ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್‌ಮಿ 9i ಅಗ್ಗದ ದರದಲ್ಲಿ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಶಿಯೋಮಿಯ ರೆಡ್‌ಮಿ 9 ಸರಣಿಯ ಹೊಸ ಪ್ರವೇಶವಾಗಿ ರೆಡ್‌ಮಿ 9 ಐ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಆಗಸ್ಟ್ 4 ಮತ್ತು ಸೆಪ್ಟೆಂಬರ್ 2 ರ ನಡುವೆ ದೇಶದಲ್ಲಿ ಬಿಡುಗಡೆಯಾದ ರೆಡ್‌ಮಿ 9, ರೆಡ್‌ಮಿ 9 ಎ, ಮತ್ತು ರೆಡ್‌ಮಿ 9 ಪ್ರೈಮ್‌ ಪಟ್ಟಿಗೆ ಇದೀಗ 9 ಐ ಫೋನ್ ಸೇರಿದೆ.

ರೆಡ್‌ಮಿ 9 ಐ ಆರಂಭಿಕ ಹಂತದ ಸ್ಮಾರ್ಟ್‌ಫೋನ್ ಆಗಿದ್ದು, ಗಮನಾರ್ಹ ಡಿಸ್‌ಪ್ಲೇ, ದೊಡ್ಡ ಬ್ಯಾಟರಿ, ಸಿಂಗಲ್ ರಿಯರ್ ಕ್ಯಾಮೆರಾ ಮತ್ತು ಆಕ್ಟಾ-ಕೋರ್ ಮೀಡಿಯಾ ಟೆಕ್ ಪ್ರೊಸೆಸರ್. ರೆಡ್ಮಿ 9i ಎರಡು RAM ಮತ್ತು ಸ್ಟೋರೇಜ್ ಸಂರಚನೆಗಳನ್ನು ಹೊಂದಿದ್ದು, ಮೂರು ವಿಭಿನ್ನ ಬಣ್ಣ ಆಯ್ಕೆಗಳಲ್ಲಿ ಬರುತ್ತದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ರೆಡ್‌ಮಿ 9 ಐ 4 ಜಿಬಿ RAM + 64 ಜಿಬಿ ಸ್ಟೋರೇಜ್ ರೂಪಾಂತರಕ್ಕೆ 8,299 ರೂಪಾಯಿ ಬೆಲೆ ಇದೆ. ಈ ಮೊಬೈಲ್ ಮಿಡ್ನೈಟ್ ಬ್ಲ್ಯಾಕ್, ಸೀ ಬ್ಲೂ ಮತ್ತು ನೇಚರ್ ಗ್ರೀನ್ ಕಲರ್ ಆಯ್ಕೆಗಳಲ್ಲಿ ಬರುತ್ತದೆ. ಇನ್ನು 4 ಜಿಬಿ RAM +128 ಜಿಬಿ ಸ್ಟೋರೇಜ್ ರೂಪಾಂತರಕ್ಕೆ ರೂ. 9,299 ಬೆಲೆ ಇದೆ.

ಕಡಿಮೆ ದರದ ಫೋನ್: ಭಾರತದಲ್ಲಿ ರೆಡ್‌ಮಿ 9A ಮೊಬೈಲ್ ಬಿಡುಗಡೆಕಡಿಮೆ ದರದ ಫೋನ್: ಭಾರತದಲ್ಲಿ ರೆಡ್‌ಮಿ 9A ಮೊಬೈಲ್ ಬಿಡುಗಡೆ

ಮೊಬೈಲ್ ಯಾವಾಗ ಮಾರುಕಟ್ಟೆಗೆ ಬರಲಿದೆ?

ಮೊಬೈಲ್ ಯಾವಾಗ ಮಾರುಕಟ್ಟೆಗೆ ಬರಲಿದೆ?

ಸೆಪ್ಟೆಂಬರ್ 18 ರಿಂದ ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಫ್ಲಿಪ್‌ಕಾರ್ಟ್, ಎಂಐ.ಕಾಮ್ ಮತ್ತು ಎಂಐ ಹೋಮ್ ಮಳಿಗೆಗಳ ಮೂಲಕ ರೆಡ್‌ಮಿ 9 ಐ ಮೊಬೈಲ್ ಮಾರಾಟವಾಗಲಿದೆ.

ರೆಡ್‌ಮಿ 9 ಐ ಮೊಬೈಲ್ ವೈಶಿಷ್ಟ್ಯತೆ ಏನು?

ರೆಡ್‌ಮಿ 9 ಐ ಮೊಬೈಲ್ ವೈಶಿಷ್ಟ್ಯತೆ ಏನು?

ರೆಡ್‌ಮಿ 9i ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 10 ಆಧಾರಿತ ಡ್ಯುಯಲ್ ಸಿಮ್ (ನ್ಯಾನೊ) ಎಂಐಯುಐ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್‌ನಲ್ಲಿ 6.53-ಇಂಚಿನ ಎಚ್‌ಡಿ + (720x1,600 ಪಿಕ್ಸೆಲ್‌ಗಳು) ಡಿಸ್ಪ್ಲೇ ಹಾಗೆಯೇ 20:9 ರಚನೆಯ ಡಿಸ್‌ಪ್ಲೇ ಅನುಪಾತವನ್ನು ಹೊಂದಿದೆ.

Oppo F17 ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆ: ಬೆಲೆ, ವೈಶಿಷ್ಟ್ಯವೇನು?Oppo F17 ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆ: ಬೆಲೆ, ವೈಶಿಷ್ಟ್ಯವೇನು?

ಇನ್ನು ಈ ಮೊಬೈಲ್ ಟೆಕ್ ಹಿಲಿಯೊ G25 SoC ಪ್ರೊಸೆಸರ್‌ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು ಆಂಡ್ರಾಯ್ಡ್ 10 ಓಎಸ್ ಬೆಂಬಲವನ್ನು ಪಡೆದುಕೊಂಡಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ರೆಡ್‌ಮಿ 9i ಸ್ಮಾರ್ಟ್‌ಫೋನ್ ಸಿಂಗಲ್ ರಿಯಲ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಹಿಂಬದಿಯ ರಿಯಲ್ ಕ್ಯಾಮೆರಾವು 13 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ 5,000mAh ಬ್ಯಾಟರಿಯನ್ನು ಮೊಬೈಲ್‌ ಹೊಂದಿದೆ.

English summary
Redmi 9i has been launched in India as a new entry into Xiaomi's Redmi 9 series. The phone joins the Redmi 9, Redmi 9A, and the Redmi 9 Prime that were released in the country
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X