೀಡುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The new temple jewelry collection and exciting Akshay Tritya from Reliance Jewels. For the Akshaya Tritiya, the brand has unveiled new offer too which is included in the note.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more