ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಧಿ ವರ್ಗಾವಣೆಯಿಂದ ಆರ್ ಬಿಐ ಸ್ವಾಯತ್ತತೆಗೆ ಧಕ್ಕೆ : ಕಾಂಗ್ರೆಸ್ ಆರ್ಥಿಕ ತಜ್ಞ ರೇಣು

|
Google Oneindia Kannada News

ಬೆಂಗಳೂರು ಆಗಸ್ಟ್‌ 29: "ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ ಬಿ ಐ) ಮೀಸಲು ನಿಧಿಯಿಂದ ಹಣ ವರ್ಗಾವಣೆ ದೇಶದ ಆರ್ಥಿಕ ಹಿಂಜರಿತಕ್ಕೆ ಪ್ರಮುಖ ಕಾರಣವಾಗಲಿದೆ. ಸುಮಾರು1.76 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡಿರುವ ಕೇಂದ್ರ ಸರ್ಕಾರದ ಈ ಕ್ರಮ ಆರ್ಥಿಕ ಕುಸಿತ ಕಾಣುತ್ತಿರುವ ದೇಶದ ಆರ್ಥಿಕತೆಯನ್ನು ಮತ್ತಷ್ಟು ಹದಗಡೆಸಲಿದೆ" ಎಂದು ಕೆಪಿಸಿಸಿ ವಕ್ತಾರ ಹಾಗೂ ಅಂತಾರಾಷ್ಟ್ರೀಯ ಆರ್ಥಿಕತೆಯ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿರುವ ಕೆಂಗಲ್‌ ಶ್ರೀಪಾದ ರೇಣು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರಕಾರದ ಈ ಕ್ರಮ ಆರ್‌ ಬಿ ಐ ನ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಹುನ್ನಾರದಂತೆ ಇದೆ ಎಂದು ಆರೋಪಿಸಿದ್ದಾರೆ. ಕಷ್ಟದ ಕಾಲದಲ್ಲಿ ಉಪಯೋಗಕ್ಕೆ ಬರಲಿ ಎನ್ನುವ ಉದ್ದೇಶದಿಂದ ದೇಶದ ಎಲ್ಲಾ ನಾಗರೀಕರು ಮೀಸಲು ನಿಧಿಯನ್ನು ತಮ್ಮಲ್ಲಿ ಉಳಿಸಿಕೊಂಡಿರುತ್ತಾರೆ. ಇದೇ ರೀತಿಯಲ್ಲಿ ಭಾರತೀಯ ರಿಸರ್ವ ಬ್ಯಾಂಕ್‌ ತನ್ನ ಸ್ಥಾಪನೆಯ ವರ್ಷದಿಂದಲೂ ಮೀಸಲು ನಿಧಿಯನ್ನು ಕಾಪಾಡಿಕೊಳ್ಳುತ್ತಾ ಬಂದಿದೆ. ದೇಶದಲ್ಲಿ ಆಗಬಹುದಾದ ಆರ್ಥಿಕ ಕುಸಿತ ಹಾಗೂ ನೈಸರ್ಗಿಕ ವಿಕೋಪಗಳ ಸಂಧರ್ಭಗಳಲ್ಲಿ ನಮ್ಮ ದೇಶದ ಆರ್ಥಿಕತೆಯನ್ನು ಸಧೃಢವಾಗಿ ಇಡುವುದು ಇದರ ಪ್ರಮುಖ ಉದ್ದೇಶ. ಸುಮಾರು 2.3 ಲಕ್ಷ ಕೋಟಿಗಳಷ್ಟು ಹಣ ಈ ಮೀಸಲು ನಿಧಿಯಲ್ಲಿದೆ.

Recommended Video

ಮೋದಿ ಬಗ್ಗೆ ಕೇಜ್ರಿವಾಲ್ ಹೇಳಿದ ಮಾತು ಕೇಳಿ ಎಲ್ಲರೂ ಶಾಕ್..? | arvind kejriwal

ಸರ್ಕಾರಕ್ಕೆ 1.76 ಲಕ್ಷ ಕೋಟಿ ಹಣ ಆರ್‌ಬಿಐನಿಂದ ವರ್ಗಾವಣೆಸರ್ಕಾರಕ್ಕೆ 1.76 ಲಕ್ಷ ಕೋಟಿ ಹಣ ಆರ್‌ಬಿಐನಿಂದ ವರ್ಗಾವಣೆ

ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ 2018 ರ ಚುನಾವಣೇಗೂ ಮುನ್ನವೇ ಈ ಹಣವನ್ನು ಪಡೆಯುವ ಪ್ರಯತ್ನ ಮಾಡಿತ್ತು. ಆದರೆ ಬಿಜೆಪಿಯಿಂದ ನೇಮಕವಾದ ಅಂದಿನ ಆರ್‌ ಬಿ ಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರೇ ಇದನ್ನು ವಿರೋಧಿಸಿ ಗವರ್ನರ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಮೀಸಲು ನಿಧಿಯನ್ನು ಬಳಸಿಕೊಳ್ಳುವುದು ಸರಿಯೇ?

ಮೀಸಲು ನಿಧಿಯನ್ನು ಬಳಸಿಕೊಳ್ಳುವುದು ಸರಿಯೇ?

ಕೇಂದ್ರ ಸರಕಾರದ ಇಂದಿನ ಹಣಕಾಸು ಮಂತ್ರಿಗಳಾದ ನಿರ್ಮಲಾ ಸೀತಾರಾಮನ್‌ ಹಿಂದಿನ ಆರ್‌ ಬಿ ಐ ಗವರ್ನರ್‌ ಅವರ ನಿರ್ಣಯ ಸರಿಯಿಲ್ಲ, ಹಾಗೂ ಸರ್ಕಾರಕ್ಕೆ ಈ ಮೀಸಲು ನಿಧಿಯನ್ನು ಬಳಸಿಕೊಳ್ಳುವ ಎಲ್ಲಾ ರೀತಿಯ ಹಕ್ಕು ಇದೆ ಎಂದು ತಾವು ಮಂಡಿಸಿದ ಬಜೆಟ್‌ ನಲ್ಲಿನ ಕೊರತೆ ಮೊತ್ತಕ್ಕೆ ಸಮಾನವಾದ ಹಣವನ್ನು ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರೆಪೋ ದರ ಇಳಿಕೆ; ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ?ರೆಪೋ ದರ ಇಳಿಕೆ; ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ?

ನೋಟು ಅಮಾನ್ಯೀಕರಣದ ನೇರ ಪರಿಣಾಮ

ನೋಟು ಅಮಾನ್ಯೀಕರಣದ ನೇರ ಪರಿಣಾಮ

ಈ ವಿತ್ತೀಯ ಕೊರತೆ ಉಂಟಾಗಿದ್ದು 2018 ರಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೈಗೊಂಡ ನೋಟು ಅಮಾನ್ಯೀಕರಣದ ನೇರ ಪರಿಣಾಮ. ಭಾರತ ದೇಶದ ಶೇಕಡಾ 86 ರಷ್ಟು ಜನರು ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಹಾಗೂ ಅವರ ಪ್ರತಿನಿತ್ಯದ ಜೀವನ ನಡೆಯುವುದು ನಗದಿನ ಮೂಲಕ. ನೋಟು ಅಮಾನ್ಯೀಕರಣದಿಂದ ಈ ವಲಯಕ್ಕೆ ಹೆಚ್ಚಿನ ಹೊಡೆತ ಬಿದ್ದಿದ್ದು, ಕಳೆದ 40 ವರ್ಷದಲ್ಲಿಯೇ ಅತಿಹೆಚ್ಚು ನಿರುದ್ಯೋಗ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಈ ನಿರುದ್ಯೋಗ ಆಟೋಮೊಬೈಲ್‌ ಕೈಗಾರಿಕೆ, ರಿಯಲ್‌ ಎಸ್ಟೇಟ್‌, ಸರ್ವೀಸ್‌ ಇಂಡಸ್ಟ್ರಿ ಹಾಗೂ ಕೃಷ್ಟಿ ಸೇರಿದಂತೆ ಇನ್ನಿತರ ವಲಯಗಳಿಗೆ ದೊಡ್ಡ ಹೊಡೆತ ನೀಡಿದೆ.

ಭಾರತಕ್ಕೆ ಆಘಾತ! ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತಭಾರತಕ್ಕೆ ಆಘಾತ! ಜಿಡಿಪಿ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಕುಸಿತ

ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ

ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ

"ಆರ್‌ ಬಿ ಐ ನಿಂದ ಹಣ ವರ್ಗಾಯಿಸಿಕೊಂಡಿರುವ ಕೇಂದ್ರ ಸರಕಾರದ ಈ ಕ್ರಮ ಆರ್ಥಿಕ ಕುಸಿತದ ಅಂಚಿನಲ್ಲಿರುವ ದೇಶದ ಆರ್ಥಿಕತೆಗೆ ದೊಡ್ಡ ಹೊಡೆತ ನೀಡಿದೆ. ಆರ್ಥಿಕ ಕುಸಿತದ ವಾತಾವರಣದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡಲು ಪ್ರಯತ್ನಿಸಿದ ಕೇಂದ್ರ ಸರಕಾರದ ಆಘಾತಕಾರಿ ಕ್ರಮವಾಗಿದೆ. ಈ ಕ್ರಮದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ರೂಪಾಯಿ ಮೌಲ್ಯದ ಮೇಲೆ ನೇರ ಪರಿಣಾಮ ಬೀರಲಿದೆ. ಮುಂಬರುವ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಹೆಚ್ಚಳವಾಗಲಿದ್ದು, ದೇಶದ ಆರ್ಥಿಕ ಕುಸಿತವನ್ನು ಇನ್ನಷ್ಟು ತೀವ್ರಗೊಳಿಸಲಿದೆ" ಎಂದು ಶ್ರೀಪಾದ ರೇಣು ಹೇಳಿದರು.

2024ರ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಮೋದಿ ವಿಶ್ವಾಸ2024ರ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಮೋದಿ ವಿಶ್ವಾಸ

ಕೆಂಗಲ್ ಶ್ರೀಪಾದ ರೇಣು ಆರ್ಥಿಕ ತಜ್ಞರು ಹೌದು

ಕೆಂಗಲ್ ಶ್ರೀಪಾದ ರೇಣು ಆರ್ಥಿಕ ತಜ್ಞರು ಹೌದು

ಕರ್ನಾಟಕ ಕಾಂಗ್ರೆಸ್ ಪ್ರದೇಶ ಸಮಿತಿ ವಕ್ತಾರರಾದ ಕೆಂಗಲ್ ಶ್ರೀಪಾದ ರೇಣು ಆರ್ಥಿಕ ತಜ್ಞರು ಹೌದು. ಬೆಂಗಳೂರು ವಿಶ್ವವಿದ್ಯಾಲಯ ಯು. ವಿ.ಸಿ.ಇಯಿಂದ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದೆರ್. ಯುನೈಟೆಡ್ ಸ್ಟೇಟ್ ಆಫ್ ಅಮೆರಿಕದ ಸೆಂಟ್ರಲ್ ಒಕ್ಲಾಹಾಮಾ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಆರ್ಥಿಕತೆಯ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿ ಎಂಬಿಎ(Finance) ಗಳಿಸಿದ್ದಾರೆ.

English summary
Economic Analyst & KPCC Spokes person Kengal Sripada Renu racted on RBI Issue and said RBI surplus fund transfer will lead to Economic economic slowdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X