• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಾಡ್ ಬ್ಯಾಂಡ್ ಲೋಕಕ್ಕೆ ಜಿಯೋ ಫೈಬರ್ ಸೆಪ್ಟೆಂಬರ್ 05ಕ್ಕೆ ಎಂಟ್ರಿ

|
   Reliance JIO AGM 2019 LIVE | Mukesh Ambani LIVE | Jio Phone 3 Jio Giga Fiber Launch 2019

   ಬೆಂಗಳೂರು, ಆಗಸ್ಟ್ 12: ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್ ಐಎಲ್) ತನ್ನ ಗ್ರಾಹಕರಿಗೆ ಹೊಸ ಮೊಬೈಲ್, ಹೊಸ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಇಂದು ಘೋಷಿಸಿದೆ.

   ಮುಂಬೈನಲ್ಲಿ ನಡೆದಿರುವ ಸಂಸ್ಥೆಯ 42ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, ಜಿಯೋ ಫೋನ್ 3 ಹಾಗೂ ಜಿಯೋ ಗಿಗಾಫೈಬರ್ ಬಗ್ಗೆ ಘೋಷಿಸಿದರು.

   ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಾಗಿ 60 ಸಾವಿರ ಕೋಟಿ ಹೂಡಿಕೆ

   ಸೆಪ್ಟೆಂಬರ್ 05ರಿಂದ ಇಂಟರ್ನೆಟ್ ಬ್ರಾಡ್ ಬ್ಯಾಂಡ್ ಲೋಕಕ್ಕೆ ಎಂಟ್ರಿಕೊಡಲಿರುವ ಜಿಯೋ ಗಿಗಾಫೈಬರ್ ಹೊಸ ಕ್ರಾಂತಿ ಹುಟ್ಟುಹಾಕುವ ಹುಮ್ಮಸ್ಸಿನಲ್ಲಿದೆ. ಮೊಬೈಲ್ ಫೋನ್ ಕ್ಷೇತ್ರದಲ್ಲಿ ವಿಸ್ತೃತವಾದ ನೆಟ್ವರ್ಕ್ ಬೆಳೆಸಿಕೊಂಡಿರುವ ಜಿಯೋ ಈಗ ಇಂಟರ್ನೆಟ್ ಮೂಲಕ ದೇಶದ ಮೂಲೆ ಮೂಲೆಗೂ ತಲುಪಿ, ಮೋದಿ ಅವರ ಡಿಜಿಟಲ್ ಇಂಡಿಯಾ ಕನಸು ಸಾಕಾರಗೊಳಿಸಲು ಮುಂದಾಗಿದೆ.

   ಏನೇನು ಹೊಸ ಯೋಜನೆ: ಜಿಯೋ ಗಿಗಾ ಫೈಬಲ್ ಇದು ಲ್ಯಾಂಡ್ ಲೈನ್ ಜೊತೆಗೆ ಸಿಗುವ ಬ್ರಾಡ್ ಬ್ಯಾಂಡ್ ಯೋಜನೆಯಾಗಿದ್ದು, ತಿಂಗಳಿಗೆ 500 ರು ನಂತೆ 100 ಎಂಬಿಪಿಎಸ್ ವೇಗದಿಂದ ಆರಂಭವಾಗಲಿದ್ದು, 1 ಜಿಬಿ ತನಕ ಇರಲಿದೆ. 600 ಹಾಗೂ 700 ರು ಗಳಿಗೆ ಡಿಟಿಎಸ್, ಟಿವಿ ಸೇವೆ ಎಲ್ಲವೂ ಲಭ್ಯವಾಗಲಿದೆ.

   ಇದಲ್ಲದೆ, ವರ್ಚುಯಲ್ ರಿಯಾಲಿಟಿ ಹೆಡ್ ಫೋನ್, ವಿಡಿಯೋ ಕಾಲಿಂಗ್ ಸೌಲಭ್ಯ ಇನ್ನಷ್ಟು ಉತ್ತಮಗೊಳ್ಳಲಿದೆ. ಒಟ್ಟು ಬಳಕೆದಾರರ ಸಂಖ್ಯೆ 34 ಕೋಟಿಗೂ ಅಧಿಕವಾಗಿದೆ. 3 ವರ್ಷಗಳಲ್ಲಿ ತಿಂಗಳಿಗೆ 1 ಕೋಟಿಯಷ್ಟು ಹೊಸ ಬಳಕೆದಾರರು ಸೇರ್ಪಡೆಯಾಗುತ್ತಿದ್ದಾರೆ ಎಂದು ಮುಖೇಶ್ ಹೇಳಿದರು.

   English summary
   Reliance AGM 2019: Jio Fiber to be launched on Sep 5 starting Rs 700 per month. Reliance Industries Limited chairman Mukesh Ambani announced 42nd annual general meeting (AGM)
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X