ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 01ರಿಂದ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಅಗ್ಗ

|
Google Oneindia Kannada News

ಬೆಂಗಳೂರು, ಜುಲೈ 01: ಭಾರತೀಯ ರಿಸರ್ವ್ ಬ್ಯಾಂಕ್ ಸಭೆಯಲ್ಲಿ ಇತ್ತೀಚೆಗೆ ಸಿಕ್ಕಿದ್ದ ಶುಭ ಸುದ್ದಿ ಇಂದಿನಿಂದ ಜಾರಿಗೆ ಬರಲಿದೆ. ಬ್ಯಾಂಕ್ ಖಾತೆಗಳಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮೇಲಿದ್ದ ಶುಲ್ಕವನ್ನು ಕಡಿತಗೊಳಿಸಲು ಆರ್ ಬಿಐ ನಿರ್ಧರಿಸಿತ್ತು.

ಹೀಗಾಗಿ, ಜುಲೈ 01ರಿಂದ ಆರ್ ಟಿ ಜಿಎಸ್ ಹಾಗೂ ಎನ್ ಇಎಫ್ ಟಿ ಸೌಲಭ್ಯಗಳು ಅಗ್ಗವಾಗಲಿವೆ. ಇದರಿಂದ ಡಿಜಿಟಲ್ ಹಣ ವರ್ಗಾವಣೆ ಹೆಚ್ಚಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

RBI scraps charges RTGS, NEFT transfers set to get cheaper

ಆರ್‌ಟಿಜಿಎಸ್ ಹಾಗೂ ನೆಫ್ಟ್ ವರ್ಗಾವಣೆಯ ಮೇಲಿನ ಶುಲ್ಕಗಳನ್ನು ತೆಗೆದುಹಾಕಲು ಆರ್‌ಬಿಐ ಜೂನ್ 02ರಂದು ನಡೆದ ಸಭೆಯಲ್ಲಿ ನಿರ್ಧರಿಸಿತ್ತು. ಬ್ಯಾಂಕುಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವಂತೆ ಸೂಚಿಸಲಾಗಿತ್ತು. ಇದರಂತೆ, NEFT ಹಾಗೂ RTGS ಸೇವೆಗಳ ಮೇಲಿನ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಆರ್‌ಬಿಐ ರೆಪೋ ದರ ಕಡಿತ, ಬ್ಯಾಂಕ್ ಸಾಲ ಅಗ್ಗ, ಜತೆಗೆ ಮತ್ತಷ್ಟು ಕೊಡುಗೆಆರ್‌ಬಿಐ ರೆಪೋ ದರ ಕಡಿತ, ಬ್ಯಾಂಕ್ ಸಾಲ ಅಗ್ಗ, ಜತೆಗೆ ಮತ್ತಷ್ಟು ಕೊಡುಗೆ

ಎಟಿಎಂ ಬಳಕೆಯ ಶುಲ್ಕ ಹಾಗೂ ಹಣ ಕಡಿತದ ಸಂಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಲು ಭಾರತೀಯ ಬ್ಯಾಂಕ್‌ಗಳ ಸಂಸ್ಥೆಯ (ಐಬಿಎ) ಸಿಇಒ ವಿಜಿ ಕೃಷ್ಣನ್ ಅಧ್ಯಕ್ಷತೆಯಲ್ಲಿ ಎಲ್ಲ ಪಾಲುದಾರರನ್ನು ಒಳಗೊಂಡ ಸಮಿತಿ ರಚಿಸಲು ಆರ್‌ಬಿಐ ನಿರ್ಧರಿಸಿದೆ.

National Electronic funds transfer(NEFT) ಸೌಲಭ್ಯ ಬಳಸಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ಮೂಲಕ 2 ಲಕ್ಷ ರೂ.ಗಳ ವರೆಗೆ ಹಾಗೂ real time gross settlement (RTGS) ಮೂಲಕ 2 ಲಕ್ಷಕ್ಕಿಂತ ಅಧಿಕ ಮೊತ್ತವನ್ನು ವರ್ಗಾಯಿಸಬಹುದಾಗಿತ್ತು.

NEFT ಸೌಲಭ್ಯ ಬಳಸಿದರೆ 1 ರಿಂದ 5 ರೂ. ಗಳವರೆಗೆ ಶುಲ್ಕ ಹಾಗೂ RTGS ಬಳಸಿದರೆ 5 ರಿಂದ 50 ರೂ.ಗಳವರೆಗೆ ಶುಲ್ಕವನ್ನು ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ ಬಿಐ ವಿಧಿಸುತ್ತಿದೆ.

English summary
Fund transfer through RTGS and NEFT systems is set to become cheaper from Monday after the Reserve Bank of India decided it will not impose any charges on such transactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X