ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮುಂದಿನ ವಾರ ಮತ್ತೆ ರೆಪೋ ದರ ಹೆಚ್ಚಿಸುತ್ತಾ ಆರ್‌ಬಿಐ?

|
Google Oneindia Kannada News

ನವದೆಹಲಿ, ಜೂನ್ 3: ಭಾರತದಲ್ಲಿ ಅಗತ್ಯ ವಸ್ತುಗಳು, ಆಹಾರ ಮತ್ತು ಇಂಧನ ಬೆಲೆಗಳು ಏರಿಕೆ ಆಗುತ್ತಿರುವ ಹಿನ್ನೆಲೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಂದಿನ ವಾರ ನಡೆಯಲಿರುವ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಮತ್ತೆ ಶೇಕಡಾ 0.40 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ ರೆಪೋ ಏರಿಕೆ: ಭಾರತದಲ್ಲಿ ಗೃಹ, ಕಾರು, ವೈಯಕ್ತಿಕ ಸಾಲದ ಇಎಂಐ ಹೆಚ್ಚಳ

ಆರ್‌ಬಿಐನ ದರ ನಿಗದಿ ಸಮಿತಿಯು ಆಗಸ್ಟ್‌ನಲ್ಲಿ ಮುಂದಿನ ವಿಮರ್ಶೆಯಲ್ಲಿ ದರಗಳಲ್ಲಿ ಶೇ.0.35 ಹೆಚ್ಚಳದೊಂದಿಗೆ ಅದನ್ನು ಅನುಸರಿಸುತ್ತದೆ. ಇಲ್ಲದಿದ್ದರೆ ಮುಂದಿನ ವಾರದಲ್ಲಿ ಶೇ.0.50 ಶೇಕಡಾ ಹೆಚ್ಚಿಸುವ ಹಾಗೂ ಆಗಸ್ಟ್‌ನಲ್ಲಿ ಶೇ.0.25 ರಷ್ಟು ಹೆಚ್ಚಳವಾಗಲಿದೆ ಎಂದು ವರದಿಯಾಗಿದೆ.

RBI Policy Review Meet: Next Week Likely To Hike Repo Rate By 0.40%

ಕಳೆದ ಮೇ 4ರಂದು ಕೇಂದ್ರೀಯ ಬ್ಯಾಂಕ್ ಈಗಾಗಲೇ ರೆಪೊ ದರಗಳನ್ನು ಶೇಕಡಾ 0.40 ರಷ್ಟು ಹೆಚ್ಚಿಸಿದ್ದು ಆಗಿದೆ. ಮುಂಬರುವ ಹಣಕಾಸು ನೀತಿ ಸಮಿತಿಯ ಸಭೆಯಲ್ಲಿ ರೆಪೋ ದರವನ್ನು ಮತ್ತಷ್ಟು ಹೆಚ್ಚಿಸುವ ಆಲೋಚನೆಯಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಮೇ.4ರಂದು ರೆಪೋ ದರವನ್ನು ಹೆಚ್ಚಿಸಿದ್ದ ಆರ್‌ಬಿಐ:
ಭಾರತದಲ್ಲಿ ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ಅನಿರೀಕ್ಷಿತವಾಗಿ ರಿಸರ್ವ್ ಬ್ಯಾಂಕ್ ತನ್ನ ರೆಪೋ ದರದಲ್ಲಿ 40 ಮೂಲಾಂಕಗಳನ್ನು ಏರಿಕೆ ಮಾಡಿದೆ. ಆ ಮೂಲಕ ದೇಶದಲ್ಲಿ ರೆಪೋ ದರ 4.40ಕ್ಕೆ ಏರಿಕೆಯಾಗಿದೆ. ಇದು ವಿತ್ತೀಯ ನೀತಿ ಸಮಿತಿಯು (MPC) ರೆಪೊ ದರದಲ್ಲಿ ಅನಿರೀಕ್ಷಿತ ಹೆಚ್ಚಳ ಮಾಡಿದ ಮೊದಲ ನಿದರ್ಶನವಾಗಿದೆ. 2018ರ ಆಗಸ್ಟ್ ತಿಂಗಳ ನಂತರ ರೆಪೋ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿತ್ತು. ಆದರೆ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಬುಧವಾರ ದಿಢೀರ್ ಸುದ್ದಿಗೋಷ್ಠಿ ಕರೆದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರ ಹೆಚ್ಚಳದ ಬಗ್ಗೆ ಘೋಷಿಸಿದರು.

ರೆಪೋ ದರ ಎಂದರೇನು?:
'REPO' ಎಂದರೆ 'ಮರುಖರೀದಿ ಆಯ್ಕೆ' ಅಥವಾ 'ಮರುಖರೀದಿ ಒಪ್ಪಂದ'. ರೆಪೊ ದರವು ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುವ ದರವನ್ನು ಸೂಚಿಸುತ್ತದೆ. ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಆರ್‌ಬಿಐ ಪ್ರಮುಖ ಸಾಧನಗಳಲ್ಲಿ ರೆಪೋ ದರವೂ ಒಂದು ಎಂದು ಪರಿಗಣಿಸಲಾಗುತ್ತದೆ. ದೇಶದ ವಾಣಿಜ್ಯ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಪಡೆದುಕೊಳ್ಳುವ ಸಾಲದ ಮೇಲೆ ವಿಧಿಸುವ ಬಡ್ಡಿದರವನ್ನೇ ರೆಪೋ ದರ ಎಂದು ಕರೆಯಲಾಗುತ್ತದೆ.

ರಿವರ್ಸ್ ರೆಪೋ ಎಂದರೇನು?:
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ವಾಣಿಜ್ಯ ಹಾಗೂ ಇತರೆ ಬ್ಯಾಂಕುಗಳು ತಾವು ಇರಿಸುವ ಹಣದ ಮೇಲೆ ಪಡೆಯುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ.

English summary
RBI Policy Review Meet: Next Week Likely To Hike Repo Rate By 0.40 per cent. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X