ಬ್ಯಾಂಕ್ ಗ್ರಾಹಕರಿಗೆ ಆತಂಕ ತರುವ ವಾಟ್ಸಪ್ ಸಂದೇಶ
ಬೆಂಗಳೂರು, ಆಗಸ್ಟ್ 07: ಬ್ಯಾಂಕ್ ಗ್ರಾಹಕರಲ್ಲಿ ಆತಂಕ ಹುಟ್ಟಿಸುವಂಥ ಮೆಸೇಜ್ ಒಂದು ವಾಟ್ಸಾಪ್ ನಲ್ಲಿ ಮತ್ತೊಮ್ಮೆ ಹರಿದಾಡುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಅಧೀನಕ್ಕೆ ಒಳಪಡುವ 9 ಬ್ಯಾಂಕುಗಳು ಮುಚ್ಚುತ್ತಿವೆ, ಬೇಗನೇ ಕ್ಯಾಶ್ ಪಡೆದುಕೊಳ್ಳಿ ಎಂಬ ಸಂದೇಶ ಕಳೆದ ತಿಂಗಳಿನಿಂದ ಎಲ್ಲೆಡೆ ಹಬ್ಬುತ್ತಿದೆ.
ನಾಮಕ್ಕೆ ಹಣೆ, ಟೋಪಿಗೆ ತಲೆ ಸದಾ ಸಿದ್ಧವಾಗಿರಲಿ!
ವಾಟ್ಸಪ್ ನಲ್ಲಿ ಸಂದೇಶ ಬಂದ ಕೂಡಲೇ ಈ ಬಗ್ಗೆ ಮಾಹಿತಿ ಕಲೆ ಹಾಕಿ 'ದಿ ಕ್ವಿಂಟ್' ವರದಿ ಮಾಡಿತ್ತು.ಸಾಮಾಜಿಕ ಜಾಲ ತಾಣಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ನಂತರ ಈ ಬಗ್ಗೆ ಆರ್ ಬಿಐ ಕೂಡಾ ಸ್ಪಷ್ಟನೆ ನೀಡಿ, ಈ ರೀತಿ ಯಾವುದೇ ಪ್ರಸ್ತಾವನೆ ಇಲ್ಲ, ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಬಿಟ್ಟರೆ, ಬ್ಯಾಂಕುಗಳ ಮುಚ್ಚುವ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಲಾಗಿತ್ತು.
ಆತಂಕ ತಂದ ಸಂದೇಶ: ಪ್ರಮುಖ 9 ಬ್ಯಾಂಕ್ ಗಳನ್ನು ಆರ್ ಬಿ ಐ ಮುಚ್ಚುತ್ತಿದೆ ಅನ್ನೋ ಹುಸಿ ಸಂದೇಶವೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈಗಲೂ ಈ ಸುದ್ದಿ ಹಬ್ಬುತ್ತಿದೆ. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ಜುಲೈ ತಿಂಗಳಿನಲ್ಲೇ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಅನೇಕರಿಂದ ಸ್ಪಷ್ಟನೆ ಸಿಕ್ಕಿತ್ತು.
@RBI pic of WhatsApp msg going around - kindly address urgently as it's creating panic amongst people with accounts in these banks. pic.twitter.com/zgFfkOByej
— habniz (@habniz) July 18, 2017
ಇದೊಂದು ಸುಳ್ಳು ಸಂದೇಶವಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಾವುದೇ ಬ್ಯಾಂಕ್ ಗಳನ್ನು ಮುಚ್ಚುತ್ತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.