ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಫೌಂಡೇಶನ್ ಶಿಕ್ಷಕ ಪ್ರಶಸ್ತಿಗಳ ಘೋಷಣೆ

|
Google Oneindia Kannada News

ಮುಂಬಯಿ, 14ನೇ ನವೆಂಬರ್ 2018: ಕಲಿಸುವಿಕೆಯ ಕ್ಷೇತ್ರದಲ್ಲಿ ಉದ್ಯೋಗಾವಾಕಾಶಗಳು, ಪ್ರತಿಫಲ ಹಾಗೂ ಮನ್ನಣೆಯನ್ನು ಒದಗಿಸುವ ಕೆಲಸದಲ್ಲಿ ದೇಶದ ಒಳಗೂ ಹೊರಗೂ ದಾಪುಗಾಲಿನಿಂದ ಬೆಳೆಯುತ್ತಿರುವ ಭಾರತ-ಮೂಲದ ಖಾಸಗಿ ಶಿಕ್ಷಕ ಪ್ರಮಾಣೀಕರಣ ಸಂಸ್ಥೆ ಸೆಂಟರ್ ಫಾರ್ ಟೀಚರ್ ಅಕ್ರಿಡಿಟೇಶನ್ (ಸೆಂಟಾ) ಜೊತೆಗೆ ರಿಲಯನ್ಸ್ ಫೌಂಡೇಶನ್ ಒಂದು ಬಹುವಾರ್ಷಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದೆ.

ಈ ಸಹಭಾಗಿತ್ವದ ಅಂಗವಾಗಿ, ಸೆಂಟಾ ಟೀಚಿಂಗ್ ಪ್ರೊಫೆಶನಲ್ಸ್ ಒಲಿಂಪಿಯಾಡ್‌ನ (ಟಿಪಿಓ) ಪ್ರಧಾನ ಪ್ರಾಯೋಜಕತ್ವವನ್ನು ರಿಲಯನ್ಸ್ ಫೌಂಡೇಶನ್ ಪಡೆದುಕೊಂಡಿದೆ. ಶಿಕ್ಷಕರಿಗಾಗಿ ನಡೆಯುವ ಈ ವಾರ್ಷಿಕ ರಾಷ್ಟ್ರೀಯ ಸ್ಪರ್ಧೆಯ ನಾಲ್ಕನೇ ಆವೃತ್ತಿ ಡಿಸೆಂಬರ್ 8, 2018ರಂದು (ಶನಿವಾರ) ಭಾರತದಾದ್ಯಂತ 46 ನಗರಗಳಲ್ಲಿ ಹಾಗೂ ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿದೆ.

6 ಪ್ರತಿಭಾವಂತ ಸಂಶೋಧಕರಿಗೆ ಇನ್ಫೋಸಿಸ್ ಪ್ರಶಸ್ತಿ 6 ಪ್ರತಿಭಾವಂತ ಸಂಶೋಧಕರಿಗೆ ಇನ್ಫೋಸಿಸ್ ಪ್ರಶಸ್ತಿ

ಪ್ರಾಥಮಿಕ‌ದಿಂದ ಹಿರಿಯ ಸೆಕೆಂಡರಿವರೆಗೆ ಟಿಪಿಓ 2018 ಸ್ಪರ್ಧೆಯು 21 ವಿಷಯ ವಿಭಾಗಗಳಲ್ಲಿ ಲಭ್ಯವಿದೆ; ಮಾಧ್ಯಮಿಕ ಶಾಲೆ, ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ವಿಭಾಗಗಳು ಪ್ರಸ್ತುತ ಇಂಗ್ಲಿಷ್ ಮಾಧ್ಯಮದಲ್ಲಿದ್ದರೆ, ಪ್ರಾಥಮಿಕ ಶಾಲೆಯ ಪರೀಕ್ಷಾ ವಿಭಾಗ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ತಮಿಳು ಮತ್ತು ತೆಲುಗು ಮಾಧ್ಯಮಗಳಲ್ಲಿ ಲಭ್ಯವಿದೆ.

ಈ ರಾಷ್ಟ್ರೀಯ ಸ್ಪರ್ಧೆಯ 1000 ವಿಜೇತರು ಇದೀಗ ರಿಲಯನ್ಸ್ ಫೌಂಡೇಶನ್ ಟೀಚರ್ ಅವಾರ್ಡ್‌ಗಳನ್ನು ಪಡೆಯಲಿದ್ದಾರೆ - ಪ್ರತಿಯೊಂದು ಪುರಸ್ಕಾರವೂ ನಗದು ಬಹುಮಾನ ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ.

Reliance Foundation Teacher Awards announced

ರಿಲಯನ್ಸ್ ಸಮೂಹವು ಶಿಕ್ಷಣ ಕ್ಷೇತ್ರದಲ್ಲಿ ಎಡ್-ಟೆಕ್ ವೇದಿಕೆ ಜಿಯೋ ಎಂಬೈಬ್, ಧೀರೂಭಾಯಿ ಅಂಬಾನಿ ಅಂತಾರಾಷ್ಟ್ರೀಯ ಶಾಲೆ, ರಿಲಯನ್ಸ್ ಫೌಂಡೇಷನ್ ಶಾಲೆಗಳು, ಮುಂಬರುವ ಜಿಯೋ ಯೂನಿವರ್ಸಿಟಿ ಮುಂತಾದ ಅನೇಕ ಉಪಕ್ರಮಗಳನ್ನು ಹೊಂದಿದೆ. ಈ ಸಹಯೋಗದೊಂದಿಗೆ, ಶೈಕ್ಷಣಿಕ ವ್ಯವಸ್ಥೆಯ ಪ್ರಮುಖ ಪಾಲುದಾರರಾದ ಶಿಕ್ಷಕರನ್ನು ಬೆಂಬಲಿಸುವುದು ರಿಲಯನ್ಸ್ ಫೌಂಡೇಶನ್ ಗುರಿಯಾಗಿದೆ.

ಆಗ ಖರ್ಗೆಗೆ ಅರಸು ಪ್ರಶಸ್ತಿ, ಈಗ ದೇವೇಗೌಡರಿಗೆ ವಾಲ್ಮೀಕಿ ಪುರಸ್ಕಾರ! ಆಗ ಖರ್ಗೆಗೆ ಅರಸು ಪ್ರಶಸ್ತಿ, ಈಗ ದೇವೇಗೌಡರಿಗೆ ವಾಲ್ಮೀಕಿ ಪುರಸ್ಕಾರ!

ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಅವಕಾಶಗಳನ್ನು ಒದಗಿಸಲು ಜಿಯೋ ಎಂಬೈಬ್‌ನಂತಹ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುವ ಗುರಿಯನ್ನು ರಿಲಯನ್ಸ್ ಫೌಂಡೇಶನ್ ಇಟ್ಟುಕೊಂಡಿದೆ. ಶಿಕ್ಷಣವನ್ನು ಆಕರ್ಷಣೀಯ ವೃತ್ತಿಯನ್ನಾಗಿಸುವ ಹಾಗೂ ಆ ಮೂಲಕ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಉದ್ದೇಶವಿರುವ ಸೆಂಟಾ ಟಿಪಿಓ ಕಾರ್ಯಕ್ರಮದೊಡನೆ ಕೈಜೋಡಿಸುವ ಉದ್ದೇಶ ರಿಲಯನ್ಸ್ ಫೌಂಡೇಶನ್‌ನದು.

ಈಗಾಗಲೇ ರಾಷ್ಟ್ರವ್ಯಾಪಿಯಾಗಿ ಆಯೋಜಿಸಲಾಗುತ್ತಿರುವ ಸೆಂಟಾ ಟಿಪಿಓ ಕಾರ್ಯಕ್ರಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಹಾಗೂ ದೇಶದೆಲ್ಲೆಡೆಯ ಶಿಕ್ಷಕರು ಭಾಗವಹಿಸುವಂತೆ ಅದರ ವ್ಯಾಪ್ತಿಯನ್ನು ವಿಸ್ತರಿಸುವ ಗುರಿ ಕೂಡ ರಿಲಯನ್ಸ್ ಫೌಂಡೇಶನ್ ಮುಂದಿದೆ.

ಈ ಸಹಯೋಗದ ಕುರಿತು ಮಾತನಾಡಿದ ರಿಲಯನ್ಸ್ ಫೌಂಡೇಶನ್ ನಿರ್ದೇಶಕಿ ಇಶಾ ಅಂಬಾನಿ, "ಶಿಕ್ಷಣವೂ ಸೇರಿದಂತೆ ಭಾರತದ ಬೆಳವಣಿಗೆಯ ಅತಿಪ್ರಮುಖ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸತನದ ಸುಸ್ಥಿರ ಪರಿಹಾರಗಳನ್ನು ಬೆಂಬಲಿಸುವುದು ರಿಲಯನ್ಸ್ ಫೌಂಡೇಶನ್ನಿನ ಗುರಿಯಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅಂತಹ ಶೈಕ್ಷಣಿಕ ಉಪಕ್ರಮಗಳನ್ನು ದೊಡ್ಡದಾಗಿ ಬೆಳೆಸಲು ತಂತ್ರಜ್ಞಾನ ನೆರವಾಗುತ್ತದೆ.

1 ಕೋಟಿ ಬಹುಮಾನದ ಗಾಂಧಿ ಶಾಂತಿ ಪ್ರಶಸ್ತಿಗೆ 4 ವರ್ಷದಿಂದ ಆಯ್ಕೆ ಇಲ್ಲ 1 ಕೋಟಿ ಬಹುಮಾನದ ಗಾಂಧಿ ಶಾಂತಿ ಪ್ರಶಸ್ತಿಗೆ 4 ವರ್ಷದಿಂದ ಆಯ್ಕೆ ಇಲ್ಲ

ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಭಾರತೀಯ ಶಿಕ್ಷಕರಿಗೆ ತಂತ್ರಜ್ಞಾನ ಹಾಗೂ ಡಿಜಿಟಲ್ ವೇದಿಕೆಗಳ ಶಕ್ತಿಯನ್ನು ಒದಗಿಸಲು, ರಾಷ್ಟ್ರನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುವ ಅವರ ಕೊಡುಗೆಗಳನ್ನು ಪುರಸ್ಕರಿಸಲು ನಮ್ಮ ಫೌಂಡೇಶನ್ ಉತ್ಸುಕವಾಗಿದೆ. ಶಿಕ್ಷಕರನ್ನು ಗುರುತಿಸುವ, ಪುರಸ್ಕರಿಸುವ ವೇದಿಕೆಗಳಿಗೆ ಬೆಂಬಲ ನೀಡುವ ನಮ್ಮ ಬದ್ಧತೆಯನ್ನು ಸೆಂಟಾ ಟಿಪಿಓ ಜೊತೆಗಿನ ನಮ್ಮ ಪಾಲುದಾರಿಕೆ ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.

ಸೆಂಟಾದ ಸ್ಥಾಪಕಿ ಹಾಗೂ ಸಿಇಓ ರಮ್ಯಾ ವೆಂಕಟರಾಮನ್ ಮಾತನಾಡಿ, "ಸೆಂಟಾ ಟಿಪಿಓ ಶಿಕ್ಷಕರನ್ನು ಪುರಸ್ಕರಿಸುವ, ಗುರುತಿಸುವ ಹಾಗೂ ಪ್ರಶಂಸಿಸುವ ಒಂದು ಪ್ರಬಲ ವ್ಯವಸ್ಥೆಯಾಗಿದೆ. ಹೊಸಬರು, ಅನುಭವಿ ಶಾಲಾ ಶಿಕ್ಷಕರು, ಪ್ರಾಂಶುಪಾಲರು, ಟ್ಯೂಶನ್ ಶಿಕ್ಷಕರು, ಬಿ. ಎಡ್. ವಿದ್ಯಾರ್ಥಿಗಳು, ಶಿಕ್ಷಣ ಕ್ಷೇತ್ರದ ಫೆಲೋಗಳು ಮತ್ತು ಸ್ವಯಂಸೇವಕರು, ಬೋಧನೆಯಲ್ಲಿ ಆಸಕ್ತಿಯಿರುವ ಇತರರೂ ಸೇರಿದಂತೆ ಹಲವಾರು ಹಿನ್ನೆಲೆಗಳಿಂದ ಬಂದವರು ಇದರಲ್ಲಿ ಭಾಗವಹಿಸುತ್ತಾರೆ.

ಸರಕಾರಿ ಮತ್ತು ಖಾಸಗಿ ಶಾಲೆಗಳಿಂದ, ಸಿಬಿಎಸ್‌ಇ, ಐಸಿಎಸ್‌ಇ, ಸ್ಟೇಟ್ ಬೋರ್ಡ್‌ಗಳು, ಐಬಿ, ಐಜಿಸಿಎಸ್‌ಇ ಮತ್ತಿತರ ಎಲ್ಲ ಬೋರ್ಡ್‌ಗಳಿಂದ ಬರುವ ಶಿಕ್ಷಕರನ್ನು ನಾವಿಲ್ಲಿ ನೋಡಬಹುದು. ರಿಲಯನ್ಸ್ ಫೌಂಡೇಶನ್ ಜೊತೆಗಿನ ಸಹಯೋಗದಿಂದ ಈ ಉಪಕ್ರಮಕ್ಕೆ ಹೆಚ್ಚಿನ ಬೆಂಬಲ ದೊರೆತಿದೆ, ಮತ್ತು ನಾವು ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು ತಲುಪಲು-ಪುರಸ್ಕರಿಸಲು ಸಾಧ್ಯವಾಗಿದೆ. ಆ ಮೂಲಕ ವೃತ್ತಿಯಲ್ಲಿನ ಹೆಮ್ಮೆಯೂ ಹೆಚ್ಚುವಂತಾಗಿದೆ" ಎಂದರು.

English summary
Reliance Foundation Teacher Awards announced. Reliance Foundation has signed a multiyear collaboration agreement with Centre for Teacher Accreditation (CENTA), an India-based private teacher certification enterprise.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X