ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಮತ್ತು ಬ್ರಿಟಿಷ್ ಪೆಟ್ರೋಲಿಯಂನಿಂದ ಅನಿಲ ಯೋಜನೆ ವಿವರ

|
Google Oneindia Kannada News

ಮುಂಬೈ, ಡಿಸೆಂಬರ್ 20: ಏಷ್ಯಾದಲ್ಲೇ ಅತ್ಯಂತ ಆಳ ನೀರಿನ ಅನಿಲ ಯೋಜನೆಗೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಬ್ರಿಟಿಷ್ ಪೆಟ್ರೋಲಿಯಂ (ಬಿ.ಪಿ.) ಚಾಲನೆ ನೀಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಬ್ರಿಟಿಷ್ ಪೆಟ್ರೋಲಿಯಂ (ಬಿ.ಪಿ.) ಶುಕ್ರವಾರ ಘೋಷಣೆ ಮಾಡಿದಂತೆ, R ಕ್ಲಸ್ಟರ್ ನ ಭಾರತದ ಪೂರ್ವ ಕಡಲ ಕಿನಾರೆಯ ಆಳ ನೀರಿನ ಅನಿಲ ಕ್ಷೇತ್ರದ KG D6 ಬ್ಲಾಕ್ ನಲ್ಲಿ ಉತ್ಪಾದನೆ ಆರಂಭಿಸುವ ಕುರಿತಂತೆ ಪ್ರಕಟಣೆ ಹೊರಡಿಸಿವೆ.

10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ10 ಸಾವಿರ ಉದ್ಯೋಗ ಕಡಿತ, BP ತೈಲ ಕಂಪನಿ ಕುಸಿತ

KG D6 ಬ್ಲಾಕ್- R ಕ್ಲಸ್ಟರ್, ಸ್ಯಾಟಲೈಟ್ ಕ್ಲಸ್ಟರ್ ಮತ್ತು ಎಂ.ಜೆ.ನಲ್ಲಿ ಮೂರು ಆಳನೀರಿನ ಅನಿಲ ಯೋಜನೆಯನ್ನು ರಿಲಯನ್ಸ್ ಮತ್ತು ಬ್ರಿಟಿಷ್ ಪೆಟ್ರೋಲಿಯಂ ಸೇರಿ ರೂಪಿಸುತ್ತಿದೆ. 2023ರ ಹೊತ್ತಿಗೆ ಈ ಮೂರೂ ಸೇರಿ ಭಾರತದ ಅನಿಲ ಬೇಡಿಕೆಯ ಶೇಕಡಾ 15ರಷ್ಟನ್ನು ಪೂರೈಸುತ್ತದೆ.

KG D6 ನಲ್ಲಿ ರಿಲಯನ್ಸ್ ಪ್ರಮುಖ ಆಪರೇಟರ್

KG D6 ನಲ್ಲಿ ರಿಲಯನ್ಸ್ ಪ್ರಮುಖ ಆಪರೇಟರ್

KG D6 ಬ್ಲಾಕ್ ನಲ್ಲಿನ ಈಗಾಗಲೇ ಇರುವ ಮೂಲಸೌಕರ್ಯವನ್ನು ಈ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. KG D6 ನಲ್ಲಿ ರಿಲಯನ್ಸ್ ಪ್ರಮುಖ ಆಪರೇಟರ್ ಆಗಿ, 66.67% ಭಾಗವಹಿಸುವಿಕೆ ಹೊಂದಿದ್ದರೆ, ಬ್ರಿಟಿಷ್ ಪೆಟ್ರೋಲಿಯಂ 33.33% ಭಾಗವಹಿಸುವಿಕೆ ಇರುತ್ತದೆ. ಮುಂಬರುವ ಮೂರು ಆಳನೀರಿನ ಅನಿಲ ಯೋಜನೆಗಳಲ್ಲಿ KG D6 ಮೊದಲನೆಯದ್ದಾಗಿದೆ.

ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ

ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ

ರಿಲಯನ್ಸ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ, ''ಬ್ರಿಟಿಷ್ ಪೆಟ್ರೋಲಿಯಂ ಜತೆಗಿನ ನಮ್ಮ ಸಹಭಾಗಿತ್ವದ ಬಗ್ಗೆ ಹೆಮ್ಮೆ ಇದೆ. ಭೌಗೋಳಿಕ ಹಾಗೂ ಹವಾಮಾನ ದೃಷ್ಟಿಯಿಂದ ಸವಾಲಾಗಿರುವ ಕಡೆ ಅನಿಲ ಯೋಜನೆಗೆ ನಮ್ಮ (ರಿಲಯನ್ಸ್ ಮತ್ತು ಬಿಪಿ) ಪ್ರಾವೀಣ್ಯತೆ ಜತೆಗೂಡುತ್ತಿದೆ. ಭಾರತದ ಇಂಧನ ಕ್ಷೇತ್ರದಲ್ಲಿ ಸ್ವಚ್ಛ ಮತ್ತು ಹಸಿರು ಅನಿಲ ಆಧಾರಿತ ಆರ್ಥಿಕತೆಗೆ ಮೈಲುಗಲ್ಲು ಇದಾಗಿದೆ. ಕೃಷ್ಣ ಗೋದಾವರಿ ಪಾತ್ರದಲ್ಲಿನ ಆಳನೀರಿನ ನಮ್ಮ ಮೂಲಸೌಕರ್ಯದ ಮೂಲಕ ಅನಿಲ ಉತ್ಪಾದನೆ ನಿರೀಕ್ಷಿಸುತ್ತಿದ್ದು, ದೇಶದ ಸ್ವಚ್ಛ ಇಂಧನದ ಅಗತ್ಯ ಪೂರೈಕೆ ಇದರಿಂದ ಆಗುತ್ತದೆ'' ಎಂದು ಹೇಳಿದ್ದಾರೆ.

ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಮುಂದಾದ ಸರ್ಕಾರ, ಖರೀದಿಗೆ ಕಾದಿದೆ ರಿಲಯನ್ಸ್

ಬ್ರಿಟಿಷ್ ಪೆಟ್ರೋಲಿಯಂನ ಮುಖ್ಯಾಧಿಕಾರಿ ಬರ್ನಾರ್ಡ್

ಬ್ರಿಟಿಷ್ ಪೆಟ್ರೋಲಿಯಂನ ಮುಖ್ಯಾಧಿಕಾರಿ ಬರ್ನಾರ್ಡ್

ಬ್ರಿಟಿಷ್ ಪೆಟ್ರೋಲಿಯಂನ ಮುಖ್ಯಾಧಿಕಾರಿ ಬರ್ನಾರ್ಡ್ ಲೂನಿ ಮಾತನಾಡಿ, ''ರಿಲಯನ್ಸ್ ಜತೆಗಿನ ನಮ್ಮ ಸಹಭಾಗಿತ್ವದ ಸಾಧ್ಯತೆಗೆ ಈ ಸ್ಟಾರ್ಟ್ ಅಪ್ ಮತ್ತೊಂದು ಉದಾಹರಣೆ. ಹೆಚ್ಚಾಗುತ್ತಿರುವ ಭಾರತದ ಇಂಧನ ಅಗತ್ಯವನ್ನು ಪೂರೈಸಲು ಎರಡೂ ಕಂಪೆನಿಗಳು ಅತ್ಯುತ್ತಮ ಕೊಡುಗೆ ನೀಡುತ್ತವೆ. ಭಾರತದ್ದೇ ಸ್ವಂತ ಸ್ವಚ್ಛ ಅನಿಲದ ಉತ್ಪಾದನೆ ಹೆಚ್ಚುತ್ತಿರುವುದರಿಂದ ಬೇಡಿಕೆ ಪೂರೈಸಲು ನೆರವಾಗುತ್ತದೆ. ಭವಿಷ್ಯದ ಇಂಧನ ಅಗತ್ಯದ ಮಿಶ್ರಣವನ್ನು ರೂಪಿಸಲು ಮತ್ತು ಉತ್ತಮಗೊಳಿಸಲು ಈ ಮೂರು ಹೊಸ KG D6 ಪ್ರಾಜೆಕ್ಟ್ ಗಳು ಬೆಂಬಲಿಸುತ್ತವೆ'' ಎಂದಿದ್ದಾರೆ.

ಸ್ಯಾಟಲೈಟ್ಸ್ ಕ್ಲಸ್ಟರ್ ಮುಂದಿನ ಯೋಜನೆ

ಸ್ಯಾಟಲೈಟ್ಸ್ ಕ್ಲಸ್ಟರ್ ಮುಂದಿನ ಯೋಜನೆ

ಮುಂದಿನ ಯೋಜನೆಯು ಸ್ಯಾಟಲೈಟ್ಸ್ ಕ್ಲಸ್ಟರ್ ನದ್ದಾಗಿದ್ದು, 2021ರಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಆ ನಂತರ MJ ಪ್ರಾಜೆಕ್ಟ್ 2022ರಲ್ಲಿ ಶುರುವಾಗಬಹುದು. ಈ ಮೂರು ಅನಿಲ ಕ್ಷೇತ್ರದಲ್ಲಿ ಉತ್ಪಾದನೆ ಶುರುವಾದ ಮೇಲೆ ಗರಿಷ್ಠ ಮಟ್ಟದಲ್ಲಿ ಉತ್ಪಾದನೆ ಆಗುವಾಗ ಅದು 30 mmscmd (1bcf/d) ಇರುತ್ತದೆ. 2023ರ ಹೊತ್ತಿಗೆ ಭಾರತದ ದೇಶೀಯ ಬಳಕೆಯ 25% ಇರಲಿದ್ದು, ಇದರಿಂದ ಅನಿಲ ಆಮದಿನ ಮೇಲೆ ಅವಲಂಬನೆ ಕಡಿಮೆ ಆಗಲು ನೆರವಾಗುತ್ತದೆ.

English summary
Reliance Industries Limited (RIL) and BP on Friday announced the start of production of the R Cluster, an ultra-deep water gas field in a KG-D6 block on the east coast of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X