• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಿಲಯನ್ಸ್‌-ಫ್ಯೂಚರ್ ಗ್ರೂಪ್ ಬಹುಕೋಟಿ ಡೀಲ್‌ಗೆ ದಿಲ್ಲಿ ಹೈಕೋರ್ಟ್ ತಡೆ: ಅಂಬಾನಿಗೆ ಹಿನ್ನಡೆ

|

ನವದೆಹಲಿ, ಫೆಬ್ರವರಿ 03: ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ಆರ್‌ಆರ್‌ವಿಎಲ್‌ ಹಾಗೂ ಫ್ಯೂಚರ್ ಗ್ರೂಪ್ ನಡುವಿನ ಸಾವಿರಾರು ಕೋಟಿ ರೂಪಾಯಿ ಡೀಲ್‌ಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಅಂಬಾನಿಗೆ ಭಾರೀ ಹಿನ್ನಡೆಯಾಗಿದೆ.

ಫ್ಯೂಚರ್ ಸಮೂಹದ ಚಿಲ್ಲರೆ ಹಾಗೂ ಸಗಟು ವ್ಯವಹಾರ, ಲಾಜಿಸ್ಟಿಕ್ಸ್ ಹಾಗೂ ವೇರ್ ಹೌಸಿಂಗ್ ವ್ಯವಹಾರವನ್ನು ಸರಾಸರಿ ಮೊತ್ತ 24,713 ಕೋಟಿ ರುಪಾಯಿಗೆ ಖರೀದಿ ವ್ಯವಹಾರ ನಡೆದಿದೆ ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಈ ಹಿಂದೆ ಬಿಎಸ್‌ಇಗೆ ತಿಳಿಸಿತ್ತು. ಆದರೆ ಈ ಡೀಲ್ ಕುರಿತಾಗಿ ಅಮೆಜಾನ್ ಆಕ್ಷೇಪ ಎತ್ತಿತ್ತು.

ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್ ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್

ಆದರೆ ಅದಾಗಲೇ ಫ್ಯೂಚರ್‌ ಗ್ರೂಪ್‌ನಲ್ಲಿ ಸಣ್ಣ ಪ್ರಮಾಣದ ಹಣ ಹೂಡಿಕೆ ಮಾಡಿದ್ದ ಅಮೆಜಾನ್‌ ಈ ಡೀಲ್‌ನ ವಿರುದ್ಧ ಸಿಂಗಾಪುರ ನ್ಯಾಯಾಲಯ ಹಾಗೂ ದಿಲ್ಲಿಯ ಹೈಕೋರ್ಟ್‌ ಮೊರೆ ಹೋಗಿತ್ತು.

ಅಮೆಜಾನ್‌ ಡಾಟ್‌ ಕಾಮ್‌ ನ ಹಕ್ಕುಗಳನ್ನು ರಕ್ಷಿಸಲು ತಡೆಯಾಜ್ಞೆ ಹೊರಡಿಸಿರುವುದಾಗಿ ಕೋರ್ಟ್‌ ತಿಳಿಸಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕಿಶೋರ್‌ ಬಿಯಾನಿಯ ಫ್ಯೂಚರ್‌ ಗ್ರೂಪ್‌ಗೆ ಸೂಚಿಸಿದೆ. ಇನ್ನು ಕೋರ್ಟ್‌ ಆದೇಶವನ್ನು ಅಮೆಜಾನ್‌ ಸ್ವಾಗತಿಸಿದೆ.

English summary
The Delhi High Court has temporarily restrained Future Group from selling its retail assets to Reliance Industries Ltd
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X