ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್ ತೀರ್ಪು ಪ್ರಕಟ, ರಿಲಯನ್ಸ್ ಗೆ ನಿರಾಳ, ಷೇರು ಏರಿಕೆ

|
Google Oneindia Kannada News

ಮುಂಬೈ, ಡಿಸೆಂಬರ್ 14: ರಫೇಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶುಕ್ರವಾರದಂದು ಮಹತ್ವದ ತೀರ್ಪು ಪ್ರಕಟಿಸುತ್ತಿದ್ದಂತೆ ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹ ಸಂಸ್ಥೆಗಳ ಷೇರುಗಳ ಮೌಲ್ಯ ಮೇಲಕ್ಕೇರಿವೆ.

ರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳುರಫೇಲ್ ವಿವಾದದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆರು ಸಂಗತಿಗಳು

ಡಸಾಲ್ಟ್ ಕಂಪನಿಯ ಹೂಡಿಕೆಯನ್ನು ಅನಿಲ್ ಅಂಬಾನಿ ಗುಂಪಿನ ಕಂಪನಿ ರಿಲಯನ್ಸ್ ಇನ್ ಫ್ರಾಸ್ಟ್ರಕ್ಚರ್ ನ ಲಾಭವನ್ನಾಗಿ ಪರಿವರ್ತಿಸಲಾಗಿದೆ. ಆ ಕಂಪನಿಯ ಷೇರುಗಳನ್ನು ಸಹವರ್ತಿ ಕಂಪನಿಯಾದ ರಿಲಯನ್ಸ್ ಏರ್ ಪೋರ್ಟ್ ಡೆವಲಪರ್ಸ್ ಲಿಮಿಟೆಡ್ ಗೆ ಪ್ರೀಮಿಯಂ ಬೆಲೆಯಲ್ಲಿ ಮಾರಲಾಗಿದೆ.

ರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿರಫೇಲ್ ಡೀಲ್: ಏನೇನಾಯ್ತು ಎಂದು ಕಾಂಗ್ರೆಸ್ ನೀಡಿದ ಘಟನಾವಳಿ

36 ಯುದ್ಧ ವಿಮಾನಗಳ ಕುರಿತಂತೆ ವಿವಾದ ಉಂಟಾಗಿದ್ದು, ಈ ಯುದ್ಧ ವಿಮಾನಗಳ ಖರೀದಿ ಡೀಲ್ ಫ್ರಾನ್ಸಿನ ಡಸಾಲ್ಟ್ ಸಂಸ್ಥೆಗೆ ನೀಡಬೇಕಾದರೆ, ಅನಿಲ್ ಅಂಬಾನಿ ಅವರ ಸಂಸ್ಥೆಗೆ ಗುತ್ತಿಗೆ ನೀಡಬೇಕು ಎಂದು ಪ್ರಧಾನಿ ಮೋದಿ ಅವರು ತಾಕೀತು ಮಾಡಿದ್ದರು ಎಂದು ಆರೋಪಿಸಲಾಗಿತ್ತು.

Reliance ADAG Group shares rise after SCs clean chit

ಆದರೆ, ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ನೀಡಿದ ತೀರ್ಪಿನಿಂದ ರಿಲಯನ್ಸ್, ಕೇಂದ್ರ ಸರ್ಕಾರಕ್ಕೆ ಶುಭವಾಗಿ ಪರಿಣಮಿಸಿದೆ.

ರಫೇಲ್ ಡೀಲ್ ತನಿಖೆಗೆ ಸುಪ್ರೀಂ ನಕಾರ: ಕೇಂದ್ರ ಸರ್ಕಾರ ನಿರಾಳರಫೇಲ್ ಡೀಲ್ ತನಿಖೆಗೆ ಸುಪ್ರೀಂ ನಕಾರ: ಕೇಂದ್ರ ಸರ್ಕಾರ ನಿರಾಳ

ಬಿಎಸ್ಇಯಲ್ಲಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರಿ ಷೇರುಗಳನ್ನು(ಶೇ 0.08 ಇಳಿಕೆ) ಹೊರತುಪಡಿಸಿದರೆ, ರಿಲಯನ್ಸ್ ಕಮ್ಯೂನಿಕೇಷನ್ (ಶೇ 3.04 ಏರಿಕೆ), ರಿಲಯನ್ಸ್ ಪವರ್ (ಶೇ 2.32 ಏರಿಕೆ), ರಿಲಯನ್ಸ್ ಕ್ಯಾಪಿಟಲ್ (ಶೇ 1.37 ಏರಿಕೆ) ಹಾಗೂ ರಿಲಯನ್ಸ್ ಇನ್ಫ್ರಾ (ಶೇ 3.47 ಏರಿಕೆ) ಷೇರುಗಳು ಮೇಲ್ಮುಖವಾಗಿ ಚಲಿಸುತ್ತಿವೆ.

ಎನ್ ಎಸ್ ಇಯಲ್ಲೂ ರಿಲಯನ್ಸ್ ಇನ್ಫ್ರಾ ಶೇ 4.81ರಷ್ಟು, ರಿಯಲಯ್ಸ್ನ್ ಪವರ್ ಶೇ 2.32ರಷ್ಟು,ರಿಲಯನ್ಸ್ ಕಮ್ಯೂನಿಕೇಷನ್ ಶೇ 3.57ರಷ್ತು, ರಿಲಯನ್ಸ್ ಕ್ಯಾಪಿಟರ್ಲ್ ಶೇ 0.78ರಷ್ಟು ಏರಿಕೆ ಕಂಡಿವೆ.

English summary
Shares of Anil Ambani-led Reliance ADAG Group companies logged gains in Friday's session after the Supreme Court rejected petitions seeking an investigation into the Government of India’s Rafale fighter jets deal with France's Dassault Aviation, saying there was no evidence of wrongdoing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X