ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

$ 2.1 ಬಿಲಿಯನ್ ಹಣ ವಾಪಸ್ ಕೊಡಿ: ಅಂಬಾನಿಗೆ ಚೀನಾ ಬ್ಯಾಂಕ್‌ಗಳ ದುಂಬಾಲು

|
Google Oneindia Kannada News

ನವದೆಹಲಿ, ಜೂನ್ 18: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ರಿಲಯನ್ಸ್ ಕಮ್ಯುನಿಕೇಷನ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಇತ್ತೀಚೆಗಷ್ಟೇ 15,000 ಕೋಟಿ ರೂಪಾಯಿ ಸಾಲ ತೀರಿಸಿರುವುದಾಗಿ ಹೇಳಿಕೊಂಡಿದ್ದರು. ಉಳಿದ ಸಾಲಗಳನ್ನೂ ಶೀಘ್ರದಲ್ಲಿಯೇ ಹಂತಹಂತವಾಗಿ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದರ ನಡುವೆಯೇ ಮತ್ತೊಂದು ಸಂಕಷ್ಟ ಎದುರಾಗಿದೆ.

ಚೀನಾ ಡೆವಲಪ್‌ಮೆಂಟ್ ಬ್ಯಾಂಕ್, ಇಂಡಸ್ಟ್ರಿಯಲ್ ಆಂಡ್ ಕಮರ್ಷಿಯಲ್ ಬ್ಯಾಂಕ್ ಆಫ ಚೀನಾ ಮತ್ತು ಎಕ್ಸಿಮ್ ಬ್ಯಾಂಕ್ ಆಫ್ ಚೀನಾ ಸೇರಿದಂತೆ ಅನಿಲ್ ಅಂಬಾನಿ ಅವರಿಗೆ ಸಾಲ ನೀಡಿರುವ ಹಣಕಾಸು ಸಂಸ್ಥೆಗಳು ತಮಗೆ ಬರಬೇಕಾದ ಕನಿಷ್ಠ 2.1 ಬಿಲಿಯನ್ ಡಾಲರ್ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿವೆ.

ಸರ್ಕಾರಿ ಸ್ವಾಮ್ಯದ ಚೀನಾ ಡೆವಲಪ್‌ಮೆಂಟ್ ಬ್ಯಾಂಕ್ ಅತಿ ಹೆಚ್ಚು ಅಂದರೆ, 9860 ಕೋಟಿ ರೂಪಾಯಿ ($1.4 ಬಿಲಿಯನ್) ಸಾಲವನ್ನು ರಿಲಯನ್ಸ್ ದೂರಸಂಪರ್ಕ ಸಂಸ್ಥೆಗೆ ನೀಡಿದೆ. ಎಕ್ಸಿಮ್ ಬ್ಯಾಂಕ್ ಆಫ್ ಚೀನಾ 3,360 ಕೋಟಿ ರೂಪಾಯಿ ಸಾಲದ ಮರುಪಾವತಿಗೆ ಹಾಗೂ ಇಂಡಸ್ಟ್ರಿಯಲ್ ಆಂಡ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ 1,554 ಕೋಟಿ ರೂಪಾಯಿ ಸಾಲದ ವಾಪಸಾತಿಗಾಗಿ ಬೇಡಿಕೆ ಸಲ್ಲಿಸಿವೆ.

14 ತಿಂಗಳಲ್ಲಿ 35,000 ಕೋಟಿ ರೂ ಸಾಲ ತೀರಿಸಿದ ಅಂಬಾನಿ14 ತಿಂಗಳಲ್ಲಿ 35,000 ಕೋಟಿ ರೂ ಸಾಲ ತೀರಿಸಿದ ಅಂಬಾನಿ

ಭಾರತದ ದಿವಾಳಿತನದ ಬ್ಯಾಂಕ್ ಸಾಲದಾರರ ದೂರುಗಳನ್ನು ಆಲಿಸುತ್ತಿದೆ. ಅತ್ತ ರಿಲಯನ್ಸ್ ಸಮೂಹವು ಕಂಪೆನಿಯ ಆಸ್ತಿಗಳನ್ನು ಖರೀದಿಸುವ ಮತ್ತು ಸಾಲ ಮರುಪಾವತಿಸುವ ಖರೀದಿದಾರರನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ.

ಸಹೋದರ ಮುಕೇಶ್ ಅಂಬಾನಿ ನೆರವು

ಸಹೋದರ ಮುಕೇಶ್ ಅಂಬಾನಿ ನೆರವು

ಅನಿಲ್ ಅಂಬಾನಿ ಅವರ ಸಹೋದರ ಮುಕೇಶ್ ಅಂಬಾನಿ ಮಾರ್ಚ್ ತಿಂಗಳಿನಲ್ಲಿ ಸೋನಿ ಎರಿಕ್ಸನ್ ಕಂಪೆನಿಗೆ ಸಂಬಂಧಿಸಿದ ವಿವಾದದಲ್ಲಿ 80 ಮಿಲಿಯನ್ ಡಾಲರ್ ಪಾವತಿ ಮಾಡುವ ಮೂಲಕ ತಮ್ಮ ಅನಿಲ್ ಅಂಬಾನಿ ಜೈಲು ಪಾಲಾಗುವುದನ್ನು ತಪ್ಪಿಸಿದ್ದರು. ಅಲ್ಲದೆ, ಆರ್‌ಕಾಂನ ಆಸ್ತಿಗಳನ್ನು 17,300 ಕೋಟಿ ರೂಪಾಯಿ ವ್ಯವಹಾರದಲ್ಲಿ ಖರೀದಿಸುವ ಆಫರ್ ಮುಂದಿಟ್ಟಿದ್ದರು. ಇದು ಅನಿಲ್ ಅಂಬಾನಿ ಕೆಲವು ಸಾಲವನ್ನು ತೀರಿಸಲು ಸಹಾಯವಾಗುತ್ತಿತ್ತು. ಆದರೆ, ಈ ಒಪ್ಪಂದ ಕಾನೂನಾತ್ಮಕ ಅಡ್ಡಿಗಳನ್ನು ಎದುರಿಸುತ್ತಿದೆ.

ಕಾಂಗ್ರೆಸ್ ಮೇಲೆ ಹೂಡಿದ್ದ ಕೇಸು ವಾಪಸ್ ಪಡೆಯಲಿದ್ದಾರೆ ಅನಿಲ್ ಅಂಬಾನಿ ಕಾಂಗ್ರೆಸ್ ಮೇಲೆ ಹೂಡಿದ್ದ ಕೇಸು ವಾಪಸ್ ಪಡೆಯಲಿದ್ದಾರೆ ಅನಿಲ್ ಅಂಬಾನಿ

ಪ್ರಮುಖ ಏಳು ಬ್ಯಾಂಕ್‌ಗಳ ಮಾಹಿತಿ

ಪ್ರಮುಖ ಏಳು ಬ್ಯಾಂಕ್‌ಗಳ ಮಾಹಿತಿ

ಜೂನ್ 13ರ ರಿಲಯನ್ಸ್ ಕಮ್ಯುನಿಕೇಷನ್ ಸಾಲದ ಬಾಕಿ ಹೊಂದಿರುವ ಪ್ರಮುಖ ಏಳು ಬ್ಯಾಂಕುಗಳ ಪಟ್ಟಿಯನ್ನು ನೀಡಲಾಗಿದೆ. ಒಟ್ಟಾರೆ ಸಾಲದ ಬಾಕಿಯಲ್ಲಿ ಚೀನಾದ ಬ್ಯಾಂಕುಗಳೇ ನಾಲ್ಕನೆ ಒಂದು ಭಾಗದಷ್ಟು ಮೊತ್ತದ ಬಾಕಿಯನ್ನು ಉಲ್ಲೇಖಿಸಿವೆ.

ಯಾವ ಬ್ಯಾಂಕ್‌ನಲ್ಲಿ ಎಷ್ಟೆಷ್ಟು?

ಯಾವ ಬ್ಯಾಂಕ್‌ನಲ್ಲಿ ಎಷ್ಟೆಷ್ಟು?

ಚೀನಾ ಡೆವಲಪ್‌ಮೆಂಟ್ ಬ್ಯಾಂಕ್ 9,860 ಕೋಟಿ ರೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 4,910 ಕೋಟಿ ರೂ, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ 4,760 ಕೋಟಿ ರೂ., ಇಕ್ಸಿಮ್ ಬ್ಯಾಂಕ್ ಆಫ್ ಚೀನಾ 3,360 ಕೋಟಿ ರೂ, ಬ್ಯಾಂಕ್ ಆಫ್ ಬರೋಡಾ 2,700 ಕೋಟಿ ರೂ, ಮ್ಯಾಡಿಸನ್ ಪೆಸಿಫಿಕ್ ಟ್ರಸ್ಟ್ 2,350 ಕೋಟಿ ರೂ. ಮತ್ತು ಆಕ್ಸಿಸ್ ಬ್ಯಾಂಕ್ 2,090 ಕೋಟಿ ರೂಪಾಯಿ.

ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?ರಫೇಲ್ ಡೀಲ್ ಬಳಿಕ ಅಂಬಾನಿ ಸಾಲ ಮನ್ನಾ ಮಾಡಿತೇ ಫ್ರಾನ್ಸ್ ಸರ್ಕಾರ?

57,382 ಕೋಟಿ ರೂಪಾಯಿ ಮೊತ್ತ

57,382 ಕೋಟಿ ರೂಪಾಯಿ ಮೊತ್ತ

ಸೋಮವಾರ ಹಣಕಾಸು ಸಾಲದಾರರ ಪಟ್ಟಿ ಬಿಡುಗಡೆ ಮಾಡಿರುವ ರಿಲಯನ್ಸ್, ಆರ್ಥಿಕ ದಿವಾಳಿತನದ ಪ್ರಕ್ರಿಯೆ ಅಡಿಯಲ್ಲಿ 57,382 ಕೋಟಿ ರೂಪಾಯಿ ಮೊತ್ತದ ಬಾಕಿ ತೀರಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

ರಷ್ಯಾದ ಹೂಡಿಕೆ ಬ್ಯಾಂಕ್ ವಿಟಿಬಿ ಕ್ಯಾಪಿಟಲ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 511 ಕೋಟಿ ರೂಪಾಯಿ ಸಾಲ ಹೊಂದಿರುವುದಾಗಿ ತಿಳಿಸಲಾಗಿದೆ. ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ (ಲಂಡನ್), ಡ್ಯೂಷೆ ಬ್ಯಾಂಕ್ (ಹಾಂಕಾಂಗ್), ಡಿಬಿಎಸ್ ಬ್ಯಾಂಕ್ ಮತ್ತು ಎಮಿರೇಟ್ಸ್ ಎನ್‌ಬಿಡಿ ಬ್ಯಾಂಕ್ ಇನ್ನಿತರೆ ಪ್ರಮುಖ ವಿದೇಶ ಬ್ಯಾಂಕುಗಳಾಗಿವೆ.

English summary
Banks from China demanded bankcrupt Reliance Communication Ltd chief Anil Ambani for $2.1 billion payment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X