ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯೂಚರ್ ಸಮೂಹದ ಬಿಗ್ ಬಜಾರ್ ಖರೀದಿಸಿದ ರಿಲಯನ್ಸ್

|
Google Oneindia Kannada News

ಫ್ಯೂಚರ್ ಸಮೂಹದ ಚಿಲ್ಲರೆ ಹಾಗೂ ಸಗಟು ವ್ಯವಹಾರ, ಲಾಜಿಸ್ಟಿಕ್ಸ್ ಹಾಗೂ ವೇರ್ ಹೌಸಿಂಗ್ ವ್ಯವಹಾರವನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಖರೀದಿ ಮಾಡಿದೆ. ಈ ಮೂಲಕ ಫ್ಯೂಚರ್ ಒಡೆತನದ ಬಿಗ್ ಬಜಾರ್ ಮಳಿಗೆಗಳು ರಿಲಯನ್ಸ್ ತೆಕ್ಕೆಗೆ ಬಿದ್ದಿದೆ. ಮಾರುಕಟ್ಟೆ ನಿಯಂತ್ರಕ ಸೆಬಿಯ ಅನುಮತಿ ಸಿಕ್ಕಿರುವುದರಿಂದ ಈ ಒಪ್ಪಂದ ಇದೀಗ ಅಧಿಕೃತಗೊಂಡಿದೆ.

ಈ ಹಿಂದೆ ವರದಿಯಾದಂತೆ, ಸರಾಸರಿ ಮೊತ್ತ 24,713 ಕೋಟಿ ರುಪಾಯಿಗೆ ಖರೀದಿ ವ್ಯವಹಾರ ನಡೆದಿದೆ ಎಂದು ಬಿಎಸ್ಇಗೆ ರಿಲಯನ್ಸ್ ಸಂಸ್ಥೆ ಮಾಹಿತಿ ನೀಡಿದೆ. ಭಾರತದಲ್ಲಿ ಆಧುನಿಕ ರಿಟೇಲ್ ವ್ಯವಹಾರ ಕ್ಷೇತ್ರದಲ್ಲಿ ಬಹುದೊಡ್ಡ ಮೊತ್ತದ ಒಪ್ಪಂದ ಇದಾಗಿದೆ. ಈ ಮೂಲಕ ಬಿಗ್ ಬಜಾರ್, ಫ್ಯಾಶನ್ ಅಟ್ ಬಿಗ್ ಬಜಾರ್, ಈಸಿ ಡೇ ಮತ್ತು ಬ್ರಾಂಡ್ ಫ್ಯಾಕ್ಟರಿ ಸೇರಿದಂತೆ ಭಾರತದ ಕೆಲವು ಪ್ರಮುಖ ಚಿಲ್ಲರೆ ಸ್ವರೂಪಗಳನ್ನು ರಿಲಯನ್ಸ್ ಸ್ವಾಧೀನಪಡಿಸಿಕೊಳ್ಳಲಿದೆ.

 ಜಿಯೋ ಮಾರ್ಟ್ ಆ್ಯಪ್ ಬಿಡುಗಡೆ: ಹೇಗೆ ಕಾರ್ಯನಿರ್ವಹಿಸಲಿದೆ? ಜಿಯೋ ಮಾರ್ಟ್ ಆ್ಯಪ್ ಬಿಡುಗಡೆ: ಹೇಗೆ ಕಾರ್ಯನಿರ್ವಹಿಸಲಿದೆ?

ಫ್ಯೂಚರ್ ಸಮೂಹದಿಂದ ನಡೆಸುತ್ತಿರುವ ಕೆಲವು ಕಂಪೆನಿಗಳ ವ್ಯವಹಾರವನ್ನು ಫ್ಯೂಚರ್ ಎಂಟರ್ ಪ್ರೈಸಸ್ ಲಿಮಿಟೆಡ್ (FEL)ನಲ್ಲಿ ವಿಲೀನ ಮಾಡಲಿದೆ. ಇನ್ನೊಂದೆಡೆ ಪ್ರಸ್ತಾವಿತ ವ್ಯಹಾರವು ಕಾನೂನು ಪ್ರಕ್ರಿಯೆಯ ಭಾಗವಾಗಿದ್ದು, ನಾವು ನಮ್ಮ ಕಾನೂನು ಸಮರ ಮುಂದುವರೆಸುತ್ತೇವೆ ಎಂದು ಅಮೆಜಾನ್ ಸಂಸ್ಥೆ ಪ್ರತಿಕ್ರಿಯಿಸಿದೆ.

ಮಾರಾಟ, ಒಪ್ಪಂದದ ಮುಖ್ಯಾಂಶಗಳು

ಮಾರಾಟ, ಒಪ್ಪಂದದ ಮುಖ್ಯಾಂಶಗಳು

* ರೀಟೇಲ್ ಮತ್ತು ಹೋಲ್ ಸೇಲ್ ಸಂಸ್ಥೆಗಳನ್ನು RRVL ಒಡೆತನದ ರಿಲಯನ್ಸ್ ರೀಟೇಲ್ ಅಂಡ್ ಫ್ಯಾಷನ್ ಲೈಫ್ ಸ್ಟೈಲ್ ಲಿಮಿಟೆಡ್ ಗೆ (RRFLL) ವರ್ಗಾವಣೆ ಮಾಡಲಾಗುವುದು.
* ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯನ್ನು RRVLಗೆ ವರ್ಗಾವಣೆ; ಮತ್ತು
* RRFLLನಿಂದ ಹೂಡಿಕೆ ಪ್ರಸ್ತಾವ: * ವಿಲೀನದ ನಂತರ 6.09% ಈಕ್ವಿಟಿ ಸ್ವಾಧೀನಕ್ಕಾಗಿ 1200 ಕೋಟಿ ರುಪಾಯಿಯ FEL ಪ್ರಿಫರೆನ್ಷಿಯಲ್ ಈಕ್ವಿಟಿ ಷೇರುಗಳ ವಿತರಣೆ; ಮತ್ತು
* 400 ಕೋಟಿ ರುಪಾಯಿಯ ಈಕ್ವಿಟಿ ವಾರಂಟ್ ಗಳ ಪ್ರಿಫರೆನ್ಷಿಯಲ್ ವಿತರಣೆ, ಅದರ ಬದಲಿಗೆ ಮತ್ತು ವಿತರಣೆ ಬೆಲೆಯ ಬಾಕಿ 75% ಪಾವತಿ, ಇದರ ಫಲಿತಾಂಶವಾಗಿ FELನಲ್ಲಿ 7.05%ನಷ್ಟನ್ನು RRFLL ಪಡೆಯುತ್ತದೆ.

ಬಿಗ್ ಬಜಾರ್ ಸೇರಿ ಸೂಪರ್ ಮಾರ್ಕೆಟಿಗೆ ಅಮೆಜಾನ್ ಎಂಟ್ರಿಬಿಗ್ ಬಜಾರ್ ಸೇರಿ ಸೂಪರ್ ಮಾರ್ಕೆಟಿಗೆ ಅಮೆಜಾನ್ ಎಂಟ್ರಿ

ಫ್ಯೂಚರ್ ಸಮೂಹದ ರೀಟೇಲ್, ಹೋಲ್ ಸೇಲ್

ಫ್ಯೂಚರ್ ಸಮೂಹದ ರೀಟೇಲ್, ಹೋಲ್ ಸೇಲ್

ಫ್ಯೂಚರ್ ಸಮೂಹದ ರೀಟೇಲ್, ಹೋಲ್ ಸೇಲ್ ಹಾಗೂ ಪೂರೈಕೆ ಜಾಲದ ವ್ಯವಸ್ಥೆಯನ್ನು ಖರೀದಿಸುತ್ತಿರುವುದರಿಂದ ರಿಲಯನ್ಸ್ ರೀಟೇಲ್ ವ್ಯವಹಾರಕ್ಕೆ ಇನ್ನಷ್ಟು ಅನುಕೂಲ ಆಗಲಿದೆ, ವ್ಯವಹಾರ ಇನ್ನಷ್ಟು ಬಲಗೊಳ್ಳಲಿದೆ. ಈ ಮೂಲಕ ಲಕ್ಷಾಂತರ ಸಂಖ್ಯೆಯಲ್ಲಿನ ಸಣ್ಣ ವರ್ತಕರಿಗೆ ಅವರು ಇನ್ನಷ್ಟು ಸ್ಪರ್ಧಾತ್ಮಕವಾಗಲು ಬೆಂಬಲ ಒದಗಿಸಿದಂತಾಗುತ್ತದೆ. ಇಂಥ ಸವಾಲಿನ ಸಮಯದಲ್ಲಿ ಆದಾಯ ಹೆಚ್ಚಿಸಲು ಸಹಕರಿಸಿದಂತಾಗುತ್ತದೆ.

ಫ್ಯೂಚರ್ ಸಮೂಹದಿಂದ ಬಟ್ಟೆ, ಸಾಮಾನ್ಯ ಬಳಕೆ ವಸ್ತುಗಳು ಹಾಗೂ ಸ್ವಂತ ಎಫ್ ಎಂಸಿಜಿ ಬ್ರ್ಯಾಂಡ್ ಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಗ್ರಾಹಕರಿಗೆ ಆಯ್ಕೆಗೆ ಅಪಾರ ಅವಕಾಶಗಳು ಸಹ ಇವೆ. ಈ ಖರೀದಿಯು ಸೆಬಿ, ಸಿಸಿಐ, ಎನ್ ಸಿಎಲ್ ಟಿ, ಷೇರುದಾರರು, ಸಾಲಗಾರರು ಮತ್ತು ಇತರ ಅಗತ್ಯ ಅನುಮತಿಗಳ ನಿಬಂಧನೆಗಳಿಗೆ ಒಳಪಟ್ಟಿದೆ.

ಫ್ಯೂಚರ್ ಕೂಪನ್ಸ್ ಲಿಮೆಟೆಡ್ -ಅಮೆಜಾನ್

ಫ್ಯೂಚರ್ ಕೂಪನ್ಸ್ ಲಿಮೆಟೆಡ್ -ಅಮೆಜಾನ್

ಫ್ಯೂಚರ್ ಕೂಪನ್ಸ್ ಲಿಮೆಟೆಡ್ ನಲ್ಲಿ ಅಮೆಜಾನ್ ಶೇ49ರಷ್ಟು ಪಾಲು ಹೊಂದಲಿದೆ ಎಂದು ಫ್ಯೂಚರ್ ರೀಟೈಲ್ ಘೋಷಿಸಿದೆ. ಆದರೆ, ಎರಡು ಸಂಸ್ಥೆಗಳು ಈ ಒಪ್ಪಂದ ಮೌಲ್ಯವನ್ನು ಬಹಿರಂಗಪಡಿಸಿರಲಿಲ್ಲ. draft scheme of arrangement ಮಾದರಿ ಪ್ರಸ್ತಾವಿಕ ವ್ಯವಹಾರವನ್ನು ಪರಿಗಣಿಸುವಂತೆ ನ್ಯಾಯಾಲಯದಲ್ಲಿ ಅಮೆಜಾನ್ ವಾದಿಸಿದೆ.

ಫ್ಯೂಚರ್ ರೀಟೈಲ್ ಮಾರುಕಟ್ಟೆ ಮೌಲ್ಯ ಸುಮಾರು 2.91 ಬಿಲಿಯನ್ ಡಾಲರ್ ನಷ್ಟಿದೆ. 900ಕ್ಕೂ ಅಧಿಕ ಮಳಿಗೆ, ಬಿಗ್ ಬಜಾರ್ ಸೇರಿ ಅನೇಕ ಸೂಪರ್ ಮಾರ್ಕೆಟ್ ಗಳನ್ನು ನಿಯಂತ್ರಿಸುತ್ತಿದೆ. ಈ ಒಪ್ಪಂದದ ನಂತರ ಫ್ಯೂಚರ್ ಕೂಪನ್ಸ್ ಮೇಲೆ ಶೇ49ರಷ್ಟು ಪಾಲು ಅಮೆಜಾನ್ ಹೊಂದಿದ್ದರೆ, ಫ್ಯೂಚರ್ ರೀಟೈಲ್ ಸ್ಥಾಪಕ ಕಿಶೋರ್ ಬಿಯಾನಿ ಹಾಗೂ ಕುಟುಂಬದ ಬಳಿ ಶೇ 47.02% ಪಾಲಿದೆ. ಅಮೆಜಾನ್ ದೂರು ಸದ್ಯ ದೆಹಲಿ ಹೈಕೋರ್ಟಿನಲ್ಲಿದೆ. ಈ ಬಗ್ಗೆ ವಿವರ ಪಡೆದ ಬಳಿಕ ಸೆಬಿ ತನ್ನ ಅನುಮತಿ ನೀಡಿದೆ.

ರಿಲಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ

ರಿಲಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ

ರಿಲಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಈ ವ್ಯವಹಾರದ ಮೂಲಕ ಹೆಸರಾಂತ ಮಾದರಿಯ ಹಾಗೂ ಫ್ಯೂಚರ್ ಸಮೂಹದ ಬ್ರ್ಯಾಂಡ್ ಗಳಿಗೆ ಸೂರು ಒದಗಿಸುತ್ತಿದ್ದೇವೆ ಎಂದು ತಿಳಿಸುವುದಕ್ಕೆ ಸಂತೋಷ ಆಗುತ್ತದೆ. ಅದರ ವ್ಯವಹಾರದ ವಾತಾವರಣ ಹಾಗೆ ಉಳಿಸುತ್ತೇವೆ. ಭಾರತದಲ್ಲಿ ಆಧುನಿಕ ರಿಟೇಲ್ ವ್ಯವಹಾರ ಬದಲಾವಣೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದೇ ಎಂದು ಹೇಳಿದ್ದಾರೆ.

ಸಣ್ಣ ವರ್ತಕರು, ಅಂಗಡಿಗಳವರು ಮತ್ತು ದೊಡ್ಡ ಮಟ್ಟದ ಗ್ರಾಹಕರ ಬ್ರ್ಯಾಂಡ್ ಗಳ ಜತೆಗಿನ ನಮ್ಮ ವಿಶಿಷ್ಟ ರೀತಿಯ ಸಹಭಾಗಿತ್ವ ಸಕ್ರಿಯವಾಗಿ ಮುಂದುವರಿಯುತ್ತದೆ. ದೇಶದಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಮೌಲ್ಯಯುತವಾದ ಸೇವೆ ಮುಂದುವರಿಸುವುದಕ್ಕೆ ಬದ್ಧರಾಗಿದ್ದೇವೆ ಎಂದಿದ್ದಾರೆ.

English summary
Reliance has finally got market regulator SEBI’s approval to take over the Future Group’s scheme of arrangement and sale of assets in a Rs 24,713-crore billion deal, acquiring rights for retail major Big Bazaar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X