ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರ ತಗ್ಗಿಸದ ಆರ್‌ಬಿಐ; ಹುಸಿಯಾದ ನಿರೀಕ್ಷೆ

|
Google Oneindia Kannada News

ನವದೆಹಲಿ, ಡಿಸೆಂಬರ್ 5; ತೀವ್ರ ಆರ್ಥಿಕ ಹಿಂಜರಿತದ ನಡುವೆ ಹಾಗೂ ಜಿಡಿಪಿ ಕುಸಿತದ ಹಿನ್ನೆಲೆಯಲ್ಲಿ ಆರ್ ಬಿ ಐ ಮತ್ತೆ ರೆಪೋ ದರವನ್ನು ಇಳಿಸುತ್ತದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್ ಬಿಐ) ಪ್ರಸಕ್ತ ವರ್ಷದ ತನ್ನ ಐದನೇ ಹಣಕಾಸು ನೀತಿಯನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ.

2010ರಿಂದ ಈಚೆಗೆ ಕನಿಷ್ಠ ಮಟ್ಟಕ್ಕೆ ರೆಪೋ ದರ; 5.15 ಪರ್ಸೆಂಟ್ ಗೆ ಇಳಿಕೆ2010ರಿಂದ ಈಚೆಗೆ ಕನಿಷ್ಠ ಮಟ್ಟಕ್ಕೆ ರೆಪೋ ದರ; 5.15 ಪರ್ಸೆಂಟ್ ಗೆ ಇಳಿಕೆ

ಕಳೆದ ಹಣಕಾಸು ನೀತಿಯಲ್ಲಿ ರೆಪೋ ದರವನ್ನು 5.15 % ಕಾಯ್ದುಕೊಳ್ಳಲಾಗಿತ್ತು. ಒಟ್ಟಾರೆಯಾಗಿ ಈ ವರ್ಷವು ಆರ್ ಬಿಐನಿಂದ 135 ಬಿಪಿಎಸ್ ಇಳಿಸಲಾಗಿದೆ.ಈಗ ಅದನ್ನೇ ಮುಂದುವರೆಸಲಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರೆಪೋ ದರವನ್ನು ಬದಲಾವಣೆ ಮಾಡಲಾಗಿಲ್ಲ ಎಂದು ಹೇಳಿದ್ದಾರೆ. ಶಕ್ತಿಕಾಂತ್ ದಾಸ್ ಅವರ ಈ ನಿರ್ಧಾರವನ್ನು ಹಣಕಾಸು ಸಮಿತಿಯ ಎಲ್ಲ ಸದಸ್ಯರು ಬೆಂಬಲಿಸಿದ್ದಾರೆ.

RBI keeps Repo Rate Unchanged at 5.15%; Lowers GDP Forecast From 6.1% to 5%

ಕಳೆದ ಸತತ ನಾಲ್ಕು ವರ್ಷಗಳಿಂದ ಕುಸಿಯುತ್ತಿರುವ ಜಿಡಿಪಿ ದರವನ್ನು ನಿಯಂತ್ರಿಸಲು ಈಗಾಗಲೇ ಐದು ಬಾರಿ ರೆಪೋ ದರವನ್ನು ಆರ್‌ಬಿಐ ಕಡಿಮೆ ಮಾಡುತ್ತಾ ಬಂದಿತ್ತು. ಆದರೆ, ಈ ಸಾರಿಯೂ ಕೂಡ ಕಡಿಮೆ ಮಾಡುತ್ತಾರೆ ಎನ್ನುವ ವಿಶ್ವಾಸವನ್ನು ಬ್ಯಾಂಕಿಂಗ್ ವಲಯ ವ್ಯಕ್ತಪಡಿಸಿತ್ತು. ಆದರೆ ಅಂತಹ ಯಾವುದೇ ತೀರ್ಮಾನವನ್ನು ಆರ್‌ಬಿಐ ತೆಗೆದುಕೊಂಡಿಲ್ಲ. ಸದ್ಯ ಜಿಡಿಪಿ ದರ ಕುಸಿದಿದ್ದು ಅದು 4.5 % ತಲುಪಿದೆ. ಮುಂದಿನ ಆರ್ಥಿಕ ವರ್ಷಕ್ಕೆ ಜಿಡಿಪಿ ಪ್ರಗತಿ ದರವನ್ನು ಶೇ 6.1ರಿಂದ ಶೇ5ಕ್ಕೆ ಇಳಿಸಲಾಗಿದೆ.
ಬ್ಯಾಂಕ್‌ ಗಳಿಗೆ ರಿಸರ್ವ್ ಬ್ಯಾಂಕ್ ನಿಂದ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರವನ್ನು ರೆಪೋ ದರ ಎನ್ನಲಾಗುತ್ತದೆ. ಇನ್ನು ಕಮರ್ಷಿಯಲ್ ಬ್ಯಾಂಕ್‌ಗಳಿಂದ ಪಡೆಯುವ ಸಾಲಕ್ಕೆ ರಿಸರ್ವ್ ಬ್ಯಾಂಕ್ ಪಾವತಿಸುವ ಬಡ್ಡಿ ದರವನ್ನು ರಿವರ್ಸ್‌ ರೆಪೋ ಎನ್ನಲಾಗುತ್ತದೆ.

READ IN ENGLISH

English summary
The Reserve Bank of India (RBI) on Thursday kept repo rate unchanged at 5.15 percent in its fifth bi-monthly monetary policy review of the financial year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X