ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐ ಹಣಕಾಸು ನೀತಿ: ರೆಪೋ, ರಿವರ್ಸ್ ರೆಪೋ ದರದಲ್ಲಿ ಬದಲಾವಣೆ ಇಲ್ಲ

|
Google Oneindia Kannada News

ನವದೆಹಲಿ, ಜೂನ್ 04: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಹಣಕಾಸು ನೀತಿಯಲ್ಲಿ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆರ್‌ಬಿಐ ದರ ನಿಗದಿ ಸಮಿತಿ(ಎಂಪಿಸಿ) ಮೂರು ದಿನಗಳ ಚರ್ಚೆಯ ಬಳಿಕ ಇಂದು ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ಕೋವಿಡ್ 19 ಎರಡನೇ ಅಲೆಯ ಪ್ರಭಾವದ ಮೇಲಿನ ಅನಿಶ್ಚಿತತೆಯ ಪ್ರಭಾವದಿಂದ ಬ್ಯಾಂಕ್ ಮಾನದಂಡದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಶುಕ್ರವಾರ ತನ್ನ ಹಣಕಾಸು ನೀತಿ ಪರಿಶೀಲನೆ ಮಾಡಿದ್ದು, ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಉಳಿಸಿಕೊಂಡಿದೆ.

RBI Monetary Policy 2021 Highlights And Key Decisions Taken

ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಂಡಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಇನ್ನು ಆರ್‌ಬಿಐ 2021-22ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯನ್ನು ಈ ಹಿಂದಿನ ಶೇಕಡಾ 10.5 ರಿಂದ ಶೇಕಡಾ 9.5ಕ್ಕೆ ತಗ್ಗಿಸಿದೆ.

ಕೋವಿಡ್-19 ಅನಿಶ್ಚಿತತೆ ಮತ್ತು ಹಣದುಬ್ಬರದ ಮೇಲಿನ ಆತಂಕಗಳ ನಡುವೆ ಆರ್‌ಬಿಐ ಶುಕ್ರವಾರ ಬಡ್ಡಿದರವನ್ನು ಬದಲಿಸಲಿಲ್ಲ. ಏಪ್ರಿಲ್ 2021 ರಲ್ಲಿ ನಡೆದ ಕೊನೆಯ ಎಂಪಿಸಿ ಸಭೆಯಲ್ಲಿ ರೆಪೋ, ರಿವರ್ಸ್‌ ರೆಪೋ ದರಗಳನ್ನು ಬದಲಿಸಲಿಲ್ಲ.

ಏಪ್ರಿಲ್ ತಿಂಗಳಿನಲ್ಲಿ ಎಂಪಿಸಿ ಸಭೆ ನಡೆದಿತ್ತು, ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಉಳಿಸಿಕೊಳ್ಳಲಾಗಿದೆ.ಇತ್ತೀಚಿನ ಹಣದುಬ್ಬರ ಕುಸಿತವು ತ್ವರಿತ ಬೆಳವಣಿಗೆಯನ್ನು ಮರಳಿ ಪಡೆದುಕೊಳ್ಳಲು ಅಗತ್ಯವಾದ ಎಲ್ಲ ಬಗೆಯ ಅನುಕೂಲಕರ ಬೆಂಬಲವನ್ನು ಒದಗಿಸಿದೆ. ವಿದೇಶಿ ವಿನಿಮಯ ಮೀಸಲು 600 ಬಿಲಿಯನ್ ಡಾಲರ್ ಗಡಿ ದಾಟುವ ನಿರೀಕ್ಷೆಯಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.

ಆರ್‌ಬಿಐ, ಸರ್ಕಾರದ 40,000 ಕೋಟಿ ರೂ ಭದ್ರತಾ ಠೇವಣಿಗಳನ್ನು ಜೂನ್ 17ರಂದು ಖರೀದಿಸಲಿದೆ. ಎರಡನೆಯ ತ್ರೈಮಾಸಿಕ ಅವಧಿಯಲ್ಲಿ 1.20 ಲಕ್ಷ ಕೋಟಿ ರೂ. ಸೆಕ್ಯುರಿಟಿಗಳನ್ನು ಖರೀದಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಏನಿದು ರಿವರ್ಸ್ ರೆಪೋ ದರ: ಬ್ಯಾಂಕ್‌ಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲ ಪಡೆದರೆ, ಅದರ ಮೇಲೆ ವಿಧಿಸುವ ಬಡ್ಡಿದರವನ್ನು ರಿವರ್ಸ್ ರೆಪೋ ದರ ಎಂದು ಕರೆಯಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಸಮತೋಲನೆ ಸಾಧಿಸಲು ರೆಪೋ ದರ ಪ್ರಮುಖ ಪಾತ್ರವಹಿಸುತ್ತದೆ.

ರೆಪೋ ದರ ಯಥಾಸ್ಥಿತಿ ಮುಂದುವರಿಕೆಯಿಂದ ಗೃಹ ಮತ್ತು ವಾಹನಗಳ ಮೇಲಿನ ಸಾಲದ ಇಎಂಐ ಇಳಿಕೆಯಾಗಲಿದೆ ಎಂಬುದು ಗ್ರಾಹಕರ ನಿರೀಕ್ಷೆಯಾಗಿದೆ.

English summary
The Reserve Bank of India's rate-setting panel, Monetary Policy Committee (MPC), will announced its decision today after three-day deliberations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X