ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ನಿವ್ವಳ ಲಾಭದಲ್ಲಿ 6.8% ಏರಿಕೆ, 30 ಕೋಟಿ ದಾಟಿದ ಗ್ರಾಹಕರು

|
Google Oneindia Kannada News

ಬೆಂಗಳೂರು, ಜುಲೈ 19: 2019-20ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 10,104 ಕೋಟಿ ರೂ. ನಿವ್ವಳ ಲಾಭವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 6.8% ರಷ್ಟು ಏರಿಕೆ ಕಂಡಿದೆ.

ಹೆಚ್ಚಿನ ಲಾಭ ಗಳಿಸಲು ರಿಲಯನ್ಸ್ ರೀಟೆಲ್ ಮತ್ತು ಡಿಜಿಟಲ್ ಸೇವೆಗಳು ಪ್ರಮುಖ ಕೊಡುಗೆ ನೀಡಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 172,956 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 22.1 ರಷ್ಟು ಹೆಚ್ಚು ಎಂದು ಸಂಸ್ಥೆ ಪ್ರಕಟಿಸಿದೆ.

ಅಮರನಾಥ ಯಾತ್ರಿಕರಿಗೆ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದ ಜಿಯೋ ಅಮರನಾಥ ಯಾತ್ರಿಕರಿಗೆ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದ ಜಿಯೋ

ರಿಲಯನ್ಸ್ ಸಮೂಹದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಇನ್‌ಫೋಕಾಮ್, ಈ ಬಾರಿಯ ತ್ರೈ ಮಾಸಿಕದಲ್ಲಿ ಬಹಳಷ್ಟು ಲಾಭವನ್ನು ಗಳಿಕೆ ಮಾಡಿದೆ. ಈ ಅವಧಿಯಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಮ್ 891 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದೊಡನೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 6.1% ರಷ್ಟು ಹೆಚ್ಚಳವಾಗಿದೆ.

30 ಕೋಟಿ ಜಿಯೋ ಚಂದಾದಾರರು

30 ಕೋಟಿ ಜಿಯೋ ಚಂದಾದಾರರು

ಜಿಯೋ ಚಂದಾದಾರರ ಸಂಖ್ಯೆ ಈ ಅವಧಿಯಲ್ಲಿ 30 ಕೋಟಿಯ ಗಡಿ ದಾಟಿ ಒಟ್ಟು 33.1 ಕೋಟಿಗೆ ತಲುಪಿದೆ. ಜಿಯೋ ಗ್ರಾಹಕರು ಈ ತ್ರೈಮಾಸಿಕದಲ್ಲಿ 1,090 ಕೋಟಿ ಜಿಬಿಯಷ್ಟು ಡೇಟಾ ಬಳಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಗ್ರಾಹಕರ ಡೇಟಾ ಬಳಕೆಯ ಮಾಸಿಕ ಪ್ರಮಾಣ ತಲಾ 11.4 ಜಿಬಿ ತಲುಪಿದ್ದು ಈ ಪ್ರಮಾಣ ಕ್ಷಿಪ್ರವಾಗಿ ಹೆಚ್ಚುತ್ತಿದೆ. ಅಲ್ಲದೇ ಜಿಯೋ ಬಳಕೆದಾರರು ಒಟ್ಟು 78,597 ಕೋಟಿ ನಿಮಿಷಗಳ ಕಾಲ ಕರೆಯನ್ನು ಮಾಡಿದ್ದಾರೆ.

ರಿಲಯನ್ಸ್ ಬ್ರಾಂಡ್ಸ್ ಅಭಿವೃದ್ಧಿ

ರಿಲಯನ್ಸ್ ಬ್ರಾಂಡ್ಸ್ ಅಭಿವೃದ್ಧಿ

ಈ ತ್ರೈಮಾಸಿಕ ಅವಧಿಯಲ್ಲಿ ರಿಲಯನ್ಸ್ ರೀಟೇಲ್ ಕೂಡ ದಾಖಲೆಯ ಸಾಧನೆ ಮಾಡಿದ್ದು, ಈ ವಿಭಾಗದ ಆದಾಯ ಕಳೆದ ವರ್ಷದ ಹೋಲಿಕೆಯಲ್ಲಿ ಶೇ. 47.5ರಷ್ಟು ಏರಿಕೆ ಕಂಡು 38196 ಕೋಟಿ ರೂ. ತಲುಪಿದೆ. ರಿಲಯನ್ಸ್ ಬ್ರಾಂಡ್ಸ್ ಬ್ರಿಟಿಷ್ ಟಾಯ್ ಚಿಲ್ಲರೆ ವ್ಯಾಪಾರಿ ಹ್ಯಾಮ್ಲೀಸ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು ಮತ್ತು ಬ್ರಿಟಿಷ್ ಫುಟ್‌ವೇರ್ ಮತ್ತು ಹ್ಯಾಂಡ್‌ಬ್ಯಾಗ್ಸ್ ಬ್ರಾಂಡ್ ಕರ್ಟ್ ಗೀಗರ್ ಅವರೊಂದಿಗೆ ವಿಶೇಷ ಪಾಲುದಾರಿಕೆಯನ್ನು ಹೊಂದಿದೆ.

ಪೆಟ್ರೋ ಚಿಲ್ಲರೆ ಮಾರಾಟ ಮಳಿಗೆ

ಪೆಟ್ರೋ ಚಿಲ್ಲರೆ ಮಾರಾಟ ಮಳಿಗೆ

ರಿಲಯನ್ಸ್ ಚಿಲ್ಲರೆ ತ್ರೈಮಾಸಿಕದಲ್ಲಿ 265 ಮಳಿಗೆಗಳನ್ನು ತೆರೆಯುವುದರೊಂದಿಗೆ ಹೊಸ ಮಳಿಗೆಗಳನ್ನು ಸೇರಿಸುತ್ತಲೇ ಇದೆ. ಇದಲ್ಲದೆ ರಿಲಯನ್ಸ್ ರಿಟೇಲ್ 6,700 ಕ್ಕೂ ಹೆಚ್ಚು ನಗರಗಳಲ್ಲಿ 10,644 ಚಿಲ್ಲರೆ ಅಂಗಡಿಗಳನ್ನು 23 ದಶಲಕ್ಷ ಚದರ ಅಡಿ ಮತ್ತು 516 ಪೆಟ್ರೋ ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ.

'ಸಿಕ್ಸರ್'ನೊಡನೆ ಅಚ್ಚರಿಗೊಳಿಸಿದ ರಿಲಯನ್ಸ್ ಜಿಯೋ

'ಸಿಕ್ಸರ್'ನೊಡನೆ ಅಚ್ಚರಿಗೊಳಿಸಿದ ರಿಲಯನ್ಸ್ ಜಿಯೋ

ವಿಶ್ವಕಪ್ ಸಂದರ್ಭದಲ್ಲಿ ಮತ್ತೊಂದು 'ಸಿಕ್ಸರ್'ನೊಡನೆ ಅಚ್ಚರಿಗೊಳಿಸಿದ ರಿಲಯನ್ಸ್ ಜಿಯೋ, ಇದೀಗ ಕ್ರಿಕೆಟ್‌ ಪ್ರಿಯರ ಅಚ್ಚುಮೆಚ್ಚಿನ ಗಮ್ಯಸ್ಥಾನವಾಗಿದೆ ಮಾರ್ಪಾಟ್ಟಿತ್ತು. ಜಿಯೋ ಬಳಕೆದಾರರಿಗೆ ವಿಶ್ವಕಪ್‌ನ ಪ್ರತಿ ಪಂದ್ಯದ ನೇರಪ್ರಸಾರವನ್ನೂ ಉಚಿತವಾಗಿ ನೋಡುವ ಅವಕಾಶ ನೀಡಲಾಗಿತ್ತು.

ಇದಲ್ಲದೆ,ಡಿಜಿಟಲ್ ಉಡಾನ್ ಉಪಕ್ರಮದ ಅಡಿಯಲ್ಲಿ, ಜಿಯೋ ಪ್ರತಿ ಶನಿವಾರ ತನ್ನ ಬಳಕೆದಾರರಿಗೆ ಮಾಹಿತಿ ನೀಡಲಿದ್ದು ಜಿಯೋಫೋನ್ ವೈಶಿಷ್ಟ್ಯಗಳು, ವಿವಿಧ ಆಪ್‌ಗಳ ಬಳಕೆ, ಅಂತರಜಾಲ ಸುರಕ್ಷತೆ, ಬಂಧುಮಿತ್ರರನ್ನು ಸುಲಭ ಹಾಗೂ ಸುರಕ್ಷಿತವಾಗಿ ಸಂಪರ್ಕಿಸಲು ಜಿಯೋಫೋನ್‌ನಲ್ಲಿ ಫೇಸ್‌ಬುಕ್ ಬಳಕೆ ಸೇರಿದಂತೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ.

ಡಿಜಿಟಲ್ ಉಡಾನ್: ಜಿಯೋ ಪಾಠಶಾಲೆಯಲ್ಲಿ 10 ಭಾಷೆಯಲ್ಲಿ ಕಲಿಕೆಡಿಜಿಟಲ್ ಉಡಾನ್: ಜಿಯೋ ಪಾಠಶಾಲೆಯಲ್ಲಿ 10 ಭಾಷೆಯಲ್ಲಿ ಕಲಿಕೆ

English summary
Reliance Industries Q1 results: Consolidated net revenue grew by 22.1 per cent to Rs 172,956 crore in April-June quarter of FY20, compared to Rs 141,699 crore in the corresponding quarter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X