ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐ ರೆಪೋ ದರ ಕಡಿತ, ಬ್ಯಾಂಕ್ ಸಾಲ ಅಗ್ಗ, ಜತೆಗೆ ಮತ್ತಷ್ಟು ಕೊಡುಗೆ

|
Google Oneindia Kannada News

ನವದೆಹಲಿ, ಜೂನ್ 6: ಭಾರತೀಯ ರಿಸರ್ವ್ ಬ್ಯಾಂಕ್ ರಿಪೋ ದರದಲ್ಲಿ 25 ಬೇಸಿಕ್ ಅಂಕಗಳಷ್ಟು ಕಡಿತ ಮಾಡಿದೆ. ಶೇ 6ರಷ್ಟಿದ್ದ ರೆಪೋ ದರವನ್ನು ಶೇ 5.75ಕ್ಕೆ ತಗ್ಗಿಸಲಾಗಿದೆ. ಹಾಗೆಯೇ ರಿವರ್ಸ್ ರೆಪೋ ದರವನ್ನು ಶೇ 5.50ಕ್ಕೆ ಮತ್ತು ಬ್ಯಾಂಕ್ ದರವನ್ನು ಶೇ 6ಕ್ಕೆ ಹೊಂದಾಣಿಕೆ ಮಾಡಲಾಗಿದೆ.

ಹಾಗೆಯೇ ಈ ಹಿಂದೆ ಅಂದಾಜಿಸಲಾಗಿದ್ದ ಜಿಡಿಪಿ ಬೆಳವಣಿಗೆ ದರವನ್ನೂ ಕಡಿಮೆ ಮಾಡಲಾಗಿದೆ. ಈ ಮೊದಲು ಜಿಡಿಪಿ ಬೆಳವಣಿಗೆ ಶೇ 7.2ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು. ಈಗ ಶೇ 7ರಷ್ಟು ಜಿಡಿಪಿ ಬೆಳವಣಿಗೆ ಅಂದಾಜಿಸಲಾಗಿದೆ.

 ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ 20 ರೂ ಮುಖಬೆಲೆಯ ಹೊಸ ನೋಟು ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ 20 ರೂ ಮುಖಬೆಲೆಯ ಹೊಸ ನೋಟು

2019-20ರ ಅವಧಿಯ ಮೊದಲಾರ್ಧದಲ್ಲಿ ಹಣದುಬ್ಬರದ ದರವನ್ನು ಶೇ 3.0-3.1ರಷ್ಟು ಅಂದಾಜಿಸಲಾಗಿದ್ದು, ಹಣಕಾಸು ಸಾಲಿನ ಎರಡನೆಯ ಅವಧಿಯಲ್ಲಿ ಶೇ 3.4-3.7ರವರೆಗೆ ಅಂದಾಜು ಮಾಡಲಾಗಿದೆ.

RBI repo rates cut down by 25 basic points

ಇದಲ್ಲದೆ ಆರ್‌ಬಿಐ ಗ್ರಾಹಕರಿಗೆ ಮತ್ತೊಂದು ಕೊಡುಗೆ ನೀಡಿದೆ. ಆರ್‌ಟಿಜಿಎಸ್ ಹಾಗೂ ನೆಫ್ಟ್ ವರ್ಗಾವಣೆಯ ಮೇಲಿನ ಶುಲ್ಕಗಳನ್ನು ತೆಗೆದುಹಾಕಲು ಆರ್‌ಬಿಐ ನಿರ್ಧರಿಸಿದೆ. ಬ್ಯಾಂಕುಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವಂತೆ ಸೂಚಿಸಲಾಗಿದೆ.

ಇತಿಹಾಸದಲ್ಲೇ ಅತ್ಯಧಿಕ ವಹಿವಾಟು ನಡೆಸಿದ ಎಚ್ಎಎಲ್ಇತಿಹಾಸದಲ್ಲೇ ಅತ್ಯಧಿಕ ವಹಿವಾಟು ನಡೆಸಿದ ಎಚ್ಎಎಲ್

ಎಟಿಎಂ ಬಳಕೆಯ ಶುಲ್ಕ ಹಾಗೂ ಹಣ ಕಡಿತದ ಸಂಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಲು ಭಾರತೀಯ ಬ್ಯಾಂಕ್‌ಗಳ ಸಂಸ್ಥೆಯ (ಐಬಿಎ) ಸಿಇಒ ಅಧ್ಯಕ್ಷತೆಯಲ್ಲಿ ಎಲ್ಲ ಪಾಲುದಾರರನ್ನು ಒಳಗೊಂಡ ಸಮಿತಿ ರಚಿಸಲು ಆರ್‌ಬಿಐ ನಿರ್ಧರಿಸಿದೆ. ತನ್ನ ಮೊದಲ ಸಭೆ ನಡೆಸಿದ ಎರಡು ತಿಂಗಳ ಒಳಗೆ ಸಮಿತಿ ತನ್ನ ಶಿಫಾರಸುಗಳನ್ನು ಸಲ್ಲಿಕೆ ಮಾಡಲಿದೆ.

2019ರ ಸಾಲಿನಲ್ಲಿ ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿರುವುದು ಇದು ಸತತ ಮೂರನೆ ಬಾರಿ. ದೇಶದ ಆರ್ಥಿಕ ಬೆಳವಣಿಗೆಗೆ ಆಮ್ಲಜನಕ ನೀಡಲು ಅರ್‌ಬಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಆರ್‌ಬಿಐನ ನಿರ್ಧಾರದಿಂದ ಬ್ಯಾಂಕ್ ಸಾಲಗಳು ಅಗ್ಗವಾಗುವ ನಿರೀಕ್ಷೆಯಿದೆ.

English summary
The RBI has cuts repo rate by 25 basic points. It will be 5.75%, earlier it was 6%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X