ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರ ಇಳಿಕೆ: ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ ?

By Mahesh
|
Google Oneindia Kannada News

ಮುಂಬೈ, ಜೂ. 02: ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ಆರ್ ಬಿಐ ಗವರ್ನರ್ ರಘುರಾಮ್ ಜಿ ರಾಜನ್ ಅವರು ಹೊಸ ಹಣಕಾಸು ನೀತಿಯನ್ನು ಮಂಗಳವಾರ ಪ್ರಕಟಿಸಿದ್ದಾರೆ. ಆರ್ ಬಿಐ ಬಡ್ಡಿದರ 25 ಅಂಶಗಳಷ್ಟು ಇಳಿಕೆ ಸ್ಥಿರವಾಗಿದ್ದು, ಗೃಹಸಾಲ, ವಾಹನ ಸಾಲ ಕಡಿಮೆ ಮಾಡುವಂತೆ ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ.

ಈ ಹಿಂದೆ ಶೇ 8ರಷ್ಟಿದ್ದ ರೆಪೋ ದರದಲ್ಲಿ 25 ಮೂಲಾಂಶ (bps) ತಗ್ಗಿಸಿ ಶೇ 7.75ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಶೇ 7.25ಕ್ಕೆ ಇಳಿಸಲಾಗಿದೆ. ಈ ವರ್ಷ ಮೂರನೇ ಬಾರಿಗೆ ರೆಪೋ ದರದಲ್ಲಿ ಇಳಿಕೆ ಕಂಡು ಬಂದಿದೆ. [ಸಾಲ ಮಾಡಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ]

ನಗದು ಮೀಸಲು ಅನುಪಾತ (ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ ಯಾವುದೇ ಬದಲಾವಣೆ ಮಾಡಿಲ್ಲ. ಅದರೆ, ಈಗ ಸಿಆರ್ ಅರ್ ದರ 50 ಮೂಲಾಂಶ ದರದಂತೆ ಇಳಿಕೆಯಾಗಲಿದೆ ಎಂಬ ನಿರೀಕ್ಷೆಯೂ ಇದೆ. [ಆರ್ ಬಿಐ ನೀತಿ ಪ್ರಕಟ: ಬ್ಯಾಂಕಿಂಗ್ ಷೇರುಗಳು ಕುಸಿತ]

RBI reduces repo rate by 25 basis points, EMIs likely to fall

ರಿವರ್ಸ್ ರೆಪೋ ದರ ಎಲ್ ಎಎಫ್ (ಏನಿದು?) ನಂತೆ ಶೇ 6.25ಕ್ಕೆ ಸರಿ ಹೊಂದಿಸಲಾಗಿದೆ. ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ(ಎಂಎಸ್ ಎಫ್) ಹಾಗೂ ಬ್ಯಾಂಕ್ ದರ ಶೇ 8.25 ನಷ್ಟಿದೆ. ಏಪ್ರಿಲ್ ನಲ್ಲಿ ಹೋಲ್ ಸೇಲ್ ದರ ಪಟ್ಟಿ ಆಧಾರದಲ್ಲಿ ಹಣದುಬ್ಬರ ಮೈನಸ್ 2.65%ನಷ್ಟಿದ್ದು, ಇನ್ನೂ ಮುಂದುವರೆಯಲಿದೆ.

ಬ್ಯಾಂಕುಗಳ ಗೃಹ ಹಾಗೂ ಕಾರು ಸಾಲ ಕೈಗುಟುಕುವಂತಾಗಲಿದೆ. ಆದರೆ, ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಬ್ಯಾಂಕ್ ಗಳು ಸಾಲ ಬಡ್ಡಿದರ ಬಗ್ಗೆ ಯಾವುದೇ ಪ್ರತಿಕ್ರಿಯೆ ತಕ್ಷಣಕ್ಕೆ ನೀಡಿಲ್ಲ. [ಮನೆಸಾಲ, ವಾಹನ ಸಾಲ, ಆಸಾಲ ಈಸಾಲದ ಬಡ್ಡಿ ಇಳಿಕೆ]

ಆರ್ ಬಿಐ ರೆಪೋ ದರ ಬಡ್ಡಿದರ ಇಳಿಕೆ ಮಾಡಿದ ಕೂಡಲೇ ಬ್ಯಾಂಕ್ ಗಳು ವಿವಿಧ ಸಾಲಕ್ಕೆ ನೀಡಿದ ಬಡ್ಡಿದರ ಇಳಿಕೆ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಆದರೆ, ಕ್ರೆಡಿಟ್ ಆಫ್ ಟೇಕ್ ಪ್ರಬಲವಾಗಿಲ್ಲದ ಕಾರಣ ಬ್ಯಾಂಕುಗಳು ಅನಿವಾರ್ಯವಾಗಿ ಬಡ್ಡಿ ದರ ಇಳಿಕೆ ಮಾಡಿ ಗ್ರಾಹಕರನ್ನು ಆಕರ್ಷಿಸಲು ತೊಡಗಿವೆ. [ಯಾವ ಯಾವ ಬ್ಯಾಂಕಿನಿಂದ ಇಳಿಕೆ]

ಸಾಲದ ಮೇಲಿನ ಬಡ್ಡಿದರ ಇಳಿಕೆಯಿಂದಾಗಿ ಬ್ಯಾಂಕಿನಿಂದ ಸಾಲ ಪಡೆಯುವವರಿಗೆ ಹಾಗೂ ಇಎಂಐ ಬಯಸುವವರಿಗೆ ಹಿತಕರ ಸುದ್ದಿ ಸಿಕ್ಕಿದೆ. ಅದರೆ, ಸಣ್ಣ ಮಟ್ಟದ ಹೂಡಿಕೆ ಹಾಗೂ ಪಿಂಚಣಿದಾರರಿಗೆ ಠೇವಣಿ ದರ ಹೆಚ್ಚಳದಿಂದ ಭಾರಿ ತೊಂದರೆಯಾಗುವ ಸಾಧ್ಯತೆಯಿದೆ.

ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ. (ಒನ್ ಇಂಡಿಯಾ ಸುದ್ದಿ)

English summary
RBI Governor Raghuram Rajan on Tuesday(Jun.02) cut the policy repo rate by 25 basis points from 7.5 per cent to 7.25 per cent with immediate effect. Rajan has left the CRR of scheduled banks unchanged at 4.0 per cent of net demand and time liabilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X