ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಟು ಮುದ್ರಣ ಹೆಚ್ಚಳ: ಕ್ಯಾಶ್‌ಲೆಸ್ ಇಂಡಿಯಾ ಕಥೆಯೇನು?

|
Google Oneindia Kannada News

ನವದೆಹಲಿ, ಆಗಸ್ಟ್ 30: ಅಪನಗದೀಕರಣದ ಬಳಿಕ ಹಿಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೋಟುಗಳನ್ನು ಮುದ್ರಿಸಿದೆ.

ಡಿಜಿಟಲ್ ಇಂಡಿಯಾದ ಗುರಿಯಲ್ಲಿ 'ನಗದು ರಹಿತ' ಭಾರತದ ನಿರ್ಮಾಣದ ಮೋದಿ ಸರ್ಕಾರದ ಉದ್ದೇಶಕ್ಕೆ ವ್ಯತಿರಿಕ್ತವಾದ ಸನ್ನಿವೇಶ ಕಂಡುಬಂದಿದೆ.

ಆರ್‌ಬಿಐ ಮೀಸಲು ನಿಧಿ 1.96 ಲಕ್ಷ ಕೋಟಿ ರೂಪಾಯಿಗೆ ಕುಸಿತಆರ್‌ಬಿಐ ಮೀಸಲು ನಿಧಿ 1.96 ಲಕ್ಷ ಕೋಟಿ ರೂಪಾಯಿಗೆ ಕುಸಿತ

ಅಪನಗದೀಪಕರಣ ಬಳಿಕದ ಎರಡು ವರ್ಷಗಳಲ್ಲಿ ಹೊಸ ನೋಟ್‌ಗಳ ಪ್ರಮಾಣ ಮತ್ತು ಮುದ್ರಣ ಮೌಲ್ಯಗಳಲ್ಲಿ ಗಣನೀಯ ಹೆಚ್ಚಳವಾಗಿದೆ. 2016ರ ನವೆಂಬರ್ 8ರಂದು ಅಪನಗದೀಕರಣದ ಘೋಷಣೆ ಮಾಡಲಾಗಿತ್ತು. ಅದಕ್ಕೂ ಹಿಂದಿನ ಸನ್ನಿವೇಶಕ್ಕೆ ಹೋಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಲಾಗಿದೆ.

RBI Printing More Notes Than Pre Demonetisation

ಎರಡು ನೋಟು ಮುದ್ರಣ ಕಂಪೆನಿಗಳಾದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿ (ಬಿಆರ್‌ಬಿಎನ್‌ಎಂಪಿಎಲ್) ಮತ್ತು ಸೆಕ್ಯುಟಿರಿ & ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ. (ಎಸ್‌ಪಿಎಂಸಿಐಎಲ್) 2018-19ನೇ ಸಾಲಿನಲ್ಲಿ 2,919.1 ಕೋಟಿ ನೋಟುಗಳನ್ನು ಮುದ್ರಿಸಿವೆ. ಇದು 2016-17 ಹಾಗೂ ಅದಕ್ಕೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಧಿಕ ಸಂಖ್ಯೆಯ ನೋಟುಗಳ ಪೂರೈಕೆಯಾಗಿದೆ.

2016-17ನೇ ಸಾಲಿನಲ್ಲಿ 13.39 ಲಕ್ಷ ಕೋಟಿ ರೂ. ಒಟ್ಟುಮುಖಬೆಲೆಯ ಹೊಸ ನೋಟುಗಳನ್ನು ಪೂರೈಸಿದೆ. 2016-17ರಲ್ಲಿ ಇದು 7.26 ಲಕ್ಷ ಕೋಟಿ ರೂ. ಇತ್ತು.

2000 ರುಪಾಯಿ ನೋಟುಗಳ ಚಲಾವಣೆ ಪ್ರಮಾಣದಲ್ಲಿ ಇಳಿಕೆ2000 ರುಪಾಯಿ ನೋಟುಗಳ ಚಲಾವಣೆ ಪ್ರಮಾಣದಲ್ಲಿ ಇಳಿಕೆ

ಈ ಎರಡೂ ಕಂಪೆನಿಗಳು ಪೂರೈಕೆ ಮಾಡುತ್ತಿರುವ ಹೊಸ ನೋಟುಗಳ ಮೌಲ್ಯ ಶೇ 16.1ರಷ್ಟು ಹೆಚ್ಚಾಗಿದೆ. ಇದು ಭಾರತದ ಜಿಡಿಪಿಯ ಶೇ 11.2ರಷ್ಟು ಹೆಚ್ಚು. ನೋಟು ಅಪನಗದೀಕರಣದ ಬಳಿಕ 2016-17ರಲ್ಲಿ ತನ್ನ ಆದಾಯ ಶೇ 23.56ರಷ್ಟು ಕುಸಿತವಾಗಿದ್ದರೆ, ವೆಚ್ಚ ಶೇ 107.84ರಷ್ಟು ಅಧಿಕವಾಗಿತ್ತು ಎಂದು ಆರ್‌ಬಿಐ ತಿಳಿಸಿತ್ತು.

2000 ರೂ. ಮುಖಬೆಲೆಯ ನೋಟುಗಳ ಚಲಾವಣೆಯ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆರ್‌ಬಿಐ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸುತ್ತಿದೆ. ನಗದು ರಹಿತ ಭಾರತದ ಕನಸು ಬಿತ್ತಿರುವ ಮೋದಿ ಸರ್ಕಾರದ ಆಶಯ ಇಲ್ಲಿ ನೆರವೇರುವ ಸೂಚನೆ ಕಾಣಿಸುತ್ತಿಲ್ಲ. ಹೆಚ್ಚಿನ ಕಡೆ ಡಿಜಿಟಲ್ ವಹಿವಾಟು ನಡೆಯುತ್ತಿದ್ದರೂ ಅಧಿಕ ಪ್ರಮಾಣದಲ್ಲಿ ನೋಟುಗಳು ಚಲಾವಣೆಗೆ ಬರುತ್ತಿವೆ.

English summary
Reports said Reserve Bank of India is printing more number of currency notes than pre demonetisation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X