• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ನಿವ್ವಳ ಲಾಭ ಶೇ. 31ರಷ್ಟು ಏರಿಕೆ: 13,233 ಕೋಟಿ ರೂಪಾಯಿ

|

ನವದೆಹಲಿ, ಜುಲೈ 31: ವಿಶ್ವದ ಐದನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜೂನ್ ತ್ರೈಮಾಸಿಕದಲ್ಲಿ ಭರ್ಜರಿ ಲಾಭಗಳಿಸಿದೆ. 2020ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ. 31ರಷ್ಟು ಏರಿಕೆ ದಾಖಲಿಸಿದ್ದು 13,233 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಾಗಿದೆ.

ಈ ದಾಖಲೆಯ ನಿವ್ವಳ ಲಾಭವು ಆರ್‌ಐಎಲ್‌ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಲಾಭ ಗಳಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ ಕಂಪನಿಯ ಲಾಭ 10,141 ಕೋಟಿ ರೂಪಾಯಿ ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 31ರಷ್ಟು ಏರಿಕೆ ಕಂಡಿದೆ.

ವಿಶ್ವದ ಐದನೇ ಶ್ರೀಮಂತ ಪಟ್ಟಕ್ಕೇರಿದ ಮುಕೇಶ್ ಅಂಬಾನಿ

ಇನ್ನು ರಿಲಯನ್ಸ್ ಜಿಯೋ ಲಾಭದಲ್ಲಿ ಶೇ. 183ರಷ್ಟು ಏರಿಕೆ ದಾಖಲಿಸಿದೆ. ಕಂಪನಿಯ ನಿವ್ವಳ ಲಾಭ 2,520 ಕೋಟಿ ರೂಪಾಯಿ. ಕಳೆದ ವರ್ಷದ ಈ ತ್ರೈಮಾಸಿಕದಲ್ಲಿ ಜಿಯೋ 891 ಕೋಟಿ ನಿವ್ವಳ ಲಾಭ ಕಂಡಿತ್ತು.

2020 ರ ಜೂನ್ ತ್ರೈಮಾಸಿಕದಲ್ಲಿ ಏಕೀಕೃತ ಲಾಭ (ಇದರಲ್ಲಿ ರಿಲಯನ್ಸ್ ಬಿಪಿ ಮೊಬಿಲಿಟಿ ಯಲ್ಲಿ ಬಿಪಿಗೆ ಪಾಲು ಮಾರಾಟದಿಂದ 4,966 ಕೋಟಿ ರೂಪಾಯಿ ಲಭಿಸಿದೆ)

ಆರ್‌ಐಎಲ್‌ 53,124 ಕೋಟಿ ರೂ. ಮೊತ್ತದ ಭಾರತದ ಈವರೆಗಿನ ಅತಿದೊಡ್ಡ ರೈಟ್ಸ್ ಇಶ್ಯೂವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಈ ತ್ರೈಮಾಸಿಕದ ವಿಶೇಷ ಸಾಧನೆಗಳಲ್ಲೊಂದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ರೈಟ್ಸ್ ಇಶ್ಯೂ ಹಾಗೂ ಜಿಯೋ ಪ್ಲಾಟ್‌ಫಾರ್ಮ್ಸ್‌ ಮತ್ತು ಜಿಯೋ-ಬಿಪಿಯಲ್ಲಿನ ಹೂಡಿಕೆಗಳಿಂದ ಸಂಸ್ಥೆಯು 2,12,809 ಕೋಟಿ ರೂ.ಗಳನ್ನು ಪಡೆದುಕೊಂಡಿದ್ದು ಈ ಮಟ್ಟದ ಬಂಡವಾಳ ಹೂಡಿಕೆಯು ಭಾರತದ ಬಂಡವಾಳ ಮಾರುಕಟ್ಟೆಗಳ ಇತಿಹಾಸದಲ್ಲೇ ಅಭೂತಪೂರ್ವ ಸಾಧನೆಯೆಂದು ಸಂಸ್ಥೆ ಹೇಳಿದೆ.

ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಅಡಚಣೆಗಳಾದರೂ ಸಹ ಸಂಸ್ಥೆಯ ರೀಫೈನಿಂಗ್ ಮತ್ತು ಪೆಟ್ರೋಕೆಮಿಕಲ್ ವ್ಯವಹಾರ ಶೇ.90ಕ್ಕೂ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದೆ.

ರಿಲಯನ್ಸ್ ಜಿಯೋ ಇನ್‌ಫೋಕಾಮ್:

ರಿಲಯನ್ಸ್ ಸಮೂಹದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಇನ್‌ಫೋಕಾಮ್ ಆರ್ಥಿಕ ವರ್ಷ 2020-21ರ ಮೊದಲ ತ್ರೈಮಾಸಿಕದಲ್ಲಿ 2,520 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದೊಡನೆ ಹೋಲಿಕೆಯಲ್ಲಿ ಇದು ಶೇ. 182.8ರಷ್ಟು ಹೆಚ್ಚಾಗಿದೆ.

ಈ ಅವಧಿಯಲ್ಲಿ, ಕೋವಿಡ್ ಸಂಬಂಧಿತ ಪರಿಣಾಮಗಳ ಹೊರತಾಗಿಯೂ, ಜಿಯೋ ಚಂದಾದಾರರ ಒಟ್ಟು ಸಂಖ್ಯೆಯಲ್ಲಿ 15.1 ದಶಲಕ್ಷದಷ್ಟು ಹೆಚ್ಚಳ ಕಂಡುಬಂದಿದ್ದು ಜೂನ್ ಅಂತ್ಯದ ವೇಳೆಗೆ ಚಂದಾದಾರರ ಸಂಖ್ಯೆ 398.3 ದಶಲಕ್ಷಕ್ಕೆ ತಲುಪಿದೆ. ಈ ತ್ರೈಮಾಸಿಕದಲ್ಲಿ ಪ್ರತಿ ಗ್ರಾಹಕರಿಂದ ದೊರಕಿದ ಸರಾಸರಿ ಆದಾಯ (ARPU) ರೂ. 140.3ರಷ್ಟಿತ್ತು. ಇದೇ ಅವಧಿಯಲ್ಲಿ ಜಿಯೋ ಗ್ರಾಹಕರು 1,420 ಕೋಟಿ ಜಿಬಿಯಷ್ಟು ಡೇಟಾ ಬಳಸಿದ್ದು, ಕಳೆದ ವರ್ಷದ ಹೋಲಿಕೆಯಲ್ಲಿ ಇದು ಶೇ. 30.2ರಷ್ಟು ಹೆಚ್ಚಾಗಿದೆ. ಜಿಯೋ ಗ್ರಾಹಕರ ಡೇಟಾ ಬಳಕೆಯ ಸರಾಸರಿ ಪ್ರಮಾಣ ತಿಂಗಳಿಗೆ ತಲಾ 12.1 ಜಿಬಿಯಷ್ಟಿದ್ದರೆ ವಾಯ್ಸ್ ಕರೆಗಳ ಸರಾಸರಿ ಬಳಕೆ ತಿಂಗಳಿಗೆ ತಲಾ 756 ನಿಮಿಷಗಳಷ್ಟಿದೆ.

English summary
Reliance Industries Thursday reported a 31 per cent annual growth in its net profit to Rs 13,233 crore in the quarter ended June 30
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X