ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಲಯನ್ಸ್ ಡಿಜಿಟಲ್ ನಲ್ಲಿ ರಿಯಲ್ ಮಿ ಉತ್ಪನ್ನಗಳು ಇನ್ಮುಂದೆ ಲಭ್ಯ

|
Google Oneindia Kannada News

ನವದೆಹಲಿ, ನವೆಂಬರ್ 02: ಯುವಜನತೆಗೆ ಉನ್ನತ ಗುಣಮಟ್ಟದ ಉತ್ಪನ್ನಗಳನ್ನು ನೀಡುವಲ್ಲಿ ವೈಶಿಷ್ಟ್ಯ ರೂಪಿಸಿಕೊಂಡಿರುವ ಸ್ಮಾರ್ಟ್‌ಫೋನ್ ಬ್ರಾಂಡ್ ರಿಯಲ್‌ಮಿ, ದೇಶದ ನಂ. 1 ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಮಾರಾಟ ಸಂಸ್ಥೆ ರಿಲಯನ್ಸ್ ಡಿಜಿಟಲ್ ಜೊತೆ ತನ್ನ ಉತ್ಪನ್ನಗಳ ಆಫ್‌ಲೈನ್ ಮಾರಾಟಕ್ಕಾಗಿ ವಿಶೇಷ ಒಪ್ಪಂದ ಮಾಡಿಕೊಂಡಿದೆ.

ಸಾಮರ್ಥ್ಯ ಹಾಗೂ ಶೈಲಿಯಿಂದ ಕೂಡಿದ ಉತ್ಪನ್ನಗಳನ್ನು ಗ್ರಾಹಕರ ಸಮೀಪಕ್ಕೆ ಕೊಂಡೊಯ್ಯುವ 'ಭಾರತೀಯರೆಲ್ಲರಿಗೂ ರಿಯಲ್‌ಮಿ' ಧ್ಯೇಯದ ಕುರಿತು ಸಂಸ್ಥೆಗಿರುವ ಬದ್ಧತೆಯ ಅಂಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯಇನ್ಮುಂದೆ ರಿಲಯನ್ಸ್ ಡಿಜಿಟಲ್ ಮಳಿಗೆಯಲ್ಲೂ ಒನ್ ಪ್ಲಸ್ ಲಭ್ಯ

ಪಾಲುದಾರಿಕೆಯ ಮೊದಲ ಹಂತದಲ್ಲಿ, ಭಾರತದಾದ್ಯಂತ 130ಕ್ಕೂ ಹೆಚ್ಚು ನಗರಗಳಲ್ಲಿರುವ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿರಲಿವೆ.

ಈ ಸಹಭಾಗಿತ್ವದ ಕುರಿತು ಹರ್ಷ ವ್ಯಕ್ತಪಡಿಸುತ್ತ, ರಿಯಲ್‌ಮಿ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಧವ್ ಶೇಠ್, "ಯುವ ಬ್ರಾಂಡ್ ಆಗಿರುವ ರಿಯಲ್‌ಮಿ, ಸಾಮರ್ಥ್ಯ ಹಾಗೂ ಶೈಲಿಯಿಂದ ಕೂಡಿದ ಉತ್ಪನ್ನಗಳೊಡನೆ ತನ್ನ ಗ್ರಾಹಕರಿಗೆ ವಿಭಿನ್ನವಾದ ಅನುಭವವನ್ನು ತಲುಪಿಸಲು ಬದ್ಧವಾಗಿದೆ.

ಭಾರತದಾದ್ಯಂತ 130ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯ

ಭಾರತದಾದ್ಯಂತ 130ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯ

ಭಾರತದಾದ್ಯಂತ 130ಕ್ಕೂ ಹೆಚ್ಚು ನಗರಗಳಲ್ಲಿರುವ ರಿಲಯನ್ಸ್ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿರಲಿವೆ.

"ಈ ಪಾಲುದಾರಿಕೆಯ ಮೂಲಕ, ಆನ್‌ಲೈನ್ ಮಾಧ್ಯಮದ ಸೀಮಿತ ಪರಿಚಯವಿರುವ ಹಾಗೂ ಖರೀದಿ ನಿರ್ಧಾರಕ್ಕೆ ಮುನ್ನ ವೈಶಿಷ್ಟ್ಯ-ಅನುಕೂಲಗಳನ್ನು ಅನುಭವಿಸಲು, ಹೋಲಿಸಲು ಮತ್ತು ಅರ್ಥಮಾಡಿಕೊಳ್ಳಲು ಬಯಸುವ ಗ್ರಾಹಕರನ್ನು ನಾವು ತಲುಪಬಯಸುತ್ತೇವೆ," ಎಂದು ರಿಯಲ್‌ಮಿ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಧವ್ ಶೇಠ್ ಹೇಳಿದರು.

ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಪಾಲುದಾರಿಕೆ

ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಪಾಲುದಾರಿಕೆ

ರಿಲಯನ್ಸ್ ಡಿಜಿಟಲ್ ಮತ್ತು ಮೈಜಿಯೋ ಪಾಲುದಾರಿಕೆಯೊಂದಿಗೆ, ಅದೇ ಅನುಭವದೊಡನೆ ಗ್ರಾಹಕರನ್ನು ರಿಯಲ್‌ಮಿ ಕುಟುಂಬಕ್ಕೆ ಸ್ವಾಗತಿಸುವ ಆಫ್‌ಲೈನ್ ಟಚ್ ಪಾಯಿಂಟ್‌ಗಳನ್ನು ಮೊದಲ ಬಾರಿಗೆ ತೆರೆಯಲು ನಾವು ಹೆಮ್ಮೆಪಡುತ್ತೇವೆ. ಮಾರುಕಟ್ಟೆ ಚೆನ್ನಾಗಿ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ, ನಮ್ಮ 'ಭಾರತೀಯರೆಲ್ಲರಿಗೂ ರಿಯಲ್‌ಮಿ' ಧ್ಯೇಯದ ರುಜುವಾತಿನಂತೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ನಮ್ಮ ಮಾರಾಟದ ಚಾನೆಲ್‌ಗಳನ್ನು ವಿಸ್ತರಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.

ರಿಲಯನ್ಸ್ ಡಿಜಿಟಲ್ ಸಿಇಓ ಬ್ರಿಯಾನ್ ಬೇಡ್

ರಿಲಯನ್ಸ್ ಡಿಜಿಟಲ್ ಸಿಇಓ ಬ್ರಿಯಾನ್ ಬೇಡ್

ಈ ಬೆಳವಣಿಗೆಯ ಕುರಿತು ಮಾತನಾಡಿದ ರಿಲಯನ್ಸ್ ಡಿಜಿಟಲ್ ಸಿಇಓ ಬ್ರಿಯಾನ್ ಬೇಡ್, "ವಿಶ್ವಸ್ತರದ ರೀಟೇಲ್ ಅನುಭವದ ಬೆಂಬಲದೊಡನೆ ತಂತ್ರಜ್ಞಾನವನ್ನು ವೈಯಕ್ತೀಕರಿಸುವುದರಲ್ಲಿ ರಿಲಯನ್ಸ್ ಡಿಜಿಟಲ್ ನಂಬಿಕೆಯಿಡುತ್ತದೆ. ನಮ್ಮ ಉತ್ಪನ್ನಗಳ ಸಾಲಿಗೆ ರಿಯಲ್‌ಮಿ ಸೇರ್ಪಡೆಯೊಂದಿಗೆ, ಸಾಂಪ್ರದಾಯಿಕ ಆನ್‌ಲೈನ್ ಬ್ರಾಂಡ್‌ಗಳ ಅನುಭವವನ್ನು ಅತ್ಯುತ್ತಮ ಗುಣಮಟ್ಟದ ಗ್ರಾಹಕಸೇವೆಯೊಡನೆ ನಮ್ಮ ಮಳಿಗೆಗಳಲ್ಲಿ ಪಡೆದುಕೊಳ್ಳುವ ಅವಕಾಶವನ್ನು ನಾವು ನಮ್ಮ ಗ್ರಾಹಕರಿಗೆ ನೀಡುತ್ತಿದ್ದೇವೆ" ಎಂದರು.

ರಿಯಲ್‌ಮಿ ಉತ್ಪನ್ನಗಳಿಗೆ ಭಾರೀ ಪ್ರತಿಕ್ರಿಯೆ

ರಿಯಲ್‌ಮಿ ಉತ್ಪನ್ನಗಳಿಗೆ ಭಾರೀ ಪ್ರತಿಕ್ರಿಯೆ

ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕನ್ಸ್ಯೂಮರ್ ಇಲೆಕ್ಟ್ರಾನಿಕ್ಸ್ ಮಾರಾಟ ಸಂಸ್ಥೆ ರಿಲಯನ್ಸ್ ಡಿಜಿಟಲ್ ಜೊತೆ ತನ್ನ ಉತ್ಪನ್ನಗಳ ಆಫ್‌ಲೈನ್ ಮಾರಾಟಕ್ಕಾಗಿ ವಿಶೇಷ ಒಪ್ಪಂದ ಮಾಡಿಕೊಂಡಿದೆ.

ವಿಶ್ವದಲ್ಲೇ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಆನ್‌ಲೈನ್ ಮಾರುಕಟ್ಟೆಯಾದ ಭಾರತದಲ್ಲಿ, ರಿಯಲ್‌ಮಿ ಆನ್‌ಲೈನ್‌ಗೆ ಮೊದಲ ಆದ್ಯತೆ ನೀಡಿತ್ತು. ರಿಯಲ್‌ಮಿ ಉತ್ಪನ್ನಗಳಿಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದರಿಂದ, ಹೆಚ್ಚಿನ ಗ್ರಾಹಕರನ್ನು ತಲುಪುವ ಉದ್ದೇಶದೊಡನೆ ಅದು ಇದೀಗ ತನ್ನ ಮಾರಾಟದ ಚಾನೆಲ್‌ಗಳನ್ನು ವಿಸ್ತರಿಸುತ್ತಿದೆ.

English summary
“Realme now available at Reliance Digital in the offline channel.” Under this partnership, Realme smartphones will be available at more than 130 cities across Reliance Digital & My Jio stores pan India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X