ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್‌ಗಳಲ್ಲಿ ಪ್ರವರ್ತಕರು ಶೇ. 26ರಷ್ಟು ಷೇರುಗಳನ್ನು ಹೊಂದಲು ಸಿಗಲಿದೆ ಅವಕಾಶ?

|
Google Oneindia Kannada News

ನವದೆಹಲಿ, ನವೆಂಬರ್ 21: ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು(Promoters) ಗರಿಷ್ಠ ಶೇಕಡಾ 26ರವರೆಗೆ ಷೇರುಗಳನ್ನು ಹೊಂದಲು ಅವಕಾಶ ಕೊಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಆಂತರಿಕ ಕಾರ್ಯಕಾರಿ ಸಮಿತಿಯೊಂದು ಪ್ರಸ್ತಾವ ಸಲ್ಲಿಸಿದೆ. ಇದರ ಜೊತೆಗೆ ದೊಡ್ಡ ಬ್ಯಾಂಕೇತರ ಹಣಕಾಸು ಕಂಪನಿಗಳನ್ನು(ಎನ್‌ಬಿಎಫ್‌ಸಿ) ಬ್ಯಾಂಕುಗಳಾಗಿ ಪರಿವರ್ತಿಸಲು ಸಮಿತಿ ಸೂಚಿಸಿದೆ.

ಈಗಿರುವ ನಿಯಮಗಳ ಪ್ರಕಾರ ಖಾಸಗಿ ಬ್ಯಾಂಕುಗಳಲ್ಲಿ ಪ್ರವರ್ತಕರು ಶೇ.15ರಷ್ಟು ಷೇರುಗಳನ್ನು ಹೊಂದಬಹುದು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಲು ಅವಕಾಶವಿಲ್ಲ. ಆದರೆ ಈಗಿರುವ ಮಿತಿಯನ್ನು ಮುಂದಿನ 15 ವರ್ಷಗಳ ಅವಧಿಯಲ್ಲಿ ಶೇ. 26ಕ್ಕೆ ಹೆಚ್ಚಿಸಬಹುದು ಎಂದು ಸಮಿತಿಯು ಸಲಹೆಯನ್ನು ನೀಡಿದೆ.

HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು EMI ಆಗಿ ಪರಿವರ್ತಿಸುವುದು ಹೇಗೆ?HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು EMI ಆಗಿ ಪರಿವರ್ತಿಸುವುದು ಹೇಗೆ?

ಆರ್‌ಬಿಐ ಶುಕ್ರವಾರ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿದ್ದು, ದೇಶದ ಖಾಸಗಿ ಬ್ಯಾಂಕುಗಳ ಮಾಲೀಕತ್ವದ ವಿಚಾರವಾಗಿ ಈಗಿರುವ ನಿಯಮಗಳು ಹೇಗಿದೆ ಎಂದು ಪರಿಶೀಲಿಸಲು ಜೂನ್‌ನಲ್ಲಿ ಆರ್‌ಬಿಐ ಈ ಸಮಿತಿಯನ್ನು ರಚಿಸಿತ್ತು.

RBI panel proposes to raise large corporate houses as promoters of banks

ಇನ್ನು ಚೆನ್ನಾಗಿ ನಡೆಯುತ್ತಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆಸ್ತಿಯ ಒಟ್ಟು ಮೊತ್ತವು 50 ಸಾವಿರ ಕೋಟಿಗಿಂತ ಹೆಚ್ಚಿದ್ದರೆ, ಅವುಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಬಹುದು ಎಂಬ ಸಲಹೆಯನ್ನು ಕೊಟ್ಟಿದೆ. ಕಾರ್ಪೋರೇಟ್ ಕಂಪನಿಗಳು ನಡೆಸುತ್ತಿರುವ ಎನ್‌ಬಿಎಫ್‌ಸಿಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಪರಿಗಣಿಸಬಹುದು. ಆದರೆ ಅವು ಕನಿಷ್ಠ 10 ವರ್ಷಗಳಿಂದ ವಹಿವಾಟು ನಡೆಸುತ್ತಿರಬೇಕು ಎಂದಿದೆ.

English summary
An Internal Reserve bank of india (RBI) panel has proposed that Rising the cap on promoters stake in private banks to 26 Percent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X