• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಜುವೆಲ್ಸ್ 12ನೇ ವರ್ಷದ ಸಂಭ್ರಮಕ್ಕೆ ವಿಶೇಷ ರಿಯಾಯಿತಿ

|

ಮುಂಬೈ ಆಗಸ್ಟ್ 22: ಭಾರತದ ಮುಂಚೂಣಿ ಆಭರಣಗಳ ಬ್ರಾಂಡ್ ರಿಲಯನ್ಸ್ ಜುವೆಲ್ಸ್, ಗ್ರಾಹಕರೊಡನೆ ತನ್ನ 12ನೇ ವಾರ್ಷಿಕೋತ್ಸವ ಆಚರಿಸಲು ವಿಶಿಷ್ಟ ಕಿವಿಯೋಲೆಗಳ ಸಂಗ್ರಹವನ್ನು ಪರಿಚಯಿಸಿದೆ. ವಾರ್ಷಿಕೋತ್ಸವ ವಿಶೇಷ ಸಂಗ್ರಹವಾದ 'ಆಭಾರ್' ಅನ್ನು ಪರಿಚಯಿಸುವುದರ ಮೂಲಕ ರಿಲಯನ್ಸ್ ಜುವೆಲ್ಸ್ ತನಗೆ ಬೆಂಬಲ ನೀಡುತ್ತಿರುವ ಎಲ್ಲ ಗ್ರಾಹಕರಿಗೂ ಕೃತಜ್ಞತೆ ಸಲ್ಲಿಸುತ್ತಿದೆ.

ಆಭಾರ್ ಸಂಗ್ರಹವು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನಿಂದ ಪ್ರೇರಿತವಾಗಿದೆ. ಮಳೆಗಾಲದ ಪ್ರಾರಂಭವನ್ನು ಸಂಭ್ರಮಿಸಲು ಹಾಗೂ ತನ್ನ ಸಂತೋಷವನ್ನು ವ್ಯಕ್ತಪಡಿಸಲು, ನವಿಲು ಮಳೆಯ ಸಂದರ್ಭದಲ್ಲಿ ತನ್ನ ಎಲ್ಲ ಗರಿಗಳನ್ನೂ ಬಿಚ್ಚುವ ಮೂಲಕ ಅದರ ಪೂರ್ಣ ವೈಭವವನ್ನು ಪ್ರದರ್ಶಿಸುತ್ತದೆ. ಆಭಾರ್ ಸಂಗ್ರಹದ ವಿನ್ಯಾಸಗಳು, ವರ್ಣಗಳು ಹಾಗೂ ನಮೂನೆಗಳು ನವಿಲಿನ ಪ್ರೇರಣೆಯಿಂದಾಗಿ ಸೊಗಸಾದ ಭಾವವನ್ನು ಪಡೆದುಕೊಂಡಿವೆ.

22KT ಚಿನ್ನ ಹಾಗೂ 18KT ಚಿನ್ನದಲ್ಲಿ ದೊರಕುವ ಡ್ಯಾಂಗ್ಲರ್‌ಗಳು, ಷಾಂಡೆಲಿಯರ್‌ಗಳು, ಜುಮುಕಿ‌ಗಳು, ಸ್ಟಡ್‌ಗಳು, ನೀಡಲ್‌ಗಳು ಹಾಗೂ ಚಾಂದ್‌ಬಾಲಿಗಳು ಮುಂತಾದ ಕರಕುಶಲ ಕಲೆಯ ಕಿವಿಯೋಲೆಗಳು ಆಭಾರ್ ಸಂಗ್ರಹದಲ್ಲಿವೆ. ರೋಡಿಯಂ ಫಿನಿಶ್ ಇರುವ, ರೋಸ್ ಹಾಗೂ ಹಳದಿ ಚಿನ್ನದಿಂದ ಮಾಡಿದ ವಜ್ರದ ಸ್ಟಡೆಡ್ ವಿನ್ಯಾಸಗಳನ್ನೂ ಈ ಸಂಗ್ರಹದಲ್ಲಿ ನೋಡಬಹುದು. ವಿನ್ಯಾಸಕ್ಕೆ ಪೂರಕವಾದ ಅರೆ-ಅಮೂಲ್ಯ (ಸೆಮಿ-ಪ್ರೆಶಿಯಸ್) ಬಣ್ಣದ ಕಲ್ಲುಗಳು ಇವುಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ. ಆಭಾರ್ ಸಂಗ್ರಹದಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಂದು ಸಂದರ್ಭಕ್ಕೂ ಏನಾದರೂ ಇದೆ.

ರಿಲಯನ್ಸ್ ಜುವೆಲ್ಸ್ ನೀಡುತ್ತಿರುವ ಕೊಡುಗೆಯ ಅನ್ವಯ ಚಿನ್ನಾಭರಣಗಳ ಮೇಲಿನ ಮೇಕಿಂಗ್ ಶುಲ್ಕದ ಮೇಲೆ 24%*ವರೆಗಿನ ರಿಯಾಯಿತಿ ಹಾಗೂ ವಜ್ರಾಭರಣಗಳ ಮೇಲೆ 24%*ವರೆಗಿನ ರಿಯಾಯಿತಿ ದೊರಕಲಿದ್ದು, ಈ ಕೊಡುಗೆ ಸೆಪ್ಟೆಂಬರ್ 1, 2019ರವರೆಗೆ ಜಾರಿಯಲ್ಲಿರುತ್ತದೆ. ಇಂದು, ರಿಲಯನ್ಸ್ ಜ್ಯುವೆಲ್ಸ್‌ನ ವ್ಯಾಪ್ತಿ 81 ನಗರಗಳಿಗೆ ವಿಸ್ತರಿಸಿದ್ದು, ಈ ನಗರಗಳಲ್ಲಿ ಎಕ್ಸ್‌ಕ್ಲೂಸಿವ್ ಹಾಗೂ ಶಾಪ್ ಇನ್ ಶಾಪ್ [ಎಸ್‌ಐಎಸ್] ಸ್ವರೂಪವೂ ಸೇರಿದಂತೆ 200ಕ್ಕೂ ಹೆಚ್ಚು ಮಳಿಗೆಗಳಿವೆ. (*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ)

"ಆಭಾರ್ ಸಂಗ್ರಹವು, ನಮಗೆ ಬೆಂಬಲ ನೀಡಿದ ದೇಶದೆಲ್ಲೆಡೆಯ ಗ್ರಾಹಕರಿಗೆ ನಮ್ಮ ಕೃತಜ್ಞತೆಯ ಸಾಕ್ಷಿಯಾಗಿದೆ. ರಿಲಯನ್ಸ್ ಜುವೆಲ್ಸ್‌ನಲ್ಲಿ ನಾವು ಕೃತಜ್ಞತೆಯ ಶಕ್ತಿಯನ್ನು ಅರ್ಥಮಾಡಿಕೊಳ್ಳುತ್ತೇವೆ. ಆಭಾರ್ ಮತ್ತು ನಮ್ಮ ಇತರ ಸಂಗ್ರಹಗಳು ನಮ್ಮ ಜೀವನವನ್ನು ಮುಟ್ಟಿದ ಸ್ನೇಹಿತ, ಸಂಬಂಧಿ, ಸಂಗಾತಿ, ಗ್ರಾಹಕ ಅಥವಾ ಪರಿಚಯಸ್ಥರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅತ್ಯುತ್ತಮ ಮಾರ್ಗವಾಗಿದೆ," ಎಂದು ರಿಲಯನ್ಸ್ ಜುವೆಲ್ಸ್ ಪ್ರತಿನಿಧಿ ತಿಳಿಸಿದ್ದಾರೆ.

12 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿರುವ ರಿಲಯನ್ಸ್ ಜ್ಯುವೆಲ್ಸ್, ಆಭರಣಗಳ ಶಾಪಿಂಗ್‌ನ ಪರಿಪೂರ್ಣ ಅನುಭವ ನೀಡುತ್ತದೆ. ಸತತವಾಗಿ ಹೆಚ್ಚುತ್ತಿರುವ ಮಳಿಗೆಗಳ ಜಾಲದೊಂದಿಗೆ, ಭಾರತದೆಲ್ಲೆಡೆಯ ಜನರ ಹೆಚ್ಚುತ್ತಿರುವ ಆಭರಣ ಅಗತ್ಯಗಳನ್ನು ರಿಲಯನ್ಸ್ ಜ್ಯುವೆಲ್ಸ್ ಪೂರೈಸುತ್ತಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Jewels has launched its exclusive earrings collection called “Aabhar” to celebrate their 12th anniversary with their
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more