ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ -ಕೆವೈಸಿ ಪ್ರಕ್ರಿಯೆಗೂ ಡಿಜಿ ಲಾಕರ್ ಬಳಸಲು ಆರ್ ಬಿಐ ಅನುಮತಿ

|
Google Oneindia Kannada News

ಬೆಂಗಳೂರು, ಜನವರಿ 13: ವಿವಿಧ ದಾಖಲೆಗಳನ್ನು ಆನ್ ಲೈನ್ ನಲ್ಲಿ ಸುರಕ್ಷಿತವಾಗಿ ಹೊಂದಬಹುದಾದ ಡಿಜಿ ಲಾಕರ್ ಗಳನ್ನು ಇನ್ಮುಂದೆ ಇ -ಕೆವೈಸಿ ಪ್ರಕ್ರಿಯೆಯಲ್ಲೂ ಬಳಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ.

ನಾಗರಿಕರು ತಮ್ಮ ಡಿಜಿಲಾಕರ್ ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಡಿಎಲ್ ಸೇರಿದಂತೆ ಕೆಲವು ದಾಖಲೆಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸರ್ಕಾರ ಅವಕಾಶ ನೀಡಿರುವುದು ಗೊತ್ತಿರಬಹುದು. ರೈಲ್ವೆ ಆನ್ ಲೈನ್ ಗುರುತಿನ ಚೀಟಿ ತೋರಿಸಬೇಕಾದ ಸಂದರ್ಭದಲ್ಲಿ ಡಿಜಿ ಲಾಕರ್ ನಲ್ಲಿರುವ ದಾಖಲೆಯನ್ನು ತೋರಿಸಬಹುದಾಗಿದೆ. ಡಿಜಿ ಲಾಕರ್‌ನಲ್ಲಿರುವ ಆಧಾರ್, ಡ್ರೈವಿಂಗ್ ಲೈಸೆನ್ಸ್ ಚೀಟಿಗಳನ್ನು ತೋರಿಸಿದರೆ ಅದನ್ನು ಪರಿಗಣಿಸುವಂತೆ ರೈಲ್ವೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ರೈಲು ಪ್ರಯಾಣದ ವೇಳೆ ಡಿಜಿ ಲಾಕರ್‌ ದಾಖಲೆ ತೋರಿಸಿರೈಲು ಪ್ರಯಾಣದ ವೇಳೆ ಡಿಜಿ ಲಾಕರ್‌ ದಾಖಲೆ ತೋರಿಸಿ

ಈಗ ಬ್ಯಾಂಕಿಂಗ್ ವ್ಯವಹಾರದಲ್ಲಿ ಗುರುತು, ವಿಳಾಸ ಮೊದಲಾದ ಮಾಹಿತಿ ದೃಢೀಕರಿಸುವ ಇ -ಕೆವೈಸಿ ಪ್ರಕ್ರಿಯೆ ಸಂದರ್ಭದಲ್ಲಿ ಡಿಜಿಲಾಕರ್ ಡಾಕ್ಯುಮೆಂಟ್ ಗಳನ್ನು ಸ್ವೀಕರಿಸಬಹುದಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.

RBI recognizes DigiLocker Documents For KYC

ಡಿಜಿಟಲ್ ಲಾಕರ್‌ಗೂ ಬಂತು ಆಧಾರ್ ಕಾರ್ಡ್ ಲಾಗಿನ್ಡಿಜಿಟಲ್ ಲಾಕರ್‌ಗೂ ಬಂತು ಆಧಾರ್ ಕಾರ್ಡ್ ಲಾಗಿನ್

ಡಿಜಿಲಾಕರ್ ನಲ್ಲಿರುವ ಡಾಕ್ಯುಮೆಂಟ್ ಗಳನ್ನು ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಗಳ ಇ-ಕೆವೈಸಿ ಪ್ರಕ್ರಿಯೆಗೆ ಬಳಸಲು ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಅವಕಾಶ ಕಲ್ಪಿಸಲಾಗಿದೆ.

English summary
Reserve Bank of India (RBI) recognizes Digital Locker platform & Digital Documents. Delhi Reserve Bank of India (RBI) has recognized digital locker platforms and digital documents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X