ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಗ್ಯಾಸ್ ಆಯ್ತು, ಈಗ ಎಣ್ಣೆ ಬೆಲೆಗಳಲ್ಲೂ ಇಳಿಕೆ

|
Google Oneindia Kannada News

ನವದೆಹಲಿ, ಮೇ 23: ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿದ್ದ ದೇಶದ ಜನತೆ ಇತ್ತೀಚೆಗೆ ತುಸು ನಿಟ್ಟುಸಿರು ಬಿಡುವಂತಹ ಬೆಳವಣಿಗೆಗಳು ಆಗುತ್ತಿವೆ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಸರಕಾರಗಳು ಕಡಿತ ಮಾಡಿದವು. ಇದರ ಪರಿಣಾಮ ಪೆಟ್ರೋಲ್ ದರ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ಅಡುಗೆ ಅನಿಲ ಬೆಲೆ ಇಳಿಸಲಾಗಿದೆ. ರಸಗೊಬ್ಬರಕ್ಕೆ ನೀಡಲಾಗುವ ಸಬ್ಸಿಡಿ ಮೊತ್ತ ಹೆಚ್ಚಿಸಲಾಗಿದೆ. ಈಗ ಈ ಖುಷಿ ಜೊತೆಗೆ ಅಡುಗೆ ಎಣ್ಣೆಗಳ (Edible Oil) ಬೆಲೆಯೂ ಇಳಿಕೆಯಾಗುತ್ತಿದೆ.

ತಾಳೆ ಎಣ್ಣೆ, ಸಾಸಿವೆ ಎಣ್ಣೆ, ಸೋಯಾ ಎಣ್ಣೆ ಇತ್ಯಾದಿ ಅಡುಗೆ ಎಣ್ಣೆಗಳ ಬೆಲೆ ಗಣನೀಯವಾಗಿ ಇಳಿಕೆ ಆಗುತ್ತಿದೆ. ಇಂಡೋನೇಷ್ಯಾ ಸರಕಾರ ರಫ್ತು ನಿಷೇಧವನ್ನು ಹಿಂಪಡೆದದ್ದು ಇದಕ್ಕೆ ಪ್ರಮುಖ ಕಾರಣ.

ಇಳಿಯುತಿಹುದು ಬೆಳ್ಳಿಯ ಬೆಲೆ: ಮೇ 21ರ ಚಿನ್ನ-ಬೆಳ್ಳಿ ದರ ತಿಳಿಯುವುದೇ ಚನ್ನ!ಇಳಿಯುತಿಹುದು ಬೆಳ್ಳಿಯ ಬೆಲೆ: ಮೇ 21ರ ಚಿನ್ನ-ಬೆಳ್ಳಿ ದರ ತಿಳಿಯುವುದೇ ಚನ್ನ!

ಭಾರತ ಆಮದು ಮಾಡಿಕೊಳ್ಳುವ ಎಣ್ಣೆಗಳಲ್ಲಿ ಪಾಮ್ ಆಯಿಲ್ ಅಥವಾ ತಾಳೆ ಎಣ್ಣೆ (Palm Oil) ಪ್ರಮುಖವಾದುದು. ಹೆಚ್ಚೂ ಕಡಿಮೆ ಅರ್ಧದಷ್ಟು ತಾಳೆ ಎಣ್ಣೆ ಆಮದು ಇಂಡೋನೇಷ್ಯಾದಿಂದಲೇ ಬರುತ್ತದೆ. ಹೀಗಾಗಿ, ತಾಳೆ ಎಣ್ಣೆ ಬೆಲೆ ಇಳಿಕೆಯಾಗುತ್ತಿದೆ. ಇದರ ಜೊತೆಗೆ ಇತರ ಅಡುಗೆ ಎಣ್ಣೆಗಳ ಬೆಲೆಯೂ ವಿವಿಧ ಕಾರಣಗಳಿಂದ ಇಳಿಯುತ್ತಿದೆ.

 ಸಾಸಿವೆ ಎಣ್ಣೆ ಬೆಲೆ ಇಳಿಕೆ

ಸಾಸಿವೆ ಎಣ್ಣೆ ಬೆಲೆ ಇಳಿಕೆ

ಇತರ ಅಡುಗೆ ಎಣ್ಣೆಗಳ ಬೆಲೆಗಳೂ ಇದೇ ವೇಳೆ ಇಳಿಕೆಯಾಗುತ್ತಿವೆ. ಈ ವಾರ ಸಾಸಿವೆ ಕಾಳಿನ ಬೆಲೆ ಕ್ವಿಂಟಾಲ್‌ಗೆ ನೂರು ರೂಪಾಯಿಯಷ್ಟು ಇಳಿಕೆಯಾಗಿದೆ. ಹೀಗಾಗಿ, ಕಚ್ಛಿ ಘಾನಿ, ಪಕ್ಕಿ ಘಾನಿ ಸಾಸಿವೆ ಎಣ್ಣೆಗಳ ಬೆಲೆಯಲ್ಲಿ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಇಳಿಕೆಯಾಗಲಿದೆ. ಸಾಸಿವೆ ಕಾಳುಗಳು ಈಗ ಒಂದು ಕ್ವಿಂಟಾಲ್‌ಗೆ 7515 ರೂಗೆ ಇಳಿದಿದೆ. ಸಾಸಿವೆ ಎಣ್ಣೆ ಒಂದು ಕ್ವಿಂಟಾಲ್‌ಗೆ 250 ರೂ ಬೆಲೆ ಇಳಿಕೆಯಾಗಿದ್ದು, ಈಗ 15,050 ರೂಗೆ ಬಂದು ನಿಂತಿದೆ.

 ಸೋಯಾ ಎಣ್ಣೆ ಬೆಲೆ ಇಳಿಕೆ

ಸೋಯಾ ಎಣ್ಣೆ ಬೆಲೆ ಇಳಿಕೆ

ಸೋಯಾಬೀನ್ ಕಾಳುಗಳ ಬೆಲೆ ಇಳಿದ ಪರಿಣಾಮವಾಗಿ ಸೋಯಾ ಎಣ್ಣೆಯ ಬೆಲೆಯಲ್ಲೂ ಇಳಿಕೆಯಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಯಾ ಎಣ್ಣೆ ಮತ್ತು ಕಾಳುಗಳಿಗೆ ಒಳ್ಳೆಯ ಬೇಡಿಕೆ ಇದ್ದರೂ ಭಾರತದಲ್ಲಿ ಇದರ ಬೆಲೆ ಇಳಿಯುತ್ತಿರುವುದು ಬಹುತೇಕ ಕುಟುಂಬಗಳಿಗೆ ತುಸು ನಿರಾಳತೆ ತಂದಿದೆ. ಅತಿಹೆಚ್ಚು ಬಳಸಲಾಗುವ ಎಣ್ಣೆಗಳಲ್ಲಿ ಒಂದಾದ ಕಡಲೆಕಾಯಿ ಎಣ್ಣೆಯ ಬೆಲೆ ಒಂದು ಟಿನ್‌ಗೆ 25 ರೂನಷ್ಟು ಕಡಿಮೆ ಆಗಿದೆ.

ಅಬಕಾರಿ ಸುಂಕ ಕಡಿತ; ಪೆಟ್ರೋಲ್ ಬೆಲೆ 9.5ರೂ., ಡೀಸೆಲ್ ಬೆಲೆ 7 ರೂ. ಇಳಿಕೆಅಬಕಾರಿ ಸುಂಕ ಕಡಿತ; ಪೆಟ್ರೋಲ್ ಬೆಲೆ 9.5ರೂ., ಡೀಸೆಲ್ ಬೆಲೆ 7 ರೂ. ಇಳಿಕೆ

 ತಾಳೆ ಎಣ್ಣೆಗೆ ಬೇಡಿಕೆ ಇದೆ

ತಾಳೆ ಎಣ್ಣೆಗೆ ಬೇಡಿಕೆ ಇದೆ

ತಾಳೆ ಎಣ್ಣೆ ಕೇವಲ ಅಡುಗೆಗೆ ಮಾತ್ರವಲ್ಲ ಬೇರೆ ಬೇರೆ ಉತ್ಪನ್ನಗಳಿಗೂ ಬಳಕೆ ಆಗುತ್ತದೆ. ಕಾಸ್ಮೆಟಿಕ್ಸ್, ಡಿಟರ್ಜೆಂಟ್ ತಯಾರಿಕೆಯಲ್ಲಿ ಪಾಮ್ ಆಯಿಲ್ ಬಳಸಲಾಗುತ್ತದೆ. ಜೈವಿಕ ಇಂಧನಕ್ಕೂ ಅದು ಅಗತ್ಯ ಇದೆ. ಸಾಬೂನು, ಶಾಂಪು, ಮಾರ್ಗರೈನ್ ಇತ್ಯಾದಿ ಉತ್ಪನ್ನಗಳಿಗೆ ತಾಳೆ ಎಣ್ಣೆ ಬಳಕೆ ಆಗುತ್ತದೆ. ನೂಡಲ್ಸ್, ಬಿಸ್ಕತ್, ಚಾಕೊಲೇಟ್ ಇತ್ಯಾದಿ ಆಹಾರ ಉತ್ಪನ್ನಗಳಿಗೂ ಈ ಎಣ್ಣೆ ಬೇಕು. ಹೀಗಾಗಿ, ಇಂಡೋನೇಷ್ಯಾ ರಫ್ತು ನಿಷೇಧವನ್ನು ಹಿಂಪಡೆದದ್ದು ಭಾರತಕ್ಕೆ ಒಳ್ಳೆಯ ಅನುಕೂಲವಾಗಿದೆ. ತಾಳೆ ಎಣ್ಣೆ ಈಗ ಅವಶ್ಯಕ ಪ್ರಮಾಣದಷ್ಟು ಲಭ್ಯ ಇರಲಿದೆ.

 ಭಾರತದಿಂದ ಎಣ್ಣೆ ಆಮದು ಹೆಚ್ಚು

ಭಾರತದಿಂದ ಎಣ್ಣೆ ಆಮದು ಹೆಚ್ಚು

ಇಡೀ ವಿಶ್ವದಲ್ಲಿ ಅತಿ ಹೆಚ್ಚು ತಾಳೆ ಎಣ್ಣೆ ಆಮದು ಮಾಡಿಕೊಳ್ಳುವುದು ಭಾರತವೇ. ಪ್ರತೀ ವರ್ಷ ಭಾರತ 1.35 ಕೋಟಿ ಟನ್‌ಗಳಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಶೇ. 63ರಷ್ಟು ಭಾಗ ತಾಳೆ ಎಣ್ಣೆಯೇ ಇದೆ. ತಾಳೆ ಎಣ್ಣೆ ಆಮದಿನಲ್ಲಿ ಇಂಡೋನೇಷ್ಯಾ ಮತ್ತು ಮಲೇಷ್ಯಾದ ಮೇಲೆ ಭಾರತ ಅವಲಂಬಿತವಾಗಿದೆ. ಇಂಡೋನೇಷ್ಯಾದಿಂದ ಒಂದು ವರ್ಷದಲ್ಲಿ ಭಾರತ 40 ಲಕ್ಷ ಟನ್‌ಗಳಷ್ಟು ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ.

(ಒನ್ಇಂಡಿಯಾ ಸುದ್ದಿ)

English summary
Prices of various edible oils are reducing from past one week due to various reasons including Indonesia restarting the export of Palm oil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X