• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಪೋ ದರದಲ್ಲಿ ಬದಲಾವಣೆ ಇಲ್ಲ, ಮತ್ತೇನು ಘೋಷಿಸಿದೆ ಆರ್‌ಬಿಐ?

|

ನವದೆಹಲಿ, ಏಪ್ರಿಲ್ 7: ಕೊರೊನಾ ಸಾಂಕ್ರಾಮಿಕದಿಂದಾಗಿ ಹದಗೆಟ್ಟಿರುವ ಭಾರತದ ಆರ್ಥಿಕ ಪರಿಸ್ಥಿತಿ, ಆರ್ಥಿಕ ದೃಷ್ಟಿಕೋನ, ಹಣದುಬ್ಬರ ಒತ್ತಡ, ಹಲವು ಪ್ಯಾಕೇಜ್ ಘೋಷಣೆ ನಡುವೆಯೂ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ತನ್ನ ನೀತಿ ಪರಿಶೀಲನೆ, ಮಾರ್ಗಸೂಚಿಯನ್ನು ಇಂದು ಪ್ರಕಟಿಸಿದೆ.

ರೆಪೋ ದರ, ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಳ್ಳಲಾಗಿದೆ, ರೆಪೋ ದರವನ್ನು ಈ ಹಿಂದಿನ ಶೇಕಡಾ 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ಶೇಕಡಾ 3.35ರಷ್ಟು ಇರಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೆಪೋ, ರಿವರ್ಸ್ ರೆಪೋ ದರ ಎಂದರೇನು? ಸಿಆರ್‌ಆರ್, ಎಸ್‌ಎಲ್‌ಆರ್‌ ನಡುವಿನ ವ್ಯತ್ಯಾಸ ಏನು?ರೆಪೋ, ರಿವರ್ಸ್ ರೆಪೋ ದರ ಎಂದರೇನು? ಸಿಆರ್‌ಆರ್, ಎಸ್‌ಎಲ್‌ಆರ್‌ ನಡುವಿನ ವ್ಯತ್ಯಾಸ ಏನು?

2021-22ರ ನೈಜ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 10.5ರಷ್ಟು ಉಳಿಸಿಕೊಳ್ಳಲಾಗಿದೆ. ನೈಜ ಜಿಡಿಪಿ ಬೆಳವಣಿಗೆ ನಕಾರಾತ್ಮಕವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಹಣದುಬ್ಬರ ಪ್ರಗತಿ ದರ ಅಂದಾಜು: 2021ರ ಆರ್ಥಿಕ ವರ್ಷ Q4ರಲ್ಲಿ ಶೇ 5; 2022ರ ಮೊದಲಾರ್ಧ ಆರ್ಥಿಕ ವರ್ಷದಲ್ಲಿ ಶೇ 5.2; Q3ರಲ್ಲಿ ಶೇ 4.4;Q4ರಲ್ಲಿ ಶೇ 5.1.

ಕೊವಿಡ್ 19 ಸೋಂಕು ಹೆಚ್ಚಳದಿಂದಾಗಿ ಆರ್ಥಿಕ ಪ್ರಗತಿ ಚೇತರಿಕೆ ಕುಂಠಿತವಾಗಿದೆ, ಕೊರೊನಾ ಲಸಿಕೆ ಅಭಿಯಾನ ಯಶಸ್ವಿಯೊಂದಿಗೆ ಭರವಸೆ ಮೂಡಬಹುದು ಎಂದು ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ NEFT, RGTS ಸೇವೆಯನ್ನು ಬ್ಯಾಂಕ್ ಅಲ್ಲದೆ ಇತರೆ ಹಣಕಾಸು ಸಂಸ್ಥೆಗಳಿಗೂ ವಿಸ್ತರಣೆ ಮಾಡಲಾಗಿದೆ. ಇದರಿಂದ ಫಿನ್ ಟೆಕ್, ಪೇಮೆಂಟ್ ಕಂಪನಿಗಳು ಈ ಸೇವೆ ಬಳಸಬಹುದು. ಪೇಮೆಂಟ್ ಬ್ಯಾಂಕ್ 2 ಲಕ್ಷ ರು ತನಕ ವೈಯಕ್ತಿಕ ಠೇವಣಿಯನ್ನು ಪಡೆಯಲು ಅನುಮತಿ ನೀಡಲಾಗಿದೆ.

TLTRO ಲಿಕ್ವಿಡಿಟಿ ಯೋಜನೆಯ ಗಡುವನ್ನು ಮಾರ್ಚ್ 31ರಿಂದ ಸೆಪ್ಟೆಂಬರ್ 30, 2021ಕ್ಕೆ ವಿಸ್ತರಿಸಲಾಗಿದೆ.

ನಬಾರ್ಡ್, ಎನ್ ಎಚ್ ಬಿ, ಎಸ್ ಐ ಡಿ ಬಿ ಐಗೆ ಆರ್ ಬಿ ಐನಿಂದ 50,000 ಕೋಟಿ ರು ಹೆಚ್ಚುವರಿ ಲಿಕ್ವಿಡಿಟಿ ಮೊತ್ತ ನೀಡಲಾಗುತ್ತಿದೆ.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ WMA ಮಿತಿಯನ್ನು ಶೇ 46 ರಷ್ಟು ಅಂದರೆ 47,010ಕೋಟಿ ರುಗೆ ಏರಿಸಲಾಗಿದೆ.

English summary
Read more about RBI monetary policy announcements: Highlights and key takeaways in Kannada. MPC has decided to keep the policy rate unchanged at 4%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X