• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್ ಫ್ರೆಶ್ ಮತ್ತು ಸ್ಮಾರ್ಟ್‌ ನಲ್ಲಿ ಫುಲ್ ಪೈಸಾ ವಸೂಲ್ ಸೇಲ್‌

|

ಬೆಂಗಳೂರು, ಜನವರಿ 23: ರಿಲಯನ್ಸ್ ರಿಟೇಲ್ ಮಳಿಗೆಗಳಲ್ಲಿ ದ್ವೈವಾರ್ಷಿಕ ಫುಲ್‌ ಪೈಸಾ ವಸೂಲ್ ಸೇಲ್ ಮತ್ತೆ ಆರಂಭವಾಗಿದೆ ಮತ್ತು ಈ ಬಾರಿ ಇನ್ನಷ್ಟು ದೊಡ್ಡ ಮಟ್ಟದ ಆಫರ್ ಅನ್ನು ಗ್ರಾಹಕರಿಗೆ ನೀಡಲಿದೆ. ಈ ವರ್ಷದ ಮೊದಲ ಆವೃತ್ತಿಯ ಮೆಗಾ ಚಿಲ್ಲರೆ ಶಾಪಿಂಗ್ ಉತ್ಸವದ ಜನವರಿ 22 ರಿಂದ ಜನವರಿ 26 ರವರೆಗೆ ಎಲ್ಲಾ ರಿಲಯನ್ಸ್ ಫ್ರೆಶ್ ಮತ್ತು ಸ್ಮಾರ್ಟ್ ಮಳಿಗೆಗಳಲ್ಲಿ ನಡೆಯುತ್ತದೆ.

ರಿಲಯನ್ಸ್‌ ಮತ್ತೊಮ್ಮೆ ಆಧುನಿಕ ಚಿಲ್ಲರೆ ವ್ಯಾಪಾರ ಉತ್ಸವದಲ್ಲಿ ಸೇರಲು ರಾಷ್ಟ್ರದಾದ್ಯಂತದ ಗ್ರಾಹಕರಿಗೆ ಅವಕಾಶವನ್ನು ಮಾಡಿಕೊಡುತ್ತಿದೆ. ರಿಲಯನ್ಸ್ ರಿಟೇಲ್ ಮಹಾನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ತನ್ನ ಹೆಜ್ಜೆಗುರುತನ್ನು ಅಳಿಸದಂತೆ ಮೂಡಿಸುತ್ತಿದ್ದು, ಗ್ರಾಹಕರು ತಮ್ಮ ನೆರೆಹೊರೆಯಲ್ಲಿಯೇ ಈ ಮೆಗಾ ಕೊಡುಗೆಗಳಿಗೆ ಸಾಕ್ಷಿಯಾಗುವುದರಿಂದ ಈವೆಂಟ್ ಇನ್ನಷ್ಟು ದೊಡ್ಡದಾಗುತ್ತದೆ.

ಫುಲ್ ಪೈಸಾ ವಸೂಲ್ ಸೇಲ್‌ ನಡೆಯಲಿರುವ 5 ದಿನಗಳಲ್ಲಿ, ಗ್ರಾಹಕರು ದಿನಸಿ, ಸ್ಟೇಪಲ್ಸ್, ಹಣ್ಣುಗಳು ಮತ್ತು ತರಕಾರಿಗಳು, ಅಡಿಗೆ ಮತ್ತು ಹೋಂವೇರ್ ಮತ್ತು ಇತರ ಸಾಮಾನ್ಯ ಸರಕುಗಳು ಸೇರಿದಂತೆ ಸಂಪೂರ್ಣ ಉತ್ಪನ್ನ ಶ್ರೇಣಿಯ ಮೇಲೆ ಉತ್ತಮ ಕೊಡುಗೆಗಳನ್ನು ಪಡೆಯಬಹುದು.

ಈ ಕುರಿತು ಮಾತನಾಡಿದ ರಿಲಯನ್ಸ್ ಫ್ರೆಶ್ ಮತ್ತು ಸ್ಮಾರ್ಟ್ ಸಿಇಒ ದಾಮೋದರ್ ಮಾಲ್ , ''ನಮ್ಮಂತಹ ಸೂಪರ್ ಮಾರ್ಕೆಟ್ ಬ್ರಾಂಡ್‌ಗಳು, ಗ್ರಾಹಕರ ನೆರೆಹೊರೆಯಲ್ಲಿ ವರ್ಷಗಳಿಂದ ಅಸ್ತಿತ್ವದಲ್ಲಿವೆ, ಇದು ಅವರ ದಿನಚರಿಯ ಭಾಗವಾಗಿದೆ. ನಾವು ಸಮುದಾಯದ ಭಾಗವಾಗಿದ್ದೇವೆ ಮತ್ತು ಅವರ ಜೀವನದ ಸಂತೋಷಗಳು, ಆಚರಣೆಗಳು ಮತ್ತು ಹಬ್ಬಗಳು ಉತ್ತಮ ಪಡಿಸುತ್ತಿದ್ದೆವೆ, ಮತ್ತು ಅಂಥ ಸಂದರ್ಭಗಳು ನಮ್ಮ ಗ್ರಾಹಕರೊಂದಿಗೆ ಮಾತನಾಡಲು ಮತ್ತು ಸಂಪರ್ಕ ಸಾಧಿಸಲು ನಮಗೆ ಅವಕಾಶವನ್ನು ಒದಗಿಸುತ್ತದೆ."ಎಂದಿದ್ದಾರೆ.

ರಿಲಯನ್ಸ್ ಫ್ರೆಶ್ ಮತ್ತು ರಿಲಯನ್ಸ್ ಸ್ಮಾರ್ಟ್ ಇತ್ತೀಚಿನ ವರ್ಷಗಳಲ್ಲಿ ಸ್ಥಿರವಾಗಿ ಬೆಳೆಯುತ್ತಿದೆ. ಇಂದು ರಿಲಯನ್ಸ್ ರಿಟೇಲ್ 700 ಕ್ಕೂ ಹೆಚ್ಚು ಫ್ರೆಶ್ / ಸ್ಮಾರ್ಟ್ ಮಳಿಗೆಗಳನ್ನು ನಿರ್ವಹಿಸುತ್ತಿದೆ. ಈ ಮಳಿಗೆಗಳು ಸಂತೋಷಕರ ಅನುಭವಗಳನ್ನು ತರುತ್ತವೆ ಮತ್ತು ದೇಶಾದ್ಯಂತ ಮೆಟ್ರೊಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ಇರುವ ಗ್ರಾಹಕರಿಗೆ ಹಬ್ಬಗಳೊಂದಿಗೆ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ.

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಟಿವಿ, ಪ್ರಿಂಟ್, ರೇಡಿಯೋ, ಬಿಟಿಎಲ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಸೇರಿದಂತೆ ಮಾಧ್ಯಮಗಳಲ್ಲಿ ಜನವರಿ 2020 ಆವೃತ್ತಿಯ ಫುಲ್ ಪೈಸಾ ವಸೂಲ್ ಮಾರಾಟದ 360 ಡಿಗ್ರಿ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಫುಲ್ ಪೈಸಾ ವಸೂಲ್ ಮಾರಾಟ ಪ್ರತಿನಿಧಿಸುವ ರಿಲಯನ್ಸ್ ಫ್ರೆಶ್ & ಸ್ಮಾರ್ಟ್ ಜೊತೆಗೆ ಸಲೆಬ್ರಿಟಿ ದೀಪಿಕಾ ಕಕ್ಕರ್ ಕಾಣಿಸಿಕೊಂಡಿದ್ದಾರೆ. ಅಭಿಯಾನವು ಪ್ರಮುಖ ವಿಭಾಗಗಳಲ್ಲಿ 10 ವಿಭಿನ್ನ ಜಾಹೀರಾತುಗಳನ್ನು ಒಳಗೊಂಡಿದೆ, ಅದು ವ್ಯಾಪಕ ಉತ್ಪನ್ನ ಮಿಶ್ರಣ ಮತ್ತು ಮಾರಾಟದ ಸಮಯದಲ್ಲಿ ನೀಡುವ ಪ್ರಮುಖ ಗ್ರಾಹಕ ಪ್ರಯೋಜನಗಳನ್ನು ಪ್ರದರ್ಶಿಸುತ್ತದೆ.

English summary
Reliance Fresh and Reliance Smart announces “Full Paisa Vasool Sale”. Customers can be a part of this mega retail festival by shopping at the nearest Reliance Smart or Reliance Fresh store from January 22 to January 26, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X