ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್, ಫ್ಯೂಚರ್ ರೀಟೇಲ್ ಡೀಲ್ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋದ ಅಮೆಜಾನ್

|
Google Oneindia Kannada News

ನವದೆಹಲಿ, ಫೆಬ್ರವರಿ 11: ರಿಲಯನ್ಸ್ ರೀಟೇಲ್ ಲಿಮಿಟೆಡ್ ಹಾಗೂ ಫ್ಯೂಚರ್ ರೀಟೇಲ್ ನಡುವಿನ 24,713 ಕೋಟಿ ಮೊತ್ತದ ಡೀಲ್ ವಿರುದ್ಧ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ.

ಒಪ್ಪಂದದ ಯಥಾಸ್ಥಿತಿ ಕುರಿತು ಹಿಂದಿನ ಆದೇಶವನ್ನು ತಡೆಹಿಡಿದ ದೆಹಲಿ ಹೈಕೋರ್ಟ್‌ನ ತೀರ್ಪಿನ ನಂತರ ಮತ್ತು ಶಾಸನಬದ್ಧ ಕಾನೂನಿನ ಅನುಸಾರವಾಗಿ ಕಾರ್ಯನಿರ್ವಹಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ನಂತರ ಈ ಬೆಳವಣಿಗೆ ಸಂಭವಿಸಿದೆ.

3.92 ಲಕ್ಷ ಕೋಟಿ ಸ್ಪೆಕ್ಟ್ರಂ ಹರಾಜು: ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾದಿಂದ ಅರ್ಜಿ ಸಲ್ಲಿಕೆ 3.92 ಲಕ್ಷ ಕೋಟಿ ಸ್ಪೆಕ್ಟ್ರಂ ಹರಾಜು: ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾದಿಂದ ಅರ್ಜಿ ಸಲ್ಲಿಕೆ

ರಿಲಯನ್ಸ್‌ ಮತ್ತು ಫ್ಯೂಚರ್‌ ರಿಟೇಲ್‌ ಲಿ. ನಡುವಿನ ಒಪ್ಪಂದದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ದಿಲ್ಲಿ ಹೈಕೋರ್ಟ್‌ನ‌ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ದ್ವಿಸದಸ್ಯಪೀಠ ರದ್ದುಗೊಳಿಸಿತ್ತು. ಈ ಡೀಲ್‌ಗೆ ಆಸಕ್ತಿಯೇ ಹೊಂದಿಲ್ಲದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಮೆಜಾನ್‌ ಆಗ್ರಹಿಸಲು ಯಾವುದೇ ಸಕಾರಣಗಳಿಲ್ಲ. ಅಲ್ಲದೆ ಮೂರು ಒಪ್ಪಂದಗಳು ವಿಭಿನ್ನವಾಗಿವೆ ಎಂದು ಹೈಕೋರ್ಟ್‌ನ ನ್ಯಾಯಪೀಠ ಹೇಳಿದೆ.

Reliance And Future Retail Deal Dispute: Amazon Moves To Supreme Court

ಇದರ ಜೊತೆಗೆ ಈ ಹಿಂದೆ ದಿಲ್ಲಿ ಹೈಕೋರ್ಟ್ ಅಮೆಜಾನ್‌ ಜತೆ ಸಂಧಾನ ನಡೆಸುವ ಪ್ರಸ್ತಾವನೆ ಇಟ್ಟಿತ್ತು. ಈ ಪ್ರಸ್ತಾವನೆಯನ್ನು ಫೆಬ್ರವರಿ 2 ರಂದು ಫ್ಯೂಚರ್ ಗ್ರೂಪ್ ತಿರಸ್ಕರಿಸಿತ್ತು. ದಿಲ್ಲಿ ಹೈಕೋರ್ಟ್‌ ಅಮೆಜಾನ್‌ ಮತ್ತು ಫ್ಯೂಚರ್‌ ಗ್ರೂಪ್‌ ನಡುವಿನ ಸಂಧಾನಕ್ಕೆ ಇಬ್ಬರು ನ್ಯಾಯಮೂರ್ತಿಗಳ ಸಮಿತಿ ರಚಿಸುವುದಾಗಿ ಹೇಳಿತ್ತು. ಆದರೆ ಇದಕ್ಕೆ ಫ್ಯೂಚರ್‌ ಗ್ರೂಪ್‌ ಆಸಕ್ತಿ ತೋರಿರಲಿಲ್ಲ.

ಕಳೆದ ತಿಂಗಳು, ಸಿಂಗಾಪುರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿ (ಎಸ್‌ಐಎಸಿ) ತುರ್ತು ಮಧ್ಯಸ್ಥಿಕೆದಾರರ (ಇಎ) ಮಧ್ಯಂತರ ಆದೇಶವನ್ನು ಜಾರಿಗೊಳಿಸುವಂತೆ ಕೋರಿ ಅಮೆಜಾನ್ ದೆಹಲಿ ಹೈಕೋರ್ಟ್‌ನ್ನು ಮೆಟ್ಟಿಲೇರಿತ್ತು. ಅದು ದೆಹಲಿ ಎಫ್‌ಆರ್‌ಎಲ್ ಅನ್ನು ರಿಲಯನ್ಸ್‌ನೊಂದಿಗಿನ ಒಪ್ಪಂದಕ್ಕೆ ಮುಂದಾಗದಂತೆ ತಡೆಯಿತು.

English summary
E-commerce major Amazon has moved the Supreme Court in a bid to block Future group's Rs 24,713-crore deal with Reliance, according to sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X